Advertisement

Gangavathi:ಗೊಂದಲದ ಮಧ್ಯೆ ಕೃಷಿಕ ಸಮಾಜಕ್ಕೆ 15 ಜನ ನಿರ್ದೇಶಕರ ಅವಿರೋಧ ಆಯ್ಕೆ

08:27 PM Dec 09, 2024 | Team Udayavani |

ಗಂಗಾವತಿ: ಕೃಷಿಕ ಸಮಾಜದ ತಾಲೂಕು ಘಟಕದ ಚುನಾವಣೆಯಲ್ಲಿ 15 ಜನ ನಿರ್ದೇಶಕರು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು. 15 ಸ್ಥಾನಕ್ಕೆ 19 ಜನರು ನಾಮಪತ್ರ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ನಾಲ್ವರು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದರಿಂದ 15 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುವ ಕುರಿತು ಸಹಾಯಕ ತಾಲೂಕು ಕೃಷಿ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಸಂತೋಷ ಪಟ್ಟದಕಲ್ಲು ಪ್ರಕಟಣೆಯಲ್ಲಿ ಘೋಷಣೆ ಮಾಡಿದ್ದಾರೆ.

Advertisement

ಕೃಷಿಕ ಸಮಾಜದ ನೂತನ ನಿರ್ದೇಶಕರಾಗಿ ಮಲ್ಲಿಕಾರ್ಜುನಕ್ಯಾಡೇದ್, ರಮೇಶ ಕುಲಕರ್ಣಿ, ದೇವಪ್ಪಹೂಗಾರ, ಮಲ್ಲೇಶಪ್ಪ, ಮಸ್ಕಿ ಮಂಜುನಾಥ, ಹನುಮಂತಪ್ಪ ಉಪ್ಪಾರ, ಎನ್.ವಾಸುದೇವ ನವಲಿ, ಹುಚ್ಚನಗೌಡ ಹಣವಾಳ, ಕೆ. ಲಿಂಗನಗೌಡ ಹೇರೂರು, ಕುಮಾರೆಪ್ಪ ಸಿಂಗನಾಳ, ಬಿ. ದುರಗಪ್ಪ ಸಿಂಗನಾಳ,ಅಯ್ಯಣ್ಣ ಹೇಮಗುಡ್ಡ, ಅಮರೇಶಪ್ಪ ಗೋನಾಳ, ಜೋಗದ ಹನುಮಂತಪ್ಪ ನಾಯಕ, ಚನ್ನಪ್ಪ ಮಳಿಗಿ ಆಯ್ಕೆಯಾಗಿದ್ದಾರೆ.

ಮೀಸಲಾತಿ ಕಲ್ಪಿಸುವಂತೆ ಆಗ್ರಹ: ಸರಕಾರದ ಅನುದಾನ ಪಡೆಯುವ ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಎಲ್ಲಾ ಜಾತಿಯವರಿಗೆ ಅವಕಾಶ ಕಲ್ಪಿಸುವಂತೆ ರಾಜ್ಯ ಕೃಷಿಕ ಸಮಾಜ ನಿರ್ದೇಶಕರು ಸೇರಿ ಇತರೆ ಪದಾಧಿಕಾರಿಗಳ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮರಿಚೀಕೆಯಾಗಿದ್ದು ಕೂಡಲೇ ಸರಕಾರ ಪ್ರಸ್ತುತ ಕೃಷಿಕ ಸಮಾಜದ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳ ಚುನಾವಣೆ ರದ್ದು ಮಾಡಿ ಮೀಸಲಾತಿ ಕಲ್ಪಿಸಿ ನೂತನ ಮತದಾರರ ಪಟ್ಟಿ ಸಿದ್ಧಪಡಿಸಿ ಮತ್ತೊಮ್ಮೆ ಚುನಾವಣೆ ನಡೆಸುವಂತೆ ಗಂಗಾವತಿ ಸೇರಿ ಹಲವೆಡೆ ಹೋರಾಟ ನಡೆಸಿ ರಾಜ್ಯ ಸರಕಾರದ ಸಚಿವರು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಸರಕಾರ ತಲೆ ಕೆಡಿಸಿಕೊಳ್ಳದೇ ಚುನಾವಣೆ ಪ್ರಕ್ರಿಯೆ ನಡೆಸಿರುವುದಕ್ಕೆ ಬಿಜೆಪಿ ಮುಖಂಡ ಹಾಗೂ ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ವಡ್ರಟ್ಟಿ ವೀರಭದ್ರಪ್ಪ ನಾಯಕ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next