Advertisement

Wimbledon Doubles: ಪ್ಯಾಟೆನ್‌-ಹೆಲಿಯೋವಾರ; ಟೌನ್ಸೆಂಡ್‌-ಸಿನಿಯಕೋವಾ ಚಾಂಪಿಯನ್ಸ್‌

11:28 PM Jul 14, 2024 | Team Udayavani |

ಬ್ರಿಟನ್‌ನ ಹೆನ್ರಿ ಪ್ಯಾಟೆನ್‌ ಮತ್ತು ಫಿನ್ಲಂಡ್‌ನ‌ ಹ್ಯಾರ್ರಿ ಹೆಲಿಯೋವಾರ ವಿಂಬಲ್ಡನ್‌ ಪುರುಷರ ಡಬಲ್ಸ್‌ ಚಾಂಪಿಯನ್‌ ಆಗಿ ಮೂಡಿಬಂದಿದ್ದಾರೆ. ತೀವ್ರ ಪೈಪೋಟಿಯ ಫೈನಲ್‌ನಲ್ಲಿ ಇವರು ಆಸ್ಟ್ರೇಲಿಯದ ಮ್ಯಾಕ್ಸ್‌ ಪರ್ಸೆಲ್‌-ಜೋರ್ಡನ್‌ ಥಾಮ್ಸನ್‌ ವಿರುದ್ಧ 6-7 (7), 7-6 (8), 7-6 (11-9) ಅಂತರದ ಜಯ ಸಾಧಿಸಿದರು.

Advertisement

ಇದು ಪ್ಯಾಟೆನ್‌-ಹೆಲಿಯೋವಾರ ಜೋಡಿಗೆ ಒಲಿದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ. ಈ ಪಂದ್ಯಾವಳಿಯಲ್ಲಿ ಇವರಿಗೆ ಯಾವುದೇ ಶ್ರೇಯಾಂಕ ಲಭಿಸಿರ ಲಿಲ್ಲ. 3 ಗಂಟೆಗಳ ಕಾಲ ನಡೆದ ಪಂದ್ಯದ ವೇಳೆ ಮೂರೂ ಸೆಟ್‌ ಟೈ-ಬ್ರೇಕರ್‌ಗೆ ವಿಸ್ತರಿಸಲ್ಪಟ್ಟದ್ದು ಫೈನಲ್‌ ತೀವ್ರತೆಗೆ ಸಾಕ್ಷಿ.

ವನಿತಾ ಡಬಲ್ಸ್‌
ವನಿತಾ ಡಬಲ್ಸ್‌ ಪ್ರಶಸ್ತಿ ಅಮೆರಿಕದ ಟೇಲರ್‌ ಟೌನ್ಸೆಂಡ್‌-ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ಪಾಲಾಯಿತು. ಇವರು ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್‌ಸ್ಕಿ-ನ್ಯೂಜಿಲ್ಯಾಂಡ್‌ನ‌ ಎರಿನ್‌ ರೌಟಿÉಫ್ ವಿರುದ್ಧ 7-6 (5), 7-6 (1) ಅಂತರದಿಂದ ಗೆದ್ದರು.

ಇಲ್ಲಿ ಟೌನ್ಸೆಂಡ್‌ “ಥರ್ಡ್‌ ಟೈಮ್‌ ಲಕ್ಕಿ’ ಎನಿಸಿದರು. 2022ರ ಯುಎಸ್‌ ಓಪನ್‌ ಡಬಲ್ಸ್‌ ಹಾಗೂ ಕಳೆದ ವರ್ಷದ ಫ್ರೆಂಚ್‌ ಓಪನ್‌ ಡಬಲ್ಸ್‌ ಫೈನಲ್‌ನಲ್ಲಿ ಇವರು ಸೋಲನುಭವಿಸಿದ್ದರು. ಇದೇ ವೇಳೆ ಸಿನಿಯಕೋವಾ 9ನೇ ಡಬಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next