Advertisement
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿ ಕೊಳ್ಳುವ ಭರದಲ್ಲಿ ಶಿಕ್ಷಣ ತಜ್ಞರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಹೀಗಿರುವಾಗ ಕೆಲವೊಂದು ಪ್ರಶ್ನೆಗಳು ನಿರಂತರವಾಗಿ ಕಾಡುತ್ತಿರುತ್ತವೆ. ಕಂಪ್ಯೂ ಟರ್ ನಲ್ಲಿ ಮಾಡುವ ಎಲ್ಲ ಕೆಲಸಗಳು ಕೌಶಲಗಳೇ?. ಮೊಬೈಲ್ ಆ್ಯಪ್‌ನಲ್ಲಿ ಮಾಡಬಹುದಾದ ಎಲ್ಲ ಆ್ಯಪ್ಲಿಕೇಶನ್‌ಗಳು ಕೌಶಲಭರಿತವೇ? ಆನ್‌ಲೈನ್‌ನಲ್ಲಿ ಮಾಡುವ ಪ್ರತಿಯೊಂದನ್ನು ನಾವು ಕುಶಲತೆಯೆಂದು ಪರಗಣಿಸಬೇಕೇ? ಇತ್ಯಾದಿ. ಅದೇ ರೀತಿ ಯಾವುದೇ ಭಾಷೆಯಲ್ಲಿ ಕಾಗು ಣಿತ, ವ್ಯಾಕರಣ ತಪ್ಪಿಲ್ಲದೆ ಕೈಬರಹದಲ್ಲಿ ಬರೆ ಯುವುದು ಕುಶಲತೆಯಲ್ಲವೇ? ಸುಂದರವಾಗಿ ಓದುವುದು, ಚಿತ್ರಗಳನ್ನು, ಕೋಷ್ಟಕ ಗಳನ್ನು ಬರೆಯು ವುದು, ಹಾಡುವುದು, ನೃತ್ಯ ಮಾಡು ವುದು ಇತ್ಯಾದಿಗಳನ್ನು ಕುಶಲತೆಯಲ್ಲವೆಂದು ಪರಿಗಣಿಸಲಾದೀತೆ?.ಕೌಶಲಯುತ ವಿಷಯಗಳೆಂದು ಕರೆಸಿ ಕೊಳ್ಳುವ ಕೆಲವು ಕೋರ್ಸ್‌ಗಳನ್ನು ಪಠ್ಯಕ್ರಮದಲ್ಲಿ ತುಂಬಿ ಅವರು ಜ್ಞಾನಾರ್ಜನೆಗೆ ಕಲಿಯಬೇಕಾದ ವಿಷಯ ಗಳು ಗೌಣವಾಗಿ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತಿವೆ. ಉದಾಹರಣೆಗೆ ಈಗಾಗಲೆ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಭಾಷೆಯ ಪಠ್ಯಗಳನ್ನು ಕೈ ಬಿಡುವ ಹಂತಕ್ಕೆ ತಲುಪಿದ್ದೇವೆ. ಅಲ್ಲಿ ಪೂರ್ಣಕಾಲಿಕ ಶಿಕ್ಷಕರು ಸಿಗು ವುದೇ ಅಪರೂಪ. ಕಲಾ, ವಾಣಿಜ್ಯ, ವಿಜ್ಞಾನದ ಪದ ವಿಯ ತರಗತಿಗಳಲ್ಲಿ ಕನ್ನಡವೇ ಮೊದಲಾದ ಪಠ್ಯ ಗಳು ಇದ್ದೂ ಇಲ್ಲದಂತಾಗಿವೆ.
ಇನ್ನು ಕೆಲವು ಉದಾಹರಣೆಗಳನ್ನು ನೋಡೋಣ. ಇತ್ತೀಚೆಗೆ ನಾನು ಒಂದು ಪ್ರಸಿದ್ಧ ಕಾಲೇಜಿನ ಪ್ರಯೋಗಾಲಯಕ್ಕೆ ಬಾಹ್ಯಪರೀಕ್ಷಕ ನಾಗಿ ಹೋಗಿದ್ದೆ. ಅಲ್ಲಿ ಒಬ್ಬ ವಿದ್ಯಾರ್ಥಿಗೆ ಪಿ.ಎನ್. ಜಂಕ್ಷನ್ ಡಯೋಡ್‌ನಲ್ಲಿ (p-n junction diode) ಪಿ-ಬದಿ ಮತ್ತು ಎನ್ -ಬದಿ ಯನ್ನು ತೋರಿಸು ವಷ್ಟು ಕೌಶಲ ಇಲ್ಲ. ಅದರ ತುದಿ ಗಳನ್ನು ಗುರುತಿಸುವುದು ಜ್ಞಾನವೋ- ಕೌಶಲವೋ?. ಅವನಿಗೆ ತಿಳಿಯಬೇಕಾದುದು ಡಯೋಡ್ ಅಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಇವು ಗಳು ಜ್ಞಾನಕ್ಕೆ ಸಂಬಂಧಿಸಿ ದವು ಗಳಾಗಿದ್ದರೆ, ಅದರ ಎರಡು ತುದಿಗಳನ್ನು ಗುರುತಿಸು ವುದು ಕೌಶಲವಿರಬಹುದು. ಹಾಗೆಯೇ ಅಕೌಂಟೆನ್ಸಿ ಯಂತಹ ವಿಷಯವನ್ನು ಆಮೂಲಾಗ್ರವಾಗಿ ಅಭ್ಯಸಿಸಿ, ಆ ವಿದ್ಯಾರ್ಥಿಗೆ ಚೆಕ್ ಬರೆಯುವುದು ಹೇಗೆ ಎಂದು ಗೊತ್ತಿಲ್ಲದೆ ಹೋದರೆ ಅವನ ಜ್ಞಾನ ಮತ್ತು ಕೌಶಲಗಳೆರಡೂ ಮಣ್ಣುಪಾಲು. