Advertisement
75 ವರ್ಷ ಹಿಂದಿನ ದಕ್ಷಿಣದ ಜಲಿಯನ್‌ವಾಲಾಬಾಗ್ 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ಈಗಿನ ಕಲ್ಯಾಣ ಕರ್ನಾಟಕದ ಭಾಗವನ್ನು ಒಳಗೊಂಡ ಹೈದರಾಬಾದ್ ಪ್ರಾಂತ ಭಾರತದೊಂದಿಗೆ ವಿಲೀನಗೊಂಡದ್ದು 1948ರ ಸೆಪ್ಟಂಬರ್ 17ರಂದು. ಇತರೆಡೆ ಇತ್ತೀಚೆಗಷ್ಟೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆದರೆ, ಈ ಭಾಗ ಇಂದು (ಸೆ.17) ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಕ್ಕೆ ಅಡಿ ಇರಿಸಿದೆ.
Related Articles
Advertisement
ಹಿರಿಯ ಮುತ್ಸದ್ದಿ ಕೆ.ಎಂ.ಮುನ್ಶಿಯವರು ಗುಪ್ತವಾಗಿ ಆಗಮಿಸಿ ವರದಿಯನ್ನು ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಸಲ್ಲಿಸಿದ್ದರು. 1948ರ ಸೆ. 12ರಂದು ಪ್ರಧಾನಿ ಜವಾಹರಲಾಲ್ ನೆಹರೂ ಅವರು ನಿರ್ಣಾಯಕ ಸಭೆ ಕರೆದರು. ಸೇನೆಯ ಜನರಲ್ ಆಗಿದ್ದ ಬುಕರ್ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ ಕೂಡಲೇ ಪಟೇಲರು “ರಾಜೀನಾಮೆ ಕೊಡಿ’ ಎಂದು ಸೂಚನೆ ಇತ್ತರು. ಕಾನೂನು ಸಚಿವರಾಗಿದ್ದ ಡಾ| ಬಿ.ಆರ್.ಅಂಬೇಡ್ಕರ್ ಇದನ್ನು ಪೊಲೀಸ್ ಕಾರ್ಯಾಚರಣೆ ಎಂದು ಹೆಸರಿಸಲು ಸಲಹೆ ನೀಡಿದರು. ಜ| ಚೌಧರಿ ನೇತೃತ್ವದಲ್ಲಿ ಸೇನೆ ಸೆ. 13ರಂದು ಹೈದರಾಬಾದ್ ಮೇಲೆ ಆಕ್ರಮಣ ನಡೆಸಿತು. ಸ್ವತಃ ಪಟೇಲರು ಆಗಮಿಸಿದ್ದರು. ಸೆ. 17ರಂದು ಪಟೇಲರೆದುರು ನಿಜಾಮ ಶರಣಾಗಬೇಕಾಯಿತು. ಜ| ಚೌಧರಿ ಕೆಲವು ಕಾಲ ಸೇನಾಡಳಿತವನ್ನೂ ನಡೆಸಿದರು. ರಜಾಕಾರರ ನಾಯಕ ರಜ್ವಿಗೆ ಹತ್ತು ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸಲಾಯಿತು. ವಿಧಿಯ ಚೋದ್ಯವೆಂದರೆ ಇಡೀ ಕರ್ಮಕಾಂಡಕ್ಕೆ ಉತ್ತರದಾಯಿತ್ವ ಹೊಂದಿದ್ದ ನಿಜಾಮ ಭಾರತದಲ್ಲಿ ಉಳಿದ, ಇವನನ್ನೇ 1952ರಿಂದ 56ರ ವರೆಗೆ ಪ್ರಾಂತದ ರಾಜಪ್ರಮುಖ (ರಾಜ್ಯಪಾಲ) ಎಂದು ಕೇಂದ್ರ ಸರಕಾರ ನೇಮಿಸಿತು. ವಿನೋಬಾ ಬಾವೆಯವರ ಭೂದಾನ ಚಳವಳಿಗೂ ಭೂದಾನ ನೀಡಿದ್ದ. ಕರ್ಮಕಾಂಡಕ್ಕೆ ನಾಯಕತ್ವ ನೀಡಿದ ರಜ್ವಿ ಪಾಕಿಸ್ಥಾನಕ್ಕೆ ಹೋದ, ರಜಾಕಾರರ ಸಂಘಟನೆ ನಿಷೇಧಿತವಾದರೂ ಸಂತತಿ ಬೇರೆ ಹೆಸರಿನಲ್ಲಿ ಇಂದಿಗೂ ಹೈದರಾಬಾದ್‌ನಲ್ಲಿದೆಯಂತೆ.
50 ವರ್ಷಗಳ ಹಿಂದೆ ಹುಲಿ ಸಂರಕ್ಷಣೆ, ಈಗ ಚೀತಾ ಸರದಿಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 50ನೇ ಜನ್ಮವರ್ಷದ ಅಂಗವಾಗಿ 1973ರ ಎ. 1ರಂದು ಹುಲಿ ಸಂರಕ್ಷಣೆ ಯೋಜನೆ ಆರಂಭಿಸಿದರು. ಇದಕ್ಕೆ ಎರಡು ವರ್ಷ ಮುಂಚೆಯೇ ಇಂದಿರಾ ಅವರು ಹುಲಿಯಂತೆ ಗರ್ಜಿಸಿ ಪಾಕಿಸ್ಥಾನದ ಯುದ್ಧದಲ್ಲಿ ಜಯ ಸಾಧಿಸಿ ಹೊಸದಾಗಿ ಬಾಂಗ್ಲಾದೇಶ ಉದಯಿಸುವಂತೆ ಮಾಡಿದ್ದರು. ಹುಲಿ ಸಂರಕ್ಷಣೆ ಯೋಜನೆಯಿಂದ 50 ವರ್ಷಗಳಲ್ಲಿ ಹುಲಿ ಸಂತತಿ 3,000 ದಾಟಿದೆ. ತಜ್ಞರು ಹೇಳುವ ಪ್ರಕಾರ ಎಷ್ಟೋ ಮೀಸಲು ಅರಣ್ಯ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಹುಲಿಗಳ ಸಂಖ್ಯೆಯ ಗಣತಿ ನಡೆದಿಲ್ಲ. ಇಂದಿರಾ ಗಾಂಧಿ ಅವರು ಹುಲಿ ಯೋಜನೆ ಆರಂಭಿಸುವ ಹಿಂದೆ ದಟ್ಟ ಅರಣ್ಯ ಪ್ರದೇಶಗಳ ಸಂರಕ್ಷಣೆ ಗುರಿಯೂ ಇತ್ತು ಎನ್ನಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಮತ್ತು ಅನಂತರ ಬೇಟೆಯಾಡುವುದು, ಕಾಡುಗಳನ್ನು ನಾಶಪಡಿಸುವುದು ಎಗ್ಗಿಲ್ಲದೆ ನಡೆಯುತ್ತಿದ್ದ ಕಾರಣ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯ ಸಂರಕ್ಷಣೆಯ ಗುರಿ ಸಾಧಿಸಲಾಯಿತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು 71ನೇ ವಯಸ್ಸಿನಲ್ಲಿ ತಮ್ಮ ಜನ್ಮದಿನವಾದ ಸೆ. 17ರಂದು ಚೀತಾ ಸಂರಕ್ಷಣೆ ಯೋಜನೆಯನ್ನು ಆರಂಭಿಸುತ್ತಿದ್ದಾರೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಅದೇ ವರ್ಷ ಚೀತಾದ ಕೊನೆಯ ಸಂತತಿ ನಾಶವಾಯಿತು. ಚೀತಾ ಸಾಮಾನ್ಯವಾಗಿ ಚಿರತೆ ರೀತಿಯಲ್ಲಿ ಕಂಡುಬರುತ್ತದೆಯಾದರೂ ಇದರ ಓಟ ಇತರ ಪ್ರಾಣಿಗಳಿಗೆ ಅಸಾಧ್ಯ. ಚಿರತೆ ರಾತ್ರಿ ವೇಳೆ ಹೊಂಚು ಹಾಕಿ ಬೇಟೆಯಾಡಿದರೆ ಚೀತಾ ಹಗಲಿನಲ್ಲಿ ಬೇಟೆಯಾಡುತ್ತದೆ. ಚಿರತೆ ದಟ್ಟಾರಣ್ಯದಲ್ಲಿ ಬದುಕಿದರೆ, ಚೀತಾಗಳಿಗೆ ದಟ್ಟಾರಣ್ಯದಲ್ಲಿ ಓಡಲು ಕಷ್ಟಸಾಧ್ಯವಾಗಿರುವುದರಿಂದ ಹುಲ್ಲುಗಾವಲು ಅಗತ್ಯ. ಇಂತಹ ಹುಲ್ಲುಗಾವಲಿನ ವಾತಾವರಣ ಭಾರತದಲ್ಲಿ ಕಡಿಮೆ ಇದೆ. ಇಂತಹ ವಾತಾವರಣ ಸೃಷ್ಟಿಸಬೇಕಾಗಿದೆ ಎನ್ನುವ ಅಭಿಪ್ರಾಯ ವನ್ಯಜೀವಿ ವಿಜ್ಞಾನಿಗಳದು. -ಮಟಪಾಡಿ ಕುಮಾರಸ್ವಾಮಿ