Advertisement
ರಫೇಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿಂತೆ ಶುಕ್ರವಾರ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿ ತೀರ್ಪು ಪ್ರಕಟಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಶಾ ಮಾತನಾಡಿದರು.
Related Articles
Advertisement
ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಧಕ್ಕೆ ತರಲು ಯತ್ನಿಸಿದೆ ಎಂದು ದೂರಿದರು. ಒಂದು ವೇಳೆ ಕಾಂಗ್ರೆಸ್ ಬಳಿ ದಾಖಲೆ ಇದ್ದಿದ್ದರೆ ಸುಪ್ರೀಂಕೋರ್ಟ್ ಗೆ ಯಾಕೆ ಹೋಗಲಿಲ್ಲ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನ “ಬಿ” ಟೀಮ್ ಕೋರ್ಟ್ ಮೆಟ್ಟಿಲು ಹತ್ತಿತ್ತು. ಸಂಸತ್ ನಲ್ಲಿ ರಫೇಲ್ ಬಗ್ಗೆ ಚರ್ಚೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗಿತ್ತು. ನಾನು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕುತ್ತಿದ್ದೇನೆ, ಈ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು.
10 ವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ರಫೇಲ್ ಡೀಲ್ ಅನ್ನು ಅಂತಿಮಗೊಳಿಸಿಲ್ಲ ಯಾಕೆಂದರೆ ಅವರಿಗೆ ಬರಬೇಕಿದ್ದ “ಕಮಿಷನ್” ಇತ್ಯರ್ಥವಾಗಿಲ್ಲವಾಗಿತ್ತು ಎಂದು ತಿರುಗೇಟು ನೀಡಿದರು. ರಫೇಲ್ ವಿಚಾರದಲ್ಲಿ ದೇಶದ ಜನತೆಗೆ ಸುಳ್ಳು ಮಾಹಿತಿ ನೀಡಿದ ರಾಹುಲ್ ಗಾಂಧಿ, ದೇಶದ ಜನತೆ ಹಾಗೂ ಸೇನೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.