Advertisement
ಮೊದಲ ಸೆಟ್ ಮತ್ತು ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಎರಡು ಬಾರಿ ಹಿನ್ನಡೆ ಅನುಭವಿಸಿದರೂ ವಿಚಲಿತರಾಗದ ಪೌಲಿನಿ ಅವರು 2-6, 6-4, 7-6 (8) ಸೆಟ್‌ಗಳಿಂದ ಸೋಲಿಸಿ ಸಂಭ್ರಮಿಸಿದರು. ಈ ಪಂದ್ಯ ಎರಡು ತಾಸು 51 ನಿಮಿಷಗಳವರೆಗೆ ಸಾಗಿತ್ತು. ಇದು ವಿಂಬಲ್ಡನ್ ಕೂಟದ ಅತೀ ದೀರ್ಘವಾದ ವನಿತಾ ಸೆಮಿಫೈನಲ್ ಪಂದ್ಯವಾಗಿ ದಾಖಲೆ ಬರೆಯಿತು.
Related Articles
ಐದು ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಅಮೆರಿಕದ ಟಯ್ಲರ್ ಫ್ರಿಟ್ಜ್ ಅವರನ್ನು ಕೆಡಹಿದ ಇಟಲಿಯ ಲೊರೆಂಜೊ ಮುಸೆಟ್ಟಿ ಅವರು ಇದೇ ಮೊದಲ ಬಾರಿ ಗ್ರ್ಯಾನ್ ಸ್ಲಾಮ್ ಕೂಟದ ಸೆಮಿಫೈನಲ್ ಹಂತಕ್ಕೇರಿದ ಸಂಭ್ರಮ ಆಚರಿಸಿಕೊಂಡರು. ಶುಕ್ರ ವಾರ ನಡೆಯುವ ಸೆಮಿಫೈನಲ್ ಹೋರಾಟದಲ್ಲಿ ಅವರು ಇನ್ನೊಂದು ಕಠಿನ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ. ಅಲ್ಲಿ ಅವರು ಏಳು ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿರುವ ನೋವಾಕ್ ಜೊಕೋವಿಕ್ ಅವರ ಸವಾಲನ್ನು ಎದುರಿಸಬೇಕಾಗಿದೆ.
Advertisement
ತನ್ನ ದೇಶದವರೇ ಆದ ವಿಶ್ವದ ನಂಬರ್ ವನ್ ಜಾನ್ನಿಕ್ ಸಿನ್ನರ್ ಈಗಾ ಗಲೇ ಪತನಗೊಂಡಿದ್ದರಿಂದ ಮುಸೆಟ್ಟಿ ಇಲ್ಲಿ ಚಾಂಪಿಯನ್ ಎನಿಸಿಕೊ ಳ್ಳಲು ಶಕ್ತಮೀರಿ ಪ್ರಯತ್ನಿಸುವ ಸಾಧ್ಯತೆ ಯನ್ನು ಮುಂದಿನ ಪಂದ್ಯದಲ್ಲಿ ಜೊಕೋ ಅವರನ್ನು ಕೆಡಹಿದರೆ ಅವರು ಚಾಂಪಿ ಯನ್ ಪಟ್ಟಕ್ಕೇರುವ ಸಾಧ್ಯತೆಯಿದೆ.
ಸುಮಾರು ಮೂರುವರೆ ತಾಸುಗಳ ಸುದೀರ್ಘ ಹೋರಾಟ ನಡೆಸಿದ ಮುಸೆಟ್ಟಿ ಅವರು ಅಂತಿಮವಾಗಿ ಫ್ರಿಟ್ಜ್ ಅವರನ್ನು 3-6, 7-6 (5), 6-2, 3-6, 6-1 ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿದರು. ಜೊಕೋವಿಕ್ ಅವರು ನನಗಿಂತ ಚೆನ್ನಾಗಿ ಸೆಂಟರ್ ಕೋರ್ಟ್‌ನ ಮೈದಾನ, ಅಂಗಣವನ್ನು ಚೆನ್ನಾಗಿ ತಿಳಿದಿದ್ದಾರೆ. ಅವರೊಬ್ಬ ಎಲ್ಲಿಗೆ ಹೋದರೂ ಲೆಜೆಂಡ್ ಆಗಿದ್ದಾರೆ ಎಂದು ಮುಸೆಟ್ಟಿ ಹೇಳಿದ್ದಾರೆ. ಮುಸೆಟ್ಟಿ ಅವರು ಶುಕ್ರವಾರ ಸೆಂಟರ್ ಕೋರ್ಟ್ ನಲ್ಲಿ ಮೊದಲ ಬಾರಿ ಆಡಲಿದ್ದಾರೆ.