Advertisement

NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್‌ ವಶ

09:22 PM Jan 11, 2025 | Team Udayavani |

ಆಕ್ಲೆಂಡ್‌: ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್‌ ಅನ್ನು 140 ರನ್ನುಗಳ ಭಾರೀ ಅಂತರದಿಂದ ಮಣಿಸಿದ ಶ್ರೀಲಂಕಾ ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಶ್ರೀಲಂಕಾ 8 ವಿಕೆಟಿಗೆ 290 ರನ್‌ ಪೇರಿಸಿದರೆ, ತೀವ್ರ ಕುಸಿತಕ್ಕೆ ಸಿಲುಕಿದ ನ್ಯೂಜಿಲೆಂಡ್‌ 29.4 ಓವರ್‌ಗಳಲ್ಲಿ 150ಕ್ಕೆ ಸರ್ವಪತನ ಕಂಡಿತು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ-290/8 (ನಿಸ್ಸಂಕ 66, ಕುಸಲ್‌ ಮೆಂಡಿಸ್‌ 54, ಹೆನ್ರಿ 55ಕ್ಕೆ 4). ನ್ಯೂಜಿಲೆಂಡ್‌-29.4 ಓವರ್‌ಗಳಲ್ಲಿ 150 (ಚಾಪ್‌ಮನ್‌ 81, ಸ್ಮಿತ್‌ 17, ಅಸಿತ ಫೆರ್ನಾಂಡೊ 26ಕ್ಕೆ 3). ಪಂದ್ಯಶ್ರೇಷ್ಠ: ಅಸಿತ ಫೆರ್ನಾಂಡೊ. ಸರಣಿಶ್ರೇಷ್ಠ: ಮ್ಯಾಟ್‌ ಹೆನ್ರಿ.

Advertisement

Udayavani is now on Telegram. Click here to join our channel and stay updated with the latest news.