ಮಂಬೈ: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ರಾಜ್ಯದ ಹಲವು ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, “ಬಿಜೆಪಿ ಯಾವತ್ತೂ ಬದಲಾವಣೆಯಲ್ಲಿ ನಂಬಿಕೆ ಇರಿಸುತ್ತದೆ. ಆದರೂ ಕರ್ನಾಟಕದಲ್ಲಿ ಹೆಚ್ಚು ಬದಲಾವಣೆ ನಡೆಸಿಲ್ಲ” ಎಂದರು.
ಇಂಡಿಯಾ ಟುಡೇ ಕರ್ನಾಟಕ ರೌಂಡ್ ಟೇಬಲ್ ನಲ್ಲಿ ಭಾಗವಹಿಸಿದ ಅವರು ಕರ್ನಾಟಕ ರಾಜಕೀಯ, ವಿಧಾನಸಭೆ ಚುನಾವಣೆಯ ಬಗ್ಗೆ ಮಾತನಾಡಿದರು.
ಹಾಲಿ ಶಾಸಕರಿಗೆ ಟಿಕೆಟ್ ತಪ್ಪಲು ಹಿಂದಿರುವ ಕಾರಣ ಎನು ಎಂಬ ಪ್ರಶ್ನೆಗೆ ಉತ್ತರಿಸಿದ ಶಾ, “ಹಲವು ವಿಚಾರಗಳನ್ನು ಗಮನಿಸಿದ ಪಕ್ಷವು ಈ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಟಿಕೆಟ್ ತಪ್ಪಿದ ಶಾಸಕರು ಕಳಂಕಿತರಲ್ಲ. ಈ ಎಲ್ಲಾ ನಾಯಕರು ಉತ್ತಮರು. ಅಷ್ಟೇ ಅಲ್ಲದೆ ಅವರಿಗೆ ಯಾಕೆ ಟಿಕೆಟ್ ನೀಡಲಾಗಿಲ್ಲ ಎಂದು ತಿಳಿಸಲಾಗಿದೆ” ಎಂದರು.
ಇದನ್ನೂ ಓದಿ:Bollywood: ಹಾಡುಗಳಿಲ್ಲದ ಮೊದಲ ಚಿತ್ರ ಕಾನೂನ್, ಹಾಡಿಲ್ಲದ ಕನ್ನಡದ ಪ್ರಥಮ ಚಿತ್ರ ಯಾವುದು?
ಪಕ್ಷದ ನಿರ್ಧಾರದ ಹಿಂದಿನ ಕೆಲವು ಅಂಶಗಳಲ್ಲಿ ಹೊಸ ರಕ್ತ ಮತ್ತು ಪೀಳಿಗೆಯ ಬದಲಾವಣೆಯ ಅವಶ್ಯಕತೆ ಸೇರಿವೆ ಎಂದು ಅವರು ಹೇಳಿದರು ಮತ್ತು ಪಕ್ಷದ ನಾಯಕರು “ಕಳಂಕಿತರು” ಎಂಬ ಊಹಾಪೋಹ ಬೇಡ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ ಶಾ, “ಶೆಟ್ಟರ್ ಅವರೊಂದಿಗೆ ಸೇರಿಕೊಂಡಿದ್ದರಿಂದ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಭಾವಿಸಿದರೆ, ಅವರು ಏಕಾಂಗಿಯಾಗಿ ಗೆಲ್ಲಲು ಸಾಧ್ಯವಿಲ್ಲ ಎಂದು ಅವರು ಒಪ್ಪಿಕೊಂಡ ಹಾಗೆ. ಅಲ್ಲದೆ ಶೆಟ್ಟರ್ ಅವರು ಮಾತ್ರ ಕಾಂಗ್ರೆಸ್ ಗೆ ಸೇರಿದ್ದಾರೆ, ನಮ್ಮ ಮತ ಬ್ಯಾಂಕ್ ಮತ್ತು ನಮ್ಮ ಪಕ್ಷದ ಕಾರ್ಯಕರ್ತರಲ್ಲ. ಬಿಜೆಪಿ ನಾವು ಭಾರಿ ಬಹುಮತದೊಂದಿಗೆ ಮರಳುತ್ತೇವೆ” ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.