Advertisement
ಸೋಮವಾರದಿಂದ ಅನ್‌ಲಾಕ್ 1.0 ಜಾರಿಯಾಗುತ್ತದೆ. ಆದರೆ ಸದ್ಯ ಕೋವಿಡ್-19 ಜತೆ ಜತೆಗೇ ಬದುಕಬೇಕಾದ ಸ್ಥಿತಿ ಇದ್ದು, ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಲಾಕ್‌ಡೌನ್ ಅವಧಿ ಮತ್ತು ಸಡಿಲಿಕೆ ಅವಧಿಗೆ ಹೋಲಿಸಿದರೆ ಪ್ರಸ್ತುತ ಸೋಂಕು ಪ್ರಕರಣಗಳ ಸಂಖ್ಯೆ ಸಾಕಷ್ಟು ಏರುಗತಿಯಲ್ಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಅನಗತ್ಯ ಸಂಚಾರಕ್ಕೆ ಮುಂದಾಗಬಾರದು ಎಂದು ಸರಕಾರ ಹೇಳು ತ್ತಿದ್ದರೂ ಸೋಂಕುಪೀಡಿತರ ಸಂಖ್ಯೆ ಹಲವು ಪಟ್ಟು ಹೆಚ್ಚುತ್ತಿದೆ. ಹೀಗಾಗಿ ಎಚ್ಚರ ಇರಲೇಬೇಕು.
ನಿರ್ಬಂಧ ಸಡಿಲಿಕೆಯ ಮೊದಲ ಹಂತದಲ್ಲಿ ದೇವಸ್ಥಾನ, ಪ್ರಾರ್ಥನ ಮಂದಿರಗಳು,ಮಾಲ್‌ಗಳ ಆರಂಭಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಇತರ ಧಾರ್ಮಿಕ ಕೇಂದ್ರ,ಪ್ರಾರ್ಥನ ಮಂದಿರಗಳಲ್ಲೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಧಾರ್ಮಿಕ ಚಟುವಟಿಕೆಗಳು ಆರಂಭವಾಗಲಿವೆ. ಸಿಗಲಿದೆ ಹೊಟೇಲ್ ಊಟ, ಉಪಾಹಾರ
ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಸೋಮವಾರ ಸ್ಥಳದಲ್ಲೇ ತಿಂಡಿ, ಊಟ ಒದಗಿಸಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ ರಕ್ಷಣೆ, ಗ್ರಾಹಕರ ಸಂಖ್ಯೆಗೆ ಮಿತಿ ಮತ್ತಿತರ ಷರತ್ತುಗಳೊಂದಿಗೆ ಇವು ತೆರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಜನರ ಓಡಾಟ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
Related Articles
Advertisement
ಇರಲಿ ಮೈತುಂಬ ಎಚ್ಚರಒಂದೆಡೆ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಮತ್ತೂಂದೆಡೆ ಲಾಕ್‌ಡೌನ್ ತೆರವಾಗುತ್ತಿದ್ದು, ಇದರಿಂದ ಜನಸಂದಣಿ ಇನ್ನಷ್ಟು ಹೆಚ್ಚಲಿದೆ. ಇಂತಹ ಸಂದರ್ಭ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಬೆಲೆ ತೆರಲು ಕಾರಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರಕ್ಕಿಂತ ತೆರೆದುಕೊಳ್ಳಲಿರುವ ಕೇಂದ್ರಗಳು, ಜನರ ಜವಾಬ್ದಾರಿಯೇ ಹೆಚ್ಚಿದೆ. ನಮ್ಮ ಮುಂದಿನ ನಡೆ ಹೇಗಿರಬೇಕು ಎಂಬ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.
-ನಿರ್ಬಂಧ ತೆರವಾಗಿದೆ ಎಂಬ ನೆಪದಲ್ಲಿ ಅನಗತ್ಯ ಓಡಾಟ ಸರಿಯಲ್ಲ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬಂದು ಸಂಚಾರ ನಡೆಸೋಣ.
-ಉತ್ಸವಗಳು, ಮದುವೆ ಮತ್ತಿತರ ಸಂಭ್ರಮ ಮನೆಗೇ ಸೀಮಿತವಾಗಿರಲಿ.
-ಮುಖಗವಸು, ಸ್ಯಾನಿಟೈಸರ್ ಮತ್ತಿತರ ಮುನ್ನೆಚ್ಚರಿಕೆಯನ್ನು ಕೈಗೊಳ್ಳುವಲ್ಲಿ ರಾಜಿ ಸಲ್ಲದು.
-ಎಷ್ಟೇ ತುರ್ತು ಇದ್ದರೂ ದೈಹಿಕ ಅಂತರ ಕಾಪಾಡೋಣ.
-ದೇಗುಲ,ಚರ್ಚ್,ಮಸೀದಿಗಳಿಗೆ ಏಕಾಏಕಿ ಭಕ್ತರ ದಂಡು ಹೆಚ್ಚಾಗಬಹುದು. ಹಾಗಾಗಿ ಸದ್ಯಕ್ಕೆ ಭೇಟಿಯನ್ನು ಸಾಧ್ಯವಾದಷ್ಟು ಮುಂದೂಡುವುದು ಸೂಕ್ತ.
-ಪ್ರಧಾನಿ ಮೋದಿ ಹೇಳಿದಂತೆ ಸಾಧ್ಯವಾದಷ್ಟು ತಂತ್ರಜ್ಞಾನಗಳ ಬಳಕೆ ಆಗಲಿ.
-ಸರಕಾರಿ ಕಚೇರಿ,ಕಂಪೆನಿಗಳಲ್ಲಿ ಅಧಿಕಾರಿ ಮಟ್ಟದ ಸಭೆಗಳು ವೀಡಿಯೋ ಕಾನ್ಫರೆನ್ಸ್ ಮೂಲ ಕವೇ ಮುಂದುವರಿಯಲಿ.
-ಕೋವಿಡ್-19ಕ್ಕೆ ಸಂಬಂಧಿಸಿದಂತೆ ಸರಕಾರ ನೀಡಿರುವ ಸೂಚನೆಗಳನ್ನು ತಪ್ಪದೆ ಪಾಲಿಸೋಣ.