Advertisement

ಭರಮ ಸಮುದ್ರ ಗ್ರಾಮಕ್ಕೆ ಸ್ವಚ್ಛತಾ ಭಾಗ್ಯ ಎಂದು?

07:26 AM Mar 19, 2019 | Team Udayavani |

ಜಗಳೂರು: ಭರಮ ಸಮುದ್ರ ಗ್ರಾಮದಲ್ಲಿ ಕಳೆದ ಸುಮಾರು ಒಂದು ವರ್ಷದಿಂದ ಚರಂಡಿಗಳನ್ನು ಸ್ವತ್ಛ ಮಾಡದೇ ಇರುವುದರಿಂದ ಗ್ರಾಮದ ತುಂಬ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದರೂ ಸಹ ಗ್ರಾಮ ಪಂಚಾಯಿತಿಯವರು ದಿವ್ಯ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ತಾಲೂಕಿನ ಹನುಮಂತರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಭರಮ ಸಮುದ್ರ ಗ್ರಾಮದಲ್ಲಿ ಸುಮಾರು 450 ಕುಟುಂಬಗಳು ವಾಸವಾಗಿವೆ. ಗ್ರಾಮ ಮಟ್ಟದಲ್ಲಿ ಸ್ವತ್ಛತಾ ಕಾರ್ಮಿಕರು ಇಲ್ಲದೇ ಇರುವುದರಿಂದ ಇತರೆ ಅನುದಾನದಲ್ಲಿಯೇ ಕೆಲ ಜನರಿಗೆ ಹಣ ನೀಡಿ ಆಗಾಗ ಚರಮಡಿಗಳನ್ನು ಸ್ವತ್ಛಗೊಳಿಸುವ ಪರಿಪಾಠ ಇದೆ. ಗ್ರಾಮದ ಚರಂಡಿಗಳನ್ನು ಕಳೆದ ಒಂದು ವರ್ಷದಿಂದ ಸ್ವತ್ಛಗೊಳಿಸದೇ ಇರುವುದರಿಂದ ಹೋಳು ತುಂಬಿ ನೀರು ನಿಂತು ಸೊಳ್ಳಗಳ ಉತ್ಪತ್ತಿ ತಾಣವಾಗಿದೆ.

ಕುಡಿಯುವ ನೀರಿನ ಟ್ಯಾಂಕ್‌ ಪಕ್ಕದಲ್ಲೇ ಚರಂಡಿ ತುಂಬಿ ಗಬ್ಬು ನಾರುತ್ತಿದೆ. ವಿಧಿ ಇಲ್ಲದೇ ಗ್ರಾಮಸ್ಥರು ಈ ನೀರನ್ನೇ ಕುಡಿಯುವಂತಾಗಿದೆ.

ಹಗಲು-ರಾತ್ರಿ ಸೊಳ್ಳೆಗಳ ಕಾಟ ತಡೆಯಲಾಗುತ್ತಿಲ್ಲ. ಗ್ರಾಮದಲ್ಲಿ ಡೆಂಘೀ, ಚಿಕೂನ್‌ ಗುನ್ಯಾದಂತಹ ರೋಗಗಳು ಹರಡುತ್ತಿವೆ. ಅಲ್ಲದೇ ಪ್ರತಿ ನಿತ್ಯ ಆಸ್ಪತ್ರೆಗೆ ಹೊಗುವುದೇ ನಮ್ಮ ಕೆಲಸವಾಗಿದೆ ಎಂದು ಗ್ರಾಮಸ್ಥರಾದ ಕುರಿ ತಿಪ್ಪಯ್ಯ , ಕಲ್ಪನಮ್ಮ, ತಿಪ್ಪೇಸ್ವಾಮಿ ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

ಗ್ರಾಪಂ ನಿರ್ಲಕ್ಷ್ಯ: ಚರಂಡಿಯನ್ನು ಸ್ವತ್ಛಗೊಳಿಸುವಂತೆ ಗ್ರಾಪಂ ಅಧಿಕಾರಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ. ಸಮಸ್ಯೆಗಳನ್ನು ಹೇಳಿಕೊಳ್ಳಲು ಪಂಚಾಯಿತಿಗೆ ಹೊದರೆ ಪಿಡಿಒ ಸಿಗುವುದಿಲ್ಲ. ಯಾವಾಗಲೂ 
ದಾವಣಗೆರೆಯಲ್ಲಿರುತ್ತಾರೆ. ಪಿಡಿಒ ಕಾರ್ಯ ವೈಖರಿ ಬಗ್ಗೆ ತಾಪಂ ಇಒ ಜಾನಕಿರಾಮ್‌ ಅವರಿಗೆ ತಿಳಿಸಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

Advertisement

ಸ್ವತ್ಛ ಭಾರತ ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅದನ್ನು ಕಾರ್ಯ ರೂಪಕ್ಕೆ ಮಾತ್ರ ತರುವುದಿಲ್ಲ. ಆದಷ್ಟು ಬೇಗ ಗ್ರಾಮದ ಚರಂಡಿಗಳನ್ನು ಸ್ವತ್ಛ ಮಾಡದೇ ಹೋದಲ್ಲಿ ಚುನಾವಣೆ ಬಹಿಷ್ಕಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಚರಂಡಿ ಸ್ವತ್ಛತೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಜಿಪಂ ಸಿಇಒ, ತಾಪಂ ಇಒಗೆ ಮನವಿ ಸಲ್ಲಿಸಿ 3 ತಿಂಗಳು ಕಳೆದರೂ ಸಹ ಸ್ವತ್ಛತೆ ಭಾಗ್ಯ ನಮ್ಮ ಗ್ರಾಮಕ್ಕೆ ದೊರೆತಿಲ್ಲ.
 ವೀರಣ್ಣ, ಗ್ರಾಪಂ ಸದಸ್ಯ 

ಗ್ರಾಮದ ಸಮಸ್ಯೆ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಇನ್ನೆರಡು ದಿನಗಳೊಳಗೆ ಚರಂಡಿಗಳನ್ನು ಸ್ವತ್ಛಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಲಾಗುವುದು.
ಜಾನಕಿರಾಮ್‌, ತಾಪಂ ಇಒ, ಜಗಳೂರು.

Advertisement

Udayavani is now on Telegram. Click here to join our channel and stay updated with the latest news.

Next