Advertisement
ಅಡಿಲೇಡ್ನಲ್ಲಿ ಆಡಲಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಬರೀ ಎರಡೂವರೆ ದಿನದಲ್ಲೇ ಕಳೆದುಕೊಂಡ ಒತ್ತಡದಲ್ಲಿರುವ ಭಾರತ, ಬ್ರಿಸ್ಬೇನ್ನ ವೇಗದ ಟ್ರ್ಯಾಕ್ಗೆ ಹೊಂದಿಕೊಳ್ಳಬೇಕಾದ ಜರೂರತಿದೆ.
Related Articles
Advertisement
ಕೊಹ್ಲಿ ಬ್ಯಾಕ್ಫುಟ್ ಅಭ್ಯಾಸವಿರಾಟ್ ಕೊಹ್ಲಿ ಬ್ಯಾಕ್ಫುಟ್ ಅಭ್ಯಾಸ ನಡೆಸಿದ್ದು ಗಮನ ಸೆಳೆಯಿತು. ಈ ಕುರಿತು ಹರ್ಭಜನ್ ಸಿಂಗ್ ವಿಶ್ಲೇಷಣೆಯೊಂದನ್ನು ಮಾಡಿದ್ದಾರೆ. “ಬ್ರಿಸ್ಬೇನ್ನದ್ದು ವಿಭಿನ್ನ ಟ್ರ್ಯಾಕ್. ಹೆಚ್ಚು ಬೌನ್ಸಿ ಆಗಿದೆ. ಇಲ್ಲಿ ಯಶಸ್ಸು ಕಂಡ ಸ್ಟೀವ್ ವೋ, ಪಾಂಟಿಂಗ್, ಲ್ಯಾಂಗರ್, ಹೇಡನ್ ಅವರೆಲ್ಲ ಉತ್ತಮ ಬ್ಯಾಕ್ಫುಟ್ ಆಟಗಾರರು. ಕೊಹ್ಲಿ ಮೂಲತಃ ಫ್ರಂಟ್ಫುಟ್ ಬ್ಯಾಟರ್. ಆದರೆ ಬ್ರಿಸ್ಬೇನ್ನಂಥ ಬೌನ್ಸಿ ಪಿಚ್ನಲ್ಲಿ ಬ್ಯಾಕ್ಫುಟ್ ಆಟಕ್ಕೆ ಪ್ರಾಧಾನ್ಯ ನೀಡಬೇಕಾಗುತ್ತದೆ. ಹೀಗಾಗಿ ಅವರು ಬ್ಯಾಕ್ಫುಟ್ ಅಭ್ಯಾಸ ನಡೆಸಿದರು’ ಎಂದಿದ್ದಾರೆ. ಆಸ್ಟ್ರೇಲಿಯ ತಂಡ ಈಗಾಗಲೇ ಬ್ರಿಸ್ಬೇನ್ ತಲುಪಿದೆ. ಭಾರತದ ಆಟಗಾರರು ಬುಧವಾರ ಆಗಮಿಸಲಿದ್ದಾರೆ. 3ನೇ ಟೆಸ್ಟ್ ಶನಿವಾರ ಆರಂಭವಾಗಲಿದೆ.