Advertisement

Wimbledon;ಮೆಡ್ವೆಡೇವ್‌ ವಿರುದ್ಧ ಜಯ: ಅಲ್ಕರಾಜ್‌ ಫೈನಲ್‌ ಪ್ರವೇಶ

11:45 PM Jul 12, 2024 | Team Udayavani |

ಲಂಡನ್‌: ಸ್ಪೇನ್‌ನ ಸೂಪರ್‌ ಸ್ಟಾರ್‌, ಹಾಲಿ ಚಾಂಪಿಯನ್‌ ಖ್ಯಾತಿಯ ಕಾರ್ಲೋಸ್‌ ಅಲ್ಕರಾಜ್‌ ವಿಂಬಲ್ಡನ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ಶುಕ್ರವಾರದ ಮೊದಲ ಸೆಮಿಫೈನಲ್‌ನಲ್ಲಿ ಅವರು ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ವಿರುದ್ಧ 6-7 (1-7), 6-3, 6-4, 6-4 ಅಂತರದ ಜಯ ಸಾಧಿಸಿದರು.

Advertisement

ನೊವಾಕ್‌ ಜೊಕೋವಿಕ್‌ ಮತ್ತು ಲೊರೆಂಜೊ ಮುಸೆಟ್ಟಿ ನಡುವಿನ ದ್ವಿತೀಯ ಸೆಮಿಫೈನಲ್‌ನಲ್ಲಿ ವಿಜೇತರಾ ದವರನ್ನು ರವಿವಾರದ ಫೈನಲ್‌ನಲ್ಲಿ ಅಲ್ಕರಾಜ್‌ ಎದುರಿಸಲಿದ್ದಾರೆ.

ಈ ವರ್ಷದ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿರುವ ಕಾರ್ಲೋಸ್‌ ಅಲ್ಕರಾಜ್‌ ಕಳೆದ ವರ್ಷ ನೊವಾಕ್‌ ಜೊಕೋವಿಕ್‌ ಅವರನ್ನು ಮಣಿಸಿ ಮೊದಲ ವಿಂಬಲ್ಡನ್‌ ಕಿರೀಟ ಏರಿಸಿ ಕೊಂಡಿದ್ದರು. ಇದಕ್ಕೂ ಮೊದಲು 2022ರ ಯುಎಸ್‌ ಓಪನ್‌ ಚಾಂಪಿ ಯನ್‌ ಆಗಿದ್ದರು.

ಡ್ಯಾನಿಲ್‌ ಮೆಡ್ವೆಡೇವ್‌ ಅವರ ದುರದೃಷ್ಟ ಮತ್ತೂಮ್ಮೆ ತೆರೆಯಲ್ಪ ಟ್ಟಿತು. ಅವರು ಕಳೆದ ವರ್ಷವೂ ವಿಂಬಲ್ಡನ್‌ ಸೆಮಿಫೈನಲ್‌ ದಾಟುವಲ್ಲಿ ವಿಫ‌ಲರಾಗಿದ್ದರು. ಅಲ್ಲಿ ಜೊಕೋವಿಕ್‌ ಅಡ್ಡಗಾಲಿಕ್ಕಿದ್ದರು. 3 ಬಾರಿ ಆಸ್ಟ್ರೇಲಿ ಯನ್‌ ಓಪನ್‌ ಫೈನಲ್‌ ಪ್ರವೇಶಿಸಿ ಮೂರರಲ್ಲೂ ಸೋತಿದ್ದರು. ಮೆಡ್ವೆ ಡೇವ್‌ ತಮ್ಮ ಏಕೈಕ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು 2021ರ ಯುಎಸ್‌ ಓಪನ್‌ನಲ್ಲಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next