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ, ವಿಶ್ವವಿ ದ್ಯಾನಿ ಲಯಗಳು ಪರೀಕ್ಷೆ ನಡೆಸುವ ಭರದಲ್ಲಿ ವಿದ್ಯಾಥಿ ìಗಳಿಗೆ ಕೌಶಲವನ್ನು ಗಳಿಸಲು ಅವ ಕಾಶವೇ ಇಲ್ಲವಾಗಿವೆ. ವರ್ಷಕ್ಕೆ ಎರಡು ಬಾರಿ, ವಿದ್ಯಾರ್ಥಿಗಳಿಂದ ಶುಲ್ಕ ಪಡೆದು, ಪರೀಕ್ಷೆ ನಡೆಸಿ, ಅವರನ್ನು ಪಾಸು ಮಾಡುವುದೇ ಅವುಗಳ ಗುರಿಯಾಗಿದೆ. ಇದು ಅವರ ಆದಾಯದ ಮೂಲವೂ ಆಗಿದೆ. ಅಲ್ಲಿ ವಿದ್ಯಾರ್ಥಿಯ ಕೌಶಲ ಶಿಕ್ಷಕರ ಸಹಿತ ಯಾರಿಗೂ ಬೇಡವಾಗಿದೆ.
Related Articles
Advertisement
ಒಂದು ತಂತ್ರಜ್ಞಾನದ ಅಭಿವೃದ್ಧಿಯ ಹಿಂದೆ ಮೂಲ ವಿಜ್ಞಾನದ ತಣ್ತೀಗಳು ಅಡಗಿವೆ. ರಾಕೆಟ್ ವಿಜ್ಞಾನವೇ ಆದರೂ ಅಲ್ಲಿ ನ್ಯೂಟನ್‌ನ ನಿಯಮಗಳೇ ಅನ್ವಯವಾಗುತ್ತವೆ. ಕ್ಷ- ಕಿರಣಗಳ ಚದುರುವಿಕೆಯ ಜ್ಞಾನ ಮುಂದೆ ಹಲ ವಾರು ತಂತ್ರಜ್ಞಾನಗಳ ಅಭಿವೃದ್ಧಿಗೆ ಸಹಕಾರಿ ಯಾಯಿತು. ಅದೇ ಕಾರಣಕ್ಕೆ ಮೂಲ ವಿಜ್ಞಾನದ ಕೆಲಸಕ್ಕಾಗಿಯೇ ನೊಬೆಲ್ ಪ್ರಶಸ್ತಿ ಗಳನ್ನು ಕೊಡುತ್ತಿದ್ದಾರೆ. ಹಲವಾರು ಸಿದ್ಧಾಂತಗಳ ಮಂಡನೆಯು ಗಣಿತದ ಸಂಕೀರ್ಣ ಸಮಸ್ಯೆ ಗಳನ್ನು ಬಿಡಿಸು ವುದರ ಮೂಲಕ ನಡೆದು, ಮುಂದಕ್ಕೆ ತಂತ್ರ ಜ್ಞಾನದ ಅಭಿವೃದ್ಧಿಗೆ ನಾಂದಿ ಯಾಗಿದೆ. ಆದ ಕಾರಣ ತಂತ್ರಜ್ಞಾನದ ಬೆಳವ ಣಿಗೆಗೆ ಜ್ಞಾನದ ಬಲವಾದ ಅಡಿಪಾಯ ಬೇಕು.
ಯಾವುದೇ ವಿಷಯದ ಮೂಲ ತಣ್ತೀಗಳನ್ನು ಸರಿ ಯಾಗಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎನಿಸು ತ್ತದೆ. ಅವುಗಳನ್ನು ಉಪಯೋಗಿಸುವ ಕೌಶಲತೆಗಳು ಮತ್ತು ಅದರ ಜತೆಗೆ ಸಾಮಾನ್ಯ ಜ್ಞಾನ, ವ್ಯಾವಹಾರಿಕ ಮನೋಧರ್ಮಗಳು, ಸಂಹವನ ಕಲೆಗಳು, ಮಗುವಿಗಿರುವಂತಹ ಕುತೂಹಲ, ವೈಜ್ಞಾನಿಕ ಮನೋಭಾವ, ಸಂಶೋ ಧಕ ಪ್ರವೃತ್ತಿ ಹಾಗೂ ಮಾನವೀಯ ಮೌಲ್ಯ ಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ನಮ್ಮ ಹೊಸ ಶಿಕ್ಷಣ ನೀತಿಯ ಆಶಯ ವಲ್ಲವೇ? ಇದ ರೆಡೆಗೆ ಕಾರ್ಯಪ್ರವೃತ್ತರಾಗೋಣ.
-ಡಾ| ಚಂದ್ರಶೇಖರ ಶೆಟ್ಟಿ ಟಿ., ಮಂಗಳೂರು