ಚೆನ್ನೈ: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ಶುಕ್ರವಾರ ವೃತ್ತಿಪರ ಟೆನಿಸ್ಗೆ ನಿವೃತ್ತಿ ಘೋಷಿಸಿದರು.
“ನನ್ನ ರ್ಯಾಕೆಟನ್ನು ಬದಿಗೆ ಸರಿಸುತ್ತಿದ್ದೇನೆ. ಧನ್ಯವಾದಗಳು’ ಎಂದು ಪ್ರಜ್ಞೇಶ್ ಗುಣೇಶ್ವರನ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ಇದನ್ನು ಬರೆಯುವಾಗ ನನ್ನ ಹೃದಯ ಕೃತಜ್ಞತೆ, ಹೆಮ್ಮೆ ಮತ್ತು ಸವಿನೆನಪುಗಳಿಂದ ತುಂಬಿಬರುತ್ತದೆ. ಕಳೆದ 3 ದಶಕಗಳಿಂದ ಟೆನಿಸ್ ಎಂಬುದು ತನಗೆ ಸರ್ವಸ್ವವೂ ಆಗಿತ್ತು. ಥ್ಯಾಂಕ್ಯೂ ಟೆನಿಸ್, ಫಾರ್ ದ ರೈಡ್ ಆಫ್ ಎ ಲೈಫ್ಟೈಮ್’ ಎಂದು ಭಾವುಕರಾಗಿ ಬರೆದಿದ್ದಾರೆ.
2019ರ ಎಟಿಪಿ ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ 75ನೇ ಸ್ಥಾನಕ್ಕೆ ಏರಿದ್ದ ಗುಣೇಶ್ವರನ್, ಇದಕ್ಕೂ ಹಿಂದಿನ ವರ್ಷದ ಜಕಾರ್ತಾ ಏಷ್ಯಾಡ್ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಚೆನ್ನೈನವರಾದ ಪ್ರಜ್ಞೆàಶ್ ಗುಣೇಶ್ವರನ್ ಎಲ್ಲ 4 ಗ್ರಾÂನ್ಸ್ಲಾಮ್ಗಳಲ್ಲಿ ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಆಸ್ಟ್ರೇಲಿಯನ್ ಓಪನ್ನಲ್ಲಿ 2 ಸಲ ಆಡಿದ್ದಾರೆ.