Advertisement
“ಉದಯವಾಣಿ’ ವತಿಯಿಂದ ಉಡುಪಿಯ ಆರ್ಟಿಸ್ಟ್ ಫೋರಂ ಸಹಯೋಗದಲ್ಲಿ ರವಿವಾರ ನಗರದ ಕೊಡಿಯಾಲಬೈಲಿನ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಸಭಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ “ಉದಯವಾಣಿ ಚಿಣ್ಣರ ಬಣ್ಣ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
Related Articles
Advertisement
“ಉದಯವಾಣಿ’ ಸಂಪಾದಕ ಅರವಿಂದ ನಾವಡ ಅವರು ಮಾತನಾಡಿ, “ಚಿಣ್ಣರ ಬಣ್ಣ’ ಮಕ್ಕಳ ಸೃಜನಶೀಲತೆಯ ಒಂದು ಭಾಗ. ಚಿತ್ರಕಲೆ, ಸಂಗೀತ, ನೃತ್ಯ ಮೊದಲಾದ ಲಲಿತ ಕಲೆಗಳಿಂದ ತನ್ಮಯತೆ ಪಡೆಯಲು ಸಾಧ್ಯವಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿಯೂ ಉತ್ತಮ ಸ್ಥಾನ ಪಡೆಯಲು ನೆರವಾಗುತ್ತದೆ ಎಂದರು.
“ಉದಯವಾಣಿ’ ಮ್ಯಾಗಜೀನ್ಸ್ ಆ್ಯಂಡ್ ಸ್ಪೆಷಲ್ ಇನಿಶಿಯೇಟಿವ್ಸ್ನ ಉಪಾಧ್ಯಕ್ಷ ರಾಮಚಂದ್ರ ಮಿಜಾರ್ ಪ್ರಸ್ತಾವನೆಗೈದು, ಕಳೆದ 24 ವರ್ಷದಿಂದ ಉದಯವಾಣಿ “ಚಿಣ್ಣರ ಬಣ್ಣ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಮಕ್ಕಳನ್ನು ಸೇರಿಸಿ ಆಯೋಜಿಸುವ ರಾಜ್ಯದ ಅತ್ಯಂತ ದೊಡ್ಡ ಮತ್ತು ಪ್ರತಿಷ್ಠಿತ ಸ್ಪರ್ಧೆ “ಚಿಣ್ಣರ ಬಣ್ಣ’. ಹೆತ್ತವರು ನೀಡಿದ ಸಹಕಾರವೂ ಈ ಮಟ್ಟಕ್ಕೆ ಯಶಸ್ವಿಯಾಗಲು ಕಾರಣವಾಗಿದೆ ಎಂದರು.
ಹಾಂಗ್ಯೋ ಐಸ್ಕ್ರೀಂ ಸಂಸ್ಥೆಯ ಪ್ರತಿನಿಧಿ ರಚನಾ ಕಾಮತ್, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ಸುಜನ್ದಾಸ್ ಕುಡುಪು ಉಪಸ್ಥಿತರಿದ್ದರು.
ಉದಯವಾಣಿ ಸ್ಥಾನೀಯ ಸಂಪಾದಕ ಕೃಷ್ಣ ಭಟ್ ಸ್ವಾಗತಿಸಿದರು. “ಉದಯವಾಣಿ’ ಮಂಗಳೂರಿನ ರೀಜನಲ್ ಮ್ಯಾನೇಜರ್ ಸತೀಶ್ ಮಂಜೇಶ್ವರ ಬಹುಮಾನ ವಿಜೇತರ ವಿವರ ನೀಡಿದರು. ಉಡುಪಿ ಮಾರುಕಟ್ಟೆ ವಿಭಾಗದ ರೀಜನಲ್ ಮ್ಯಾನೇಜರ್ ರಾಧಾಕೃಷ್ಣ ಕೊಡವೂರು ವಂದಿಸಿದರು. ಹಿರಿಯ ವರದಿಗಾರ ದಿನೇಶ್ ಇರಾ ನಿರೂಪಿಸಿದರು.
ಆರ್ಟಿಸ್ಟ್ ಫೋರಂ ಸಹಕಾರಉಡುಪಿ ಆರ್ಟಿಸ್ಟ್ ಫೋರಂನ ಕಲಾವಿದರಾದ ರಮೇಶ್ ರಾವ್, ಸಕು ಪಾಂಗಾಳ, ಎಚ್. ಕೆ. ರಾಮಚಂದ್ರ, ಮೋಹನ್ ಕುಮಾರ್, ರಾಜೇಂದ್ರ ಕೇದಿಗೆ, ಸಿಂಧೂ ಕಾಮತ್, ರೇಷ್ಮಾ ಶೆಟ್ಟಿ ತೀರ್ಪುಗಾರರಾಗಿ ಸಹಕರಿಸಿದರು. ತಾಲೂಕು, ಜಿಲ್ಲಾ ಮಟ್ಟದ ವಿಜೇತರಿಗೆ
ಬಹುಮಾನ ವಿತರಣೆ
ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಡೆದಿದ್ದ ತಾಲೂಕು ಮಟ್ಟದ ಚಿಣ್ಣರ ಬಣ್ಣ ವಿಜೇತರಾಗಿದ್ದ 150ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ರವಿವಾರ ನಡೆದ ಮೂರು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 24 ವಿದ್ಯಾರ್ಥಿಗಳಿಗೆ ಸಮಾರೋಪದಲ್ಲಿ ಬಹುಮಾನ ವಿತರಿಸಲಾಯಿತು. ಜಿಲ್ಲಾ ಮಟ್ಟ ದ ಸ್ಪರ್ಧಾ ವಿಜೇತರು ಸಬ್ ಜೂನಿಯರ್ ವಿಭಾಗ : ಪ್ರಥಮ: ದೇಶ್ನಾ ಕುಲಾಲ್, ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ, ದ್ವಿತೀಯ: ನಿಧಿ ಕೈರಂಗಳ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ತೃತೀಯ: ರೋಹಿನ್ ಕೆ., ಬ್ಲೆಸ್ಡ್ ಕುರಿಯಕೋಸ್ ಆಂಗ್ಲ ಮಾಧ್ಯಮ ಶಾಲೆ ಗುತ್ತಿಗಾರ್. ಸಮಾಧಾನಕರ ಬಹುಮಾನ: ವಂಶ ರಾಜ್, ಆನಂದ ತೀರ್ಥ ವಿದ್ಯಾಲಯ ಕುಂಜಾರುಗಿರಿ ಪಾಜಕ, ಅನ್ವಿಕಾ ಎ.ಅರಿಗ, ಶ್ರೀ ಲಕ್ಷ್ಮಿ ಜನಾರ್ದನ ಇಂಟರ್ನ್ಯಾಶನಲ್ ಸ್ಕೂಲ್ ಬೆಳ್ಮಣ್, ದಿತ್ಯ ಎಲ್. ಕೋಟ್ಯಾನ್, ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮೂಲ್ಕಿ, ಆರ್ಯ ಪೈ, ಪೊದಾರ್ ಇಂಟರ್ನ್ಯಾಶನಲ್ ಸ್ಕೂಲ್ ಪೆರಂಪಳ್ಳಿ, ಶಾನ್ವಿ ಪಿ. ಸನಿಲ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಚೆಂಬುಗುಡ್ಡೆ ತೊಕ್ಕೊಟ್ಟು. ಜೂನಿಯರ್ ವಿಭಾಗ: ಪ್ರಥಮ: ವಿನೀಶ್ ಆಚಾರ್ಯ, ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ, ದ್ವಿತೀಯ: ಅನ್ವಿತ್ ಆರ್. ಶೆಟ್ಟಿಗಾರ್, ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ತೃತೀಯ: ವೈ. ಹನ್ಸಿಕಾ, ಕೆನರಾ ಹಿರಿಯ ಪ್ರಾಥಮಿಕ ಶಾಲೆ ಉರ್ವ. ಸಮಾಧಾನಕರ ಬಹುಮಾನ: ನಿಹಾರ್ ಜೆ.ಎಸ್., ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ, ಸಾನಿಧ್ಯ ಆಚಾರ್ಯ, ಎಫ್.ಎಸ್.ಕೆ. ಆಂಗ್ಲ ಮಾಧ್ಯಮ ಶಾಲೆ ಪೆರ್ಡೂರು. ಯಕ್ಷತ್ ಶೆಟ್ಟಿ, ವಿಶ್ವ ವಿನಾಯಕ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಶಾಲೆ ತೆಕ್ಕಟ್ಟೆ, ನಿನಾದ್ ಕೈರಂಗಳ, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ಆಶ್ಮಿ ರಾಜೇಶ್ ಜೋಗಿ ಶ್ರೀ ಲಕ್ಷ್ಮಿ ಜನಾರ್ದನ ಇಂಟರ್ನ್ಯಾಶನಲ್ ಸ್ಕೂಲ್ ಬೆಳ್ಮಣ್. ಸೀನಿಯರ್ ವಿಭಾಗ: ಪ್ರಥಮ: ಅಕ್ಷಜ್, ಎನ್ಐಟಿಕೆ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್, ದ್ವಿತೀಯ: ರಿಷಬ್ ಎಚ್. ಎಂ., ಜೈನ್ ಹೈಸ್ಕೂಲ್ ಮೂಡುಬಿದಿರೆ, ತೃತೀಯ: ಧನ್ವಿ ಯು. ಪೂಜಾರಿ, ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ. ಸಮಾಧಾನಕರ ಬಹುಮಾನ: ಹಂಸ್ವಿ ಕಾಂಚನ್, ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ ತೆಕ್ಕಟ್ಟೆ, ಕೃಷ್ಣ ಪ್ರಸಾದ್ ಭಟ್, ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ, ಅದಿತ್, ಕೆನರಾ ಹಿ.ಪ್ರಾ.ಶಾಲೆ ಉರ್ವ ಮಂಗಳೂರು, ಚಿರಾಗ್ ವಿ.ಶೆಟ್ಟಿ, ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌ.ಶಾಲೆ ಕುಂಜಿಬೆಟ್ಟಿ, ಮೆಹಕ್ ಫಾತಿಮಾ, ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ. ನಿರೀಕ್ಷೆಗೂ ಮೀರಿ ಸ್ಪಂದನೆ
ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಒಟ್ಟು 18 ತಾಲೂಕಿನ 17 ಕೇಂದ್ರಗಳಲ್ಲಿ ನಡೆದ “ಚಿಣ್ಣರ ಬಣ್ಣ’ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ 22 ಸಾವಿರಕ್ಕೂ ಅಧಿಕ ಮಕ್ಕಳು ಭಾಗವಹಿಸುವ ಮೂಲಕ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಿಶೇಷ. ಜತೆಗೆ ಚಿತ್ರಗಳ ಗುಣಮಟ್ಟವೂ ಹೆಚ್ಚುತ್ತಿರುವುದು ಸ್ಪರ್ಧೆಯ ವಿಶೇಷತೆಯಾಗಿದೆ. ರವಿವಾರ ನಡೆದ ಕಾರ್ಯಕ್ರಮದಲ್ಲಿ 3 ಜಿಲ್ಲೆಗಳ ಮಕ್ಕಳು, ಹೆತ್ತವರು ಸೇರಿ 500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.