Advertisement
ಗುರುವಾರದ ದ್ವಿತೀಯ ಸುತ್ತಿನ ಸ್ಪರ್ಧೆಯಲ್ಲಿ 38 ವರ್ಷದ ವಾವ್ರಿಂಕ 6-3, 4-6, 6-4, 6-2 ಅಂತರದಿಂದ ಆರ್ಜೆಂಟೀನಾದ ಥಾಮಸ್ ಎಶೆವೆರಿ ಅವರನ್ನು ಮಣಿಸಿದರು.
ಆಸ್ಟ್ರೇಲಿಯದ ಜೋರ್ಡನ್ ಥಾಮ್ಸನ್ ವಿರುದ್ಧದ ದ್ವಿತೀಯ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ನೊವಾಕ್ ಜೊಕೋವಿಕ್ ನೂತನ ಮೈಲುಗಲ್ಲು ನೆಟ್ಟರು. ಇದು ಗ್ರ್ಯಾನ್‌ಸ್ಲಾಮ್ ಪಂದ್ಯಗಳಲ್ಲಿ ಅವರು ಸಾಧಿಸಿದ 350ನೇ ಜಯವಾಗಿದೆ. ಜೊಕೋವಿಕ್ ಈ ಎತ್ತರ ತಲುಪಿದ ವಿಶ್ವದ ಕೇವಲ 3ನೇ ಸಾಧಕ. ಉಳಿದಿಬ್ಬರೆಂದರೆ ರೋಜರ್ ಫೆಡರರ್ ಮತ್ತು ಸೆರೆನಾ ವಿಲಿಯಮ್ಸ್. ಹಾಲಿ ಚಾಂಪಿಯನ್ ಖ್ಯಾತಿಯ ಜೊಕೋವಿಕ್ 70ನೇ ರ್‍ಯಾಂಕಿಂಗ್ ಆಟಗಾರ ಜೋರ್ಡನ್ ಥಾಮ್ಸನ್ ವಿರುದ್ಧ ಮೇಲುಗೈ ಸಾಧಿಸಲು ಭಾರೀ ಹೋರಾಟ ನಡೆಸಬೇಕಾಯಿತು. ಇದಕ್ಕೆ ಗೆಲುವಿನ ಅಂತರವೇ ಸಾಕ್ಷಿ. ಅದು ಹೀಗಿತ್ತು: 6-3, 7-6 (7 -4), 7-5.
Related Articles
Advertisement
ಡೇವಿಡ್ ಶಪೊವಲೋವ್, ಅಲೆಕ್ಸಾಂಡರ್ ಬಬ್ಲಿಕ್, ಹ್ಯೂಬರ್ಟ್ ಹುರ್ಕಾಜ್ ಕೂಡ 3ನೇ ಸುತ್ತು ತಲುಪಿದ್ದಾರೆ. ಡೆವಿಡೋವಿಕ್ ಫೋಕಿನ ಮತ್ತು ಅಲೆಕ್ಸಾಂಡರ್ ಜ್ವೆರೇವ್ ದ್ವಿತೀಯ ಸುತ್ತಿಗೆ ಏರಿದ್ದಾರೆ.
ಅಜರೆಂಕಾ ಗೆಲುವು2018ರ ವನಿತಾ ವಿಭಾಗದ ರನ್ನರ್ ಅಪ್ ವಿಕ್ಟೋರಿಯಾ ಅಜರೆಂಕಾ 3ನೇ ಸುತ್ತು ತಲುಪಿದ್ದಾರೆ. ಅವರು ಆರ್ಜೆಂಟೀನಾದ ನಾಡಿಯಾ ಪೊಡೊರೋಸ್ಕಾ ವಿರುದ್ಧ 6-3, 6-0 ಅಂತರದ ಸುಲಭ ಜಯ ಸಾಧಿಸಿದರು. ಎರಡು ಬಾರಿಯ ಚಾಂಪಿಯನ್ ಪೆಟ್ರಾ ಕ್ವಿಟೋವಾ ಮೊದಲ ಸುತ್ತು ದಾಟಿದ್ದಾರೆ. ಅವರು ಇಟಲಿಯ ಜಾಸ್ಮಿನ್ ಪೌಲಿನಿ ವಿರುದ್ಧ 6-4, 6-7 (5), 6-1 ಅಂತರದಿಂದ ಗೆದ್ದು ಬಂದರು.