Advertisement
ಮೊದಲು ಬ್ಯಾಟ್ ಮಾಡಿದ ಜೋಸ್ ಬಟ್ಲರ್ ಪಡೆ ಫಿಲಿಪ್ ಸಾಲ್ಟ್ ಅವರ 40 ರನ್ ಹಾಗೂ ನಾಯಕ ಬಟ್ಲರ್ ಅವರ 39 ರನ್ ಗಳ ಸ್ಫೋಟಕ ಆಟದಿಂದ ಉತ್ತಮ ಆರಂಭ ಪಡೆಯಿತು. ಆದರೆ ಆ ಬಳಿಕ ಬಂದ ವಿಲ್ ಜ್ಯಾಕ್ಸ್ ಕೇವಲ 17 ರನ್ ಗಳಿಸಿ ಅಲ್ಜಾರಿ ಜೋಸೆಫ್ ಅವರಿಗೆ ವಿಕೆಟ್ ಒಪ್ಪಿಸಿದರು. ಡಕೆಟ್, ಹ್ಯಾರಿ ಬ್ರೂಕ್ ಸೇರಿದಂತೆ ಇತರೆ ಆಟಗಾರರು ಹೆಚ್ಚು ಹೊತ್ತು ಕ್ರಿಸ್ ನಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದಲ್ಲಿ ಲಿವಿಂಗ್ ಸ್ಟೋನ್ 27 ರನ್ ಗಳಿಸಿ ಹೋರಾಟದ ಮೊತ್ತವನ್ನು ಪೇರಿಸುವಲ್ಲಿ ನೆರವಾದರು.
Related Articles
Advertisement
ಆ ಬಳಿಕ ಬಂದ ನಾಯಕ ರೋವ್ಮನ್ ಪೊವೆಲ್, ಆಂಡ್ರೆ ರಸೆಲ್ ಸ್ಫೋಟಕ ಆಟದಿಂದ 11 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆಲುವಿನ ದಡಕ್ಕೆ ಸೇರಿಸಿದರು. ರೋವ್ಮನ್ ಪೊವೆಲ್ 15 ಎಸೆತದಲ್ಲಿ 31 ರನ್ ಸಿಡಿಸಿದರೆ, ರಸೆಲ್ 14 ಎಸೆತದಲ್ಲಿ 29 ರನ್ ಗಳಿಸಿ ಔಟಾಗದೆ ಉಳಿದರು.
ಅಂತಿಮ ವಿಂಡೀಸ್ 18.1 ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 172ರ ಗುರಿಯನ್ನು ಮುಟ್ಟಿತು. ಇದು ಬಾರ್ಬಡೋಸ್ ಮೈದಾನದಲ್ಲಿ ನಡೆದ ದಾಖಲೆ ರನ್ ಚೇಸಿಂಗ್ ಆಗಿದೆ. ಈ ಹಿಂದೆ 2014 ರನ್ ಇಂಗ್ಲೆಂಡ್ ವಿರುದ್ದವೇ 155 ರನ್ ಚೇಸ್ ಮಾಡಿತ್ತು.
ಎರಡು ವರ್ಷದ ಬಳಿಕ ರೆಸೆಲ್ ಕಂಬ್ಯಾಕ್: ಪಂದ್ಯದ ಸ್ಟಾರ್ ಆಂಡ್ರೆ ರಸೆಲ್ ಎಂದರೆ ತಪ್ಪಾಗದು. ಎರಡು ವರ್ಷದ ಬಳಿಕ ವಿಂಡೀಸ್ ತಂಡದಲ್ಲಿ ಕಾಣಿಸಿಕೊಂಡ ರಸೆಲ್ ಆಲ್ ರೌಂಡರ್ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನುವಹಿಸಿದರು.
2021 ರ ಟಿ-20 ಬಳಿಕ ಮೊದಲ ಬಾರಿ ತಂಡದಲ್ಲಿ ಕಾಣಿಸಿಕೊಂಡ ರಸೆಲ್ 4 ಓವರ್ ನಲ್ಲಿ 19 ರನ್ ಕೊಟ್ಟು 3 ಪ್ರಮುಖ ವಿಕೆಟ್ ಪಡೆದರು. ಇದರೊಂದಿಗೆ 29 ರನ್ ಗಳ ಸ್ಫೋಟಕ ಬ್ಯಾಟಿಂಗ್ ಮಾಡಿದರು. ರಸೆಲ್ ಕಂಬ್ಯಾಕ್ ಮುಂದಿನ ವರ್ಷ ಜೂನ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಗೆ ವಿಂಡೀಸ್ ಪ್ಲಸ್ ಆಗಿದೆ.