ನವದೆಹಲಿ: ಭಾರತದ ಸೀರಂ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ಕೊವೊವ್ಯಾಕ್ಸ್ ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್) ಶುಕ್ರವಾರ ಅನುಮತಿ ನೀಡಿದೆ.
ಅಮೆರಿಕದ ನೊವಾವ್ಯಾಕ್ಸ್ ಲಸಿಕೆಯ ಪರವಾನಗಿ ಪಡೆದು, ಅದನ್ನು ಕೊವೊವ್ಯಾಕ್ಸ್ ಹೆಸರಿನಲ್ಲಿ ಉತ್ಪಾದನೆ ಮಾಡಲಾಗುತ್ತಿದೆ.
“ವಿಶ್ವಾದ್ಯಂತ ಕೊರೊನಾ ರೂಪಾಂತರಿಗಳು ಹೆಚ್ಚುತ್ತಿದ್ದರೂ, ಸೋಂಕಿನಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗದಿರಲು ಇರುವ ಏಕೈಕ ಮಾರ್ಗ ಕೊರೊನಾ ಲಸಿಕೆಯಾಗಿದೆ.
ಈಗ ಮತ್ತೊಂದು ಲಸಿಕೆಗೆ ಮಾನ್ಯತೆ ಸಿಕ್ಕಿರುವುದು, ಲಸಿಕೆ ಅಭಿಯಾನದಲ್ಲಿ ಅತ್ಯಂತ ಹಿಂದುಳಿದಿರುವ ರಾಷ್ಟ್ರಗಳಿಗೆ ನೆರವಾಗಲಿದೆ’ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.
ಇದನ್ನೂ ಓದಿ:ಬಿಎಡ್ ಪ್ರವೇಶಕ್ಕೆ ಅವಧಿ ವಿಸ್ತರಣೆ ಇಲ್ಲ: ಅಶ್ವತ್ಥ ನಾರಾಯಣ