Advertisement

WI vs SA 2nd Test: ವಿಂಡೀಸ್‌ ಗೆಲುವಿಗೆ 263 ರನ್‌ ಗುರಿ

10:39 PM Aug 17, 2024 | Team Udayavani |

ಪ್ರೊವಿಡೆನ್ಸ್‌ (ಗಯಾನಾ): ಪ್ರವಾಸಿ ವೆಸ್ಟ್‌ ಇಂಡೀಸ್‌ ತಂಡದೆದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 16 ರನ್‌ ಮುನ್ನಡೆ ಪಡೆದಿದ್ದ ದಕ್ಷಿಣ ಆಫ್ರಿಕಾವು ಪಂದ್ಯದ ಮೂರನೇ ದಿನ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 246 ರನ್‌ ಗಳಿಸಿ ಆಲೌಟಾಗಿದೆ. ಇದರಿಂದ ವೆಸ್ಟ್‌ಇಂಡೀಸ್‌ ಗೆಲ್ಲಲು 263 ರನ್‌ ಗಳಿಸುವ ಗುರಿ  ಪಡೆದಿದೆ.

Advertisement

ಐದು ವಿಕೆಟಿಗೆ 223 ರನ್ನುಗಳಿಂದ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾವು 246 ರನ್‌ ಗಳಿಸಿ ಆಲೌಟಾಯಿತು. ಕೈಲ್‌ ವೆರೇಯ್ನ 59 ರನ್‌ ಗಳಿಸಿದರು. ಅವರು ವಿಯಾನ್‌ ಮುಲ್ಡರ್‌ ಜತೆಗೂಡಿ ಆರನೇ ವಿಕೆಟಿಗೆ 85 ರನ್‌ ಪೇರಿಸಿ ಬೇರ್ಪಟ್ಟರು. ಈ ಮೊದಲು ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಬಹಳಷ್ಟು ಎಚ್ಚರಿಕೆಯಿಂದ ಆಡಿತು. ಇನ್ನಿಂಗ್ಸ್‌ ಆರಂಭಿಸಿದ ಐಡೆನ್‌ ಮಾರ್ಕ್‌ರಮ್‌ ಮತ್ತು ಟೋನಿ ಡಿ ಜಾರ್ಜಿ ಮೊದಲ ವಿಕೆಟಿಗೆ 79 ರನ್‌ ಪೇರಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ಜಾರ್ಜಿ 39 ರನ್‌ ಗಳಿಸಿ ಔಟಾದರು. ಆಬಳಿಕ ಮಾರ್ಕ್‌ರಮ್‌ ಅವರು ಟ್ರಿಸ್ಟನ್‌ ಸ್ಟಬ್ಸ್ ಜತೆಗೂಡಿ ದ್ವಿತೀಯ ವಿಕೆಟಿಗೆ 41 ರನ್‌ ಪೇರಿಸಿ ತಂಡವನ್ನು ಆಧರಿಸಿದರು.

Advertisement

Udayavani is now on Telegram. Click here to join our channel and stay updated with the latest news.