Advertisement

ಕತ್ತಿ ಸಹೋದರರು ಸಂಪರ್ಕದಲ್ಲಿದ್ದರೆ ತಪ್ಪೇನು?

02:00 PM Apr 03, 2019 | Team Udayavani |

ಬೆಳಗಾವಿ: “ಮಾಜಿ ಸಂಸದ ರಮೇಶ ಕತ್ತಿಗೆ ಕಾಂಗ್ರೆಸ್‌ ನಾಯಕರು ಕರೆ ಮಾಡಿರಬಹುದು. ಪಕ್ಷಕ್ಕೆ ಬರ್ತಿರಾ ಎಂದು ಕೇಳಿರಬಹುದು. ನಾನೂ ಕತ್ತಿ ಸಹೋದರರ ಜತೆಗೆ ಆಗಾಗ ಸಂಪರ್ಕದಲ್ಲಿ ಇರುತ್ತೇನೆ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕತ್ತಿ ಅವರನ್ನು ಸಂಪರ್ಕಿಸಿರುವುದನ್ನೇ ದೊಡ್ಡದಾಗಿ ಮಾಡುವುದು ತಪ್ಪಲ್ಲ. ಅಸಮಾಧಾನ ಇದ್ದಾಗ ಈ ರೀತಿ ಕೇಳುವುದು ಸಹಜ. ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಕತ್ತಿ ಸಹೋದರರ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಕತ್ತಿ ಅವರನ್ನು ಈ ಹಿಂದೆ ಜಿದ್ದಾಜಿದ್ದಿಗಾಗಿ ಸೋಲಿಸಿದ್ದೇವೆ ಎಂದು ಹೇಳಿದರು.

ರಾಹುಲ್‌ ಗಾಂಧಿ ಅವರಿಗೆ ಬಚ್ಚಾ ಎನ್