ಆದರೆ ಇಲ್ಲಿಯವರೆಗೂ 15-20 ರೀತಿಯ ವಹಿವಾಟುಗಳನ್ನು ನಡೆಸಿದ್ದೇನೆ. ನನ್ನ 16ನೇ ವಯಸ್ಸಿನಲ್ಲಿಯೇ ನಾನು ಆರ್ಥಿಕವಾಗಿ ಸ್ವತಂತ್ರವಾ ಗಿರುವುದನ್ನು ಕಲಿತೆ. ಹೀಗೆ ಕಲಿತದ್ದು ಒಂದು ರೀತಿಯ ಅನಿವಾರ್ಯತೆಯಿಂದಲೇ. ಏಕೆಂದರೆ ನಮ್ಮ ಮನೆಯಲ್ಲಿ ಹಠಾತ್ತನೆ ಹಣಕಾಸಿನ ತೊಂದರೆ ಎದುರಾಗಿಬಿಟ್ಟಿತ್ತು. ಹೀಗಾಗಿ, ಹಣ ಗಳಿಸುವುದು ಏಕೈಕ ದಾರಿಯಾಗಿತ್ತು. ಆರಂಭದಲ್ಲಿ ನಾನು ಮೆಹಂದಿಯ ಕೋನ್‌ಗಳನ್ನೂ ಮಾರುತ್ತಿದ್ದೆ, ಅದರಿಂದ ಬಂದ ಹಣದಲ್ಲೇ ಪೈರೇಟೆಡ್ ಸಿಡಿಗಳನ್ನು(ಸಿನೆಮಾಗಳ ನಕಲು ಮಾಡಿದ ಸಿಡಿ)ಗಳನ್ನು ಮಾರಲಾರಂಭಿಸಿದೆ. ಅನಂತರ ಒಂದು ಚಿಕ್ಕ ಇಂಟರ್ನೆಟ್ ಕೆಫೆಯನ್ನು ಆರಂಭಿಸಿದೆ, ಅದರಲ್ಲೇ ಮಕ್ಕಳಿಗೆ ಕಂಪ್ಯೂಟರ್ ಕ್ಲಾಸ್‌ಗಳನ್ನೂ ಹೇಳಿಕೊಡಲಾರಂಭಿಸಿದೆ. ಇವೆಲ್ಲದರ ಜತೆಗೇ ಕಾಲೇಜು ಶಿಕ್ಷಣವನ್ನೂ ಮುಗಿಸಿದೆ.
Advertisement
ನಾನು ಉದ್ಯಮಿಯಾಗಿರುವುದರಿಂದ ಅನೇಕರು ನಾನು ಬ್ಯುಸಿನಸ್ ಸ್ಕೂಲ್‌ನಲ್ಲಿ ಓದಿರಬಹುದು ಅಥವಾ ಎಂಬಿಎ ಮಾಡಿರಬಹುದು ಎಂದು ಭಾವಿಸುತ್ತಾರೆ. ಆದರೆ ನಾನು ತತ್ವಶಾಸ್ತ್ರದಲ್ಲಿ ಪದವೀಧರ. ಇನ್ನು ಮನಶಾಸ್ತ್ರದಲ್ಲೂ ಸಾಧ್ಯವಾದಷ್ಟೂ ಅಧ್ಯಯನ ಮಾಡುತ್ತಿರುತ್ತೇನೆ. ಈ ಕಾರಣದಿಂದಲೇ ಒಂದು ರೀತಿಯಲ್ಲಿ ನನಗೆ ಮನುಷ್ಯನ ಅಗತ್ಯಗಳೇನು, ಅವನಿಗೆ ಏನು ಬೇಕು ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.
ನಮ್ಮ ದೇಶದ ಅತೀ ದೊಡ್ಡ ಶಾಪವೆಂದರೆ, ಅತ್ಯಂತ ಸರಳ, ಮೂರ್ಖ ಪರೀಕ್ಷೆಗಳನ್ನು ಎದುರಿಸುವುದಕ್ಕಾಗಿ ನಾವೆಲ್ಲ ಕೋಚಿಂಗ್ ಕ್ಲಾಸುಗಳಿಗೆ ಸೇರುತ್ತಿದ್ದೇವೆ. ಹೇಗೋ ಬಾಯಿಪಾಠ ಮಾಡಿ ಪರೀಕ್ಷೆಗಳನ್ನೇನೋ ಪಾಸು ಮಾಡಿಬಿಡುತ್ತೇವೆ, ಆದರೆ ನಾವು ಏನನ್ನೂ ಅರ್ಥಮಾಡಿ ಕೊಂಡಿರುವುದಿಲ್ಲ! ನಿಮಗೆ ಜಗತ್ತಿನ ಕಾರ್ಯನಿರ್ವಹಣೆಯ ಬಗ್ಗೆ ಅರಿವಿಲ್ಲ ಎಂದಾದರೆ ನೀವು ಬೃಹತ್ತಾಗಿ ಬೆಳೆಯಲು ಸಾಧ್ಯವೇ ಇಲ್ಲ.
Related Articles
Advertisement
ದುರದೃಷ್ಟವಶಾತ್ ಈಗಲೂ ಕಾಲೇಜುಗಳು 1990ರ ಕನ್ನಡಕದಲ್ಲೇ ಇಂದಿನ ಉದ್ಯಮ ಮಾದರಿಯನ್ನು ನೋಡುತ್ತವೆ.ಯೂಟ್ಯೂಬ್‌ನಲ್ಲಿ ಏನು ನೋಡುತ್ತೀರಿ? ನಾನು ಯುವಕರಿಗೆ ಹೇಳುವುದು ಇಷ್ಟೆ. ಇವನ್ನೆಲ್ಲ ತಿಳಿಯಲು ಎಲ್ಲೋ ಹೋಗಬೇಕಿಲ್ಲ. ಒಮ್ಮೆ ಯೂಟ್ಯೂಬ್‌ಗ ಹೋಗಿ ಗಮನಿಸಿ. ಜಗತ್ತಿನ ಅತ್ಯಂತ ಸರ್ವಶ್ರೇಷ್ಠ ವಿವಿಗಳ ಸಾವಿರಾರು ಗಂಟೆಗಳ ಪಾಠಗಳು ಯೂಟ್ಯೂಬ್‌ನಲ್ಲೇ ಇವೆ, ಬಹು ದೊಡ್ಡ ಉದ್ಯಮಿಗಳು ತಮ್ಮ ವಹಿವಾಟಿನ ಆಳಅಗಲಗಳನ್ನು, ತಾವು ಎದುರಿಸುತ್ತಿರುವ ಸವಾಲುಗಳನ್ನು, ಅದರಿಂದ ಹೊರಬಂದ ಬಗೆಯನ್ನು ವಿವರಿಸಿದ ವೀಡಿಯೋ ಗಳಿರುತ್ತವೆ. ಆದರೆ ಇಂಥ ವೀಡಿಯೋಗಳನ್ನೆಲ್ಲ ಕೇವಲ 5 ಸಾವಿರ ಅಥವಾ 6 ಸಾವಿರ ಮಂದಿ ನೋಡಿರುತ್ತಾರೆ. ಅದನ್ನು ಗಮನಿಸಿದಾಗಲೆಲ್ಲ, ಅಯ್ಯೋ, ಅಂತರ್ಜಾಲದಲ್ಲಿ ಚಿನ್ನದ ಗಣಿಯೇ ಇದೆ. ಆದರೆ ಯಾರೂ ಇದರತ್ತ ನೋಡುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ಒಂದು ವಿಷಯ ಅರ್ಥ ಮಾಡಿಕೊಳ್ಳಿ, ನಾವ್ಯಾರೂ ಕಾಲೇಜಿನಿಂದ ಬುದ್ಧಿವಂತರಾಗಿಲ್ಲ, ನಿರಂತರ ತಿಳಿದುಕೊಳ್ಳುವ ಕುತೂಹಲದಿಂದ, ಸ್ವಪ್ರಯತ್ನ ದಿಂದ ಬೆಳೆದವರು. ಒಂದು ಯಶಸ್ವಿ ಉದ್ಯಮವನ್ನು ಆರಂಭಿಸಲು ಏನು ಮುಖ್ಯ ಎನ್ನುವುದನ್ನು ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಎರಡು ಮುಖ್ಯ ಸಂಗತಿಗಳನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಜನರಿಗೆ ಏನು ಬೇಕು ಎನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿ ಕೊಳ್ಳುವುದು. ಎರಡನೆಯದು, ಜನ ಅದಕ್ಕಾಗಿ ಹಣ ನೀಡಲು ಸಿದ್ಧರಿದ್ದಾರಾ ಎನ್ನುವುದನ್ನು ತಿಳಿದುಕೊಳ್ಳುವುದು. ಬಹುತೇಕ ಉದ್ಯಮಗಳು ಹಾಗೂ ಈಗೀಗ ಅನೇಕ ಸ್ಟಾರ್ಟ್ ಅಪ್‌ಗ್ಳು ಈ ವಿಚಾರದಲ್ಲಿ ಎಡವಿಬಿಡುತ್ತವೆ.
ಇವೆಲ್ಲದರ ಜತೆಗೆ ಇನ್ನೊಂದು ವಿಷಯ ಹೇಳಲೇಬೇಕು. ಉದ್ಯಮ ಎನ್ನುವುದು ನಮ್ಮ ಜ್ಞಾನದ, ತಿಳಿವಳಿಕೆಯ ಅನುಷ್ಠಾನ. ಭಾರತೀಯರ ಸಮಸ್ಯೆಯೇನೆಂದರೆ, ನಮ್ಮಲ್ಲಿ ಜ್ಞಾನಿಗಳು ಬಹಳ ಇದ್ದಾರೆ, ಆದರೆ ಅನುಷ್ಠಾನಕ್ಕೆ ತರುವವರು ಕಡಿಮೆ. ಅನೇಕರು ಪ್ರೇರಣಾದಾಯಕ ಭಾಷಣಗಳನ್ನು, ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಎಷ್ಟು ಅಂಟಿಕೊಂಡಿರುತ್ತಾರೆಂದರೆ, ಅದನ್ನು ಬಿಟ್ಟು ಅವರು ಬೇರೇನೂ ಮಾಡುವುದಿಲ್ಲ. ಅನುಷ್ಠಾನದ ವಿಚಾರದಲ್ಲಿ ಅವರದ್ದು ಶೂನ್ಯ ಸಾಧನೆ. ಹೇಗೆ ಒಂದು ಆ್ಯಪ್ ನಿರ್ಮಾಣವಾಗುತ್ತದೆ, ಹೇಗೆ ಒಂದು ಕಂಪೆನಿ ಬೆಳೆದು ನಿಲ್ಲುತ್ತದೆ, ಅದು ಎದುರಿಸಿದ ಸವಾಲುಗಳೇನು, ಆ ಸವಾಲುಗಳನ್ನು ಅದು ಹೇಗೆ ಮೆಟ್ಟಿ ನಿಂತಿತು, ಹೇಗೆ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸುತ್ತದೆ, ಹೇಗೆ ಉತ್ತಮ ಹೂಡಿಕೆ ಮಾಡಬೇಕು, ಹೇಗೆ ಹಣ ಉಳಿತಾಯ ಮಾಡಬೇಕು…ಒಟ್ಟಲ್ಲಿ ಯಾವ ಮಾಹಿತಿ ಬೇಕಿದ್ದರೂ ನಮಗೆ ಇಂದು ಉಚಿತವಾಗಿ ಸಿಗುತ್ತಿದೆ. ಆದರೆ ನಾವು ಅದನ್ನು ಗಮನಿಸುತ್ತಿದ್ದೀವಾ? ಕಳೆದ ಕೆಲವು ವರ್ಷಗಳ ಗೂಗಲ್ ಸರ್ಚ್‌ಗಳನ್ನು ನೋಡಿ, “ಹೇಗೆ’ ಎನ್ನುವ ಪದವನ್ನು ಹುಡುಕುವವರ ಸಂಖ್ಯೆಯೇ ಕಡಿಮೆಯಾಗಿಬಿಟ್ಟಿದೆ. ಅಂತರ್ಜಾಲವನ್ನು ನಾವೀಗ ಹೊತ್ತು ಕಳೆಯುವ ಮಾರ್ಗವಾಗಿ ಬದಲಿಸಿ ಬಿಟ್ಟಿದ್ದೇವೆ. ಒಂದಷ್ಟು ಸಮಯ ಫೇಸ್‌ಬುಕ್‌ನಲ್ಲಿ ಕಳೆಯುತ್ತೇವೆ, ಅಲ್ಲಿ ಸಾಕು ಎನಿಸಿದಾಗ ವಾಟ್ಸ್‌ಆ್ಯಪ್ ಚೆಕ್ ಮಾಡುತ್ತೇವೆ, ಅದಿಲ್ಲದಿದ್ದರೆ ಯೂಟ್ಯೂಬ್‌ಗ ಬಂದು ಯಾವುದೋ ಟೈಂಪಾಸ್ ವೀಡಿಯೋ ನೋಡುತ್ತೇವೆ, ಅಲ್ಲಿಗೆ ದಿನ ಮುಗಿದುಹೋಗುತ್ತದೆ. ಮನುಷ್ಯನಿಗೆ ಟೈಂಪಾಸ್ ಆಗುವುದು ಬಹಳ ಮುಖ್ಯ, ಆದರೆ, ಟೈಂಪಾಸ್ ಮಾಡುವುದೇ ಬದುಕಾಗಬಾರದಲ್ಲ? – ಕುನಾಲ್ ಶಾ, ಕ್ರೆಡ್ ಮತ್ತು ಫ್ರೀಚಾರ್ಜ್ ಸಂಸ್ಥೆಗಳ ಸ್ಥಾಪಕ