Advertisement

ಪಟೇಲರ ಮೀಸಲಾತಿಗೆ “ಕೈ’ಜೋಡಿಸಲಿದ್ದಾರಾ ಹಾರ್ದಿಕ್‌?

07:35 AM Oct 25, 2017 | Team Udayavani |

ಅಹ್ಮದಾಬಾದ್‌: ಪಟೇಲ್‌ ಸಮುದಾಯಕ್ಕೆ ಸರಕಾರಿ ಹುದ್ದೆಗಳಲ್ಲಿ ಮೀಸಲಾತಿ ನೀಡುವ ವಾಗ್ಧಾನ ನೀಡಿದರೆ ಮಾತ್ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಪಟೇಲ್‌ ಸಮುದಾಯ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದೆ ಎಂದು ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ. ಈ ಷರತ್ತನ್ನು ಹಾರ್ದಿಕ್‌ ಅವರು ಸ್ವತಃ  ಕಾಂಗ್ರೆಸ್‌ ಮುಂದೆ ಇಟ್ಟಿದ್ದಾರೆ.

Advertisement

ಗುಜರಾತ್‌ನಲ್ಲಿ ಚುನಾವಣೆಯ ಕಾವು ಏರುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತಿದ್ದ “ಪಟೇಲ್‌ ಸಮುದಾಯದ ಕೋಟಾ’ ವಿಚಾರ ಮತ್ತೆ ಚಾಲ್ತಿಗೆ ಬಂದಿದೆ. ಈವರೆಗೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಪಟೇಲ ಸಮುದಾಯವನ್ನು ಈ ಬಾರಿಯ ಚುನಾವಣೆಯಲ್ಲಿ ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಕಾಂಗ್ರೆಸ್‌ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಅ. 23ರ ರಾತ್ರಿ ಗುಜರಾತ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಅಶೋಕ್‌ ಗೆಹೊÉàಟ್‌ ಹಾಗೂ ಹಾರ್ದಿಕ್‌ ಪಟೇಲ್‌ ಅವರಿಬ್ಬರ ನಡುವೆ ಮಾತುಕತೆ ನಡೆದಿದೆ. ಆ ಸಂದರ್ಭದಲ್ಲಿಯೇ, ಹಾರ್ದಿಕ್‌ ಅವರು ಗೆಹೊÉàಟ್‌ಗೆ ಮೀಸಲಾತಿ ಭರವಸೆಯ ಷರತ್ತನ್ನು ಮುಂದಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next