Advertisement
ವಳಕಾಡು ಪ್ರೌಢಶಾಲೆ ಸಮೀಪವೇ ಡ್ರೈನೇಜ್ ಚೇಂಬರ್ ದುರಸ್ತಿಪಡಿಸುವ ನಿಟ್ಟಿನಲ್ಲಿ ಗುಂಡಿಯನ್ನು ತೋಡಲಾಗಿದ್ದು, ಹಲವು ದಿನಗಳಿಂದ ಕಾಮಗಾರಿ ಮುಂದಕ್ಕೆ ಸಾಗದೇ ತಟಸ್ಥವಾಗಿದೆ. ಈಗಾಗಲೇ 15 ದಿನ ಕಳೆದು ಹೋಗಿದ್ದು, ವ್ಯವಸ್ಥಿತ ಕಾಮಗಾರಿ ನಡೆಯದೇ ಜನರು ತೊಂದರೆ ಅನುಭವಿಸುವಂತಾಗಿದೆ.
Related Articles
Advertisement
ಹಳೆ ಯುಜಿಡಿ ಪೈಪ್‌ಲೈನ್ ಕುಸಿದಿದ್ದು, ಇದರ ದುರಸ್ತಿ ಕಾರ್ಯ ಸಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಜನರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡು ಕಾಮಗಾರಿ ಪೂರ್ಣ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.-ರಜನಿ ಹೆಬ್ಟಾರ್, ಉಪಾಧ್ಯಕ್ಷೆ, ವಳಕಾಡು ವಾರ್ಡ್ ಸದಸ್ಯೆ, ನಗರಸಭೆ ಉಡುಪಿ ಒಳಚರಂಡಿ ವ್ಯವಸ್ಥೆ ಅಪೂರ್ಣ
ನಗರವು ಕಳೆದ 10 ವರ್ಷದಲ್ಲಿ ಶರವೇಗದಲ್ಲಿ ಬೆಳೆಯುತ್ತಿದ್ದರೂ ಅದಕ್ಕೆ ಪೂರಕವಾಗುವ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ(ಯುಜಿಡಿ) ರೂಪುಗೊಂಡಿಲ್ಲ. ಎಲ್ಲೆಲ್ಲಿ ಸಮಸ್ಯೆಗಳಿವೆಯೊ ಅಲ್ಲಲ್ಲಿ ನೋಡಿಕೊಂಡು ಇಂತಿಷ್ಟು ಅನುದಾನ ಮೀಸಲಿಟ್ಟು ಆಗಾಗ ಯುಜಿಡಿ ಕಾಮಗಾರಿಗಳನ್ನು ರೂಪಿಸಲಾಗುತ್ತದೆ. ಇಡೀ ನಗರಕ್ಕೆ ಮುಂದಿನ 50 ವರ್ಷಗಳ ದೂರದೃಷ್ಟಿಯೊಂದಿಗೆ ಶಾಶ್ವತ ಯುಜಿಡಿ ಯೋಜನೆಗೆ ಕಾಲ ಇನ್ನೂ ಕೂಡಿ ಬಂದಿಲ್ಲ. ಹಿಂದಿನ ಸರಕಾರದಲ್ಲಿ ಯುಜಿಡಿ ಅನುದಾನಕ್ಕೆ ಗರಿಷ್ಠ ಪ್ರಯತ್ನ ನಡೆದರೂ, ಅನುದಾನ ಬಿಡುಗಡೆಗೊಳ್ಳದೆ ಇಂದಿಗೂ ಈ ಯೋಜನೆ ನನೆಗುದಿಗೆ ಬಿದ್ದಿದೆ. ಕುಸಿಯುತ್ತಿದೆ ಹಳೆ ಯುಜಿಡಿ
ಹಳೆ ಕಾಲದ ಯುಜಿಡಿ ಪೈಪ್‌ಲೈನ್ ಹಾನಿಗೊಳಗಾಗುವುದು, ಕುಸಿಯುವ ಮೂಲಕ ಅಲ್ಲಲ್ಲಿ ಬ್ಲಾಕ್ ಆಗಿ ಜನರು ತೊಂದರೆಪಡುವಂತ ಸ್ಥಿತಿ ನಿರ್ಮಾಣಗೊಂಡಿದೆ. ಒಂದು ಕಡೆ ಕುಸಿದು ಹಾನಿಯಾಗಿ ಬ್ಲಾಕ್ ಆದಲ್ಲಿ ಅದನ್ನು ತೆರವುಗೊಳಿಸಿ ದುರಸ್ತಿಪಡಿಸಲು ಹಲವು ದಿನಗಳೇ ಬೇಕಾಗಿರುತ್ತದೆ. ಸುಲಭದಲ್ಲಿ ಕಾಮಗಾರಿ ನಿರ್ವಹಿಸುವ ಅತ್ಯಾಧುನಿಕ ಪರಿಕರ, ಅಗತ್ಯ ಕಾಮಗಾರಿಗೆ ಸೂಕ್ತ ಅನುದಾನ ಮೀಸಲಿಡುವ ನಿಟ್ಟಿನಲ್ಲಿ ನಗರಸಭೆ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.