Advertisement

US Open: ಒಸಾಕಾ, ವಾವ್ರಿಂಕಾಗೆ ವೈಲ್ಡ್‌ ಕಾರ್ಡ್‌

11:25 PM Aug 15, 2024 | Team Udayavani |

ನ್ಯೂಯಾರ್ಕ್‌: ವರ್ಷಾಂತ್ಯದ ಯುಎಸ್‌ ಓಪನ್‌ (US Open) ಗ್ರ್ಯಾನ್‌ಸ್ಲಾಮ್‌ ಪಂದ್ಯಾ ವಳಿಯ ವೈಲ್ಡ್‌ಕಾರ್ಡ್‌ ಆಟಗಾರರ ಯಾದಿ ಪ್ರಕಟಗೊಂಡಿದೆ. ಎರಡು ಬಾರಿಯ ಚಾಂಪಿಯನ್‌ ನವೋಮಿ ಒಸಾಕಾ, ಮಾಜಿ ಚಾಂಪಿಯನ್‌ಗಳಾದ ಸ್ಟಾನಿಸ್ಲಾಸ್‌ ವಾವ್ರಿಂಕ, ಡೊಮಿನಿಕ್‌ ಥೀಮ್‌ ಮತ್ತು ಬಿಯಾಂಕಾ ಆ್ಯಂಡ್ರಿಸ್ಕೂ ಇವರಲ್ಲಿ ಪ್ರಮುಖರು.

Advertisement

ನವೋಮಿ ಒಸಾಕಾ ತಮ್ಮ 4 ಗ್ರ್ಯಾನ್‌ಸ್ಲಾಮ್‌ ಗೆಲುವುಗಳಲ್ಲಿ ಮೊದಲ ಎರಡನ್ನು ಇಲ್ಲಿಯೇ ಜಯಿಸಿದ್ದರು (2018, 2020). ಆದರೆ ಉಳಿದ ಮಾಜಿ ಚಾಂಪಿಯನ್‌ಗಳಂತೆ ಒಸಾಕಾ ಅವರಿಗೆ ಈ ಬಾರಿ ನೇರ ಆಯ್ಕೆ ಸಾಧ್ಯವಾಗಲಿಲ್ಲ. ಉನ್ನತ ರ್‍ಯಾಂಕಿಂಗ್‌ ಕೂಡ ಹೊಂದಿರಲಿಲ್ಲ.

2019ರಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸಿ ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ಬೆನ್ನುನೋವಿನಿಂದಾಗಿ 9 ತಿಂಗಳು ವಿಶ್ರಾಂತಿಯಲ್ಲಿದ್ದರು. ಬಳಿಕ ಈ ವರ್ಷದ ಫ್ರೆಂಚ್‌ ಓಪನ್‌ನಲ್ಲಿ ಆಡಲಿಳಿದಿದ್ದರು.

ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಪಾಲಿಗೆ ಇದು ಕೊನೆಯ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಾಗಿದೆ. ಯುಎಸ್‌ ಓಪನ್‌ ಬಳಿಕ ಅವರು ಟೆನಿಸ್‌ ನಿವೃತ್ತಿ ಘೋಷಿಸಲಿದ್ದಾರೆ. ಇವರು ತಮ್ಮ ಏಕೈಕ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು 2020ರ ಯುಎಸ್‌ ಓಪನ್‌ ಪಂದ್ಯಾವಳಿಯಲ್ಲಿ ಜಯಿಸಿದ್ದರು.

Advertisement

39 ವರ್ಷದ ಸ್ಟಾನಿಸ್ಲಾಸ್‌ ವಾವ್ರಿಂಕ 2016ರ ಯುಎಸ್‌ ಓಪನ್‌ ಚಾಂಪಿಯನ್‌. ಒಂದು ಕಾಲದಲ್ಲಿ ನಂ.3 ಟೆನಿಸಿಗನಾಗಿದ್ದ ವಾವ್ರಿಂಕ, ಈಗ ನೂರರಾಚೆ ಕುಸಿದಿದ್ದಾರೆ. ಇದು ಅವರ 72ನೇ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ. ಸಾರ್ವಕಾಲಿಕ ದಾಖಲೆಯ ಯಾದಿಯಲ್ಲಿ ಇವರಿಗೆ 5ನೇ ಸ್ಥಾನ.

ಇತರ ವೈಲ್ಡ್‌ಕಾರ್ಡ್‌ ಪ್ರವೇಶಿಗರು
ವೈಲ್ಡ್‌ಕಾರ್ಡ್‌ ಪಡೆದ ಇತರ ಆಟಗಾರ್ತಿಯ ರೆಂದರೆ ಅಮೆರಿಕದ ಅಮಂಡಾ ಅನಿಸಿಮೋವಾ, ಮೆಕಾರ್ಟಿನಿ ಕೆಸ್ಲರ್‌, ಅಲೆಕ್ಸಾ ನೋಯೆಲ್‌, ಇವಾ ಜೋವಿಕ್‌, ಫ್ರಾನ್ಸ್‌ನ ಕ್ಲೋ ಪಾಕೆಟ್‌, ಆಸ್ಟ್ರೇಲಿಯದ ಟಾಯ್ಲಾ  ಪ್ರಸ್ಟನ್‌. ಪುರುಷರ ವಿಭಾಗದಿಂದ ಅಮೆರಿಕದ ಕ್ರಿಸ್‌ ಯೂಬ್ಯಾಂಕ್ಸ್‌, ಲರ್ನರ್‌ ಟೀನ್‌, ಝಕಾರಿ ಸ್ವಾಕ, ಮ್ಯಾಥ್ಯೂ ಫೋರ್ಬ್ಸ್‌ , ಫ್ರಾನ್ಸ್‌ನ ಅಲೆಕ್ಸಾಂಡ್ರೆ ಮುಲ್ಲರ್‌, ಆಸ್ಟ್ರೇಲಿಯದ ಟ್ರಿಸ್ಟನ್‌ ಸ್ಕೂಲ್‌ಕೇಟ್‌ ವೈಲ್ಡ್‌ಕಾರ್ಡ್‌ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next