Advertisement

ವಿಂಬಲ್ಡನ್‌-2021 : ಫೈನಲ್‌ಗೆ ನೆಗೆದ ಬೆರೆಟಿನಿ

12:40 AM Jul 10, 2021 | Team Udayavani |

ಲಂಡನ್‌: ಇಟಲಿಯ 7ನೇ ಶ್ರೇಯಾಂಕದ ಮ್ಯಾಟೊ ಬೆರೆಟಿನಿ ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ಗೆ ಲಗ್ಗೆಯಿರಿಸಿ ಇತಿ ಹಾಸವೊಂದನ್ನು ಬರೆಯುವ ಕನಸು ಕಾಣಲಾರಂಭಿಸಿದ್ದಾರೆ. ಶುಕ್ರವಾರ ನಡೆದ ವಿಂಬಲ್ಡನ್‌ ಸೆಮಿಫೈನಲ್‌ ಕಾಳಗದಲ್ಲಿ ಅವರು ಪೋಲೆಂಡ್‌ನ‌ “ದೈತ್ಯ ಸಂಹಾರಿ’ ಹ್ಯೂಬರ್ಟ್‌ ಹುರ್ಕಾಜ್‌ ಅವರ ಕನಸಿನ ಓಟಕ್ಕೆ 6-3, 6-0, 6-7 (3-7), 6-4 ಅಂತರದಿಂದ ತೆರೆ ಎಳೆದರು. ಇಟಲಿಯ ಟೆನಿಸಿಗನೋರ್ವ ವಿಂಬ ಲ್ಡನ್‌ ಪ್ರಶಸ್ತಿ ಸುತ್ತು ಪ್ರವೇಶಿಸಿದ ಮೊದಲ ನಿದರ್ಶನ ಇದಾಗಿದೆ.

Advertisement

ಕಳೆದೆರಡು ಬಾರಿಯ ಚಾಂಪಿ ಯನ್‌ ನೊವಾಕ್‌ ಜೊಕೋವಿಕ್‌ ಮತ್ತು ಕೆನಡಾದ ಡೆನ್ನಿಸ್‌ ಶಪೊವ ಲೋವ್‌ ನಡುವಿನ ದ್ವಿತೀಯ ಸೆಮಿ ಫೈನಲ್‌ ವಿಜೇತರನ್ನು ಬೆರೆಟಿನಿ ರವಿವಾರದ ಪ್ರಶಸ್ತಿ ಸೆಣಸಾಟದಲ್ಲಿ ಎದುರಿಸಲಿದ್ದಾರೆ.

ಇದನ್ನೂ ಓದಿ :ಚಹಾ ಮಾರುತ್ತಿರುವ ಮಾಜಿ ಕ್ರಿಕೆಟಿಗ!

ಮ್ಯಾಟೊ ಬೆರೆಟಿನಿ ಮೊದಲೆರಡು ಸೆಟ್‌ಗಳನ್ನು ಸುಲಭದಲ್ಲಿ ವಶಪಡಿಸಿ ಕೊಂಡರು. ಅದರಲ್ಲೂ ದ್ವಿತೀಯ ಸೆಟ್‌ನಲ್ಲಿ ಒಂದೂ ಅಂಕ ಬಿಟ್ಟುಕೊಡದೇ ಮುನ್ನುಗ್ಗಿದರು. ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲರಾದ ಹುರ್ಕಾಜ್‌ ನೇರ ಸೆಟ್‌ಗಳಲ್ಲಿ ಸೋಲನುಭವಿ ಸುವ ಎಲ್ಲ ಸಾಧ್ಯತೆ ಇತ್ತು. ಆದರೆ ತೃತೀಯ ಸೆಟ್‌ನಲ್ಲಿ ತಿರುಗಿ ಬಿದ್ದರು. ಇದನ್ನು ಟೈ-ಬ್ರೇಕರ್‌ನಲ್ಲಿ ವಶಪಡಿಸಿಕೊಂಡರು. ಆದರೆ 4ನೇ ಸೆಟ್‌ನಲ್ಲಿ ಬೆರೆಟಿನಿ ಮತ್ತೆ ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next