Advertisement
ದಕ್ಷಿಣ ಆಫ್ರಿಕಾ ಸರಣಿಯಿಂದ ಸ್ವತಃ ಅನುಮತಿ ಕೇಳಿ ಹೊರಹೋಗಿದ್ದ ಇಶಾನ್ ಕಿಶನ್ ಮುಂದಿನ ಅಫ್ಘಾನಿಸ್ತಾನ ವಿರುದ್ಧದ ಸರಣಿಗೂ ಲಭ್ಯರಾಗಿರಲಿಲ್ಲ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ಸರಣಿಗೂ ಇಶಾನ್ ಆಯ್ಕೆಯಾಗಿಲ್ಲ. ಅಲ್ಲದೆ ಅವರು ರಣಜಿ ಪಂದ್ಯಗಳಲ್ಲಿಯೂ ಆಡದೇ ಇರುವುದು ಅನುಮಾನ ಮೂಡಿಸಿದೆ.
Related Articles
Advertisement
ಬಹುಶಃ ಕಿಶನ್ ಹೊರನಡೆಯುವ ಬದಲು ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಉಳಿಯಬೇಕಾಗಿತ್ತು, ತೆರೆಮರೆಯಲ್ಲಿ ಏನಾದರೂ ನಡೆಯುತ್ತಿರಬಹುದು ಎಂದು ಮಾಜಿ ಬಿಸಿಸಿಐ ಪದಾಧಿಕಾರಿಯೊಬ್ಬರು ಸುಳಿವು ನೀಡಿದರು.
“ಅವರು ಬಹುಶಃ ಕಾಯಬಹುದಿತ್ತು ಮತ್ತು ಟೆಸ್ಟ್ ಸರಣಿಯಲ್ಲಿ ಉಳಿಬಹುದಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ನೀವು ನಿಮ್ಮ ಸ್ವಂತ ಇಚ್ಛೆಯಂತೆ ನಿಮ್ಮ ಸ್ಥಾನವನ್ನು ಬಿಟ್ಟರೆ, ನೀವು ಅದನ್ನು ಮರಳಿ ಪಡೆಯದೇ ಇರುವ ಸಾಧ್ಯತೆ ಕಡಿಮೆ. ದೇಶದಲ್ಲಿ ಅಷ್ಟೊಂದು ಪ್ರತಿಭೆಗಳಿದ್ದಾರೆ’ ಎಂದು ಬಿಸಿಸಿಐನ ಮಾಜಿ ಪದಾಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
“ನೀವು ಆಡುವ ಬಳಗದಲ್ಲಿ ಇಲ್ಲದಿರುವುದರಿಂದ ನೀವು ತಂಡದಿಂದ ಹೊರನಡೆಯುವುದಾಗಿ ಹೇಳಿದರೆ ನಿಮ್ಮ ಕೋಚ್ ಅಥವಾ ಕ್ಯಾಪ್ಟನ್ ನಿಮಗೆ ನೇರವಾಗಿ ಹೇಳುವುದಿಲ್ಲ. ಆದರೆ ಒಂದು ಸೂಕ್ಷ್ಮ ಅಹಂ ಕೆಲಸ ಮಾಡುತ್ತದೆ. ನೀವು ತಂಡದ ಮ್ಯಾನೇಜ್‌ಮೆಂಟ್‌ನ ಆಯ್ಕೆಯನ್ನು ಪ್ರಶ್ನಿಸುತ್ತಿದ್ದೀರಿ ಎಂದರ್ಥ,” ಎಂದು ಅವರು ಹೇಳಿದರು.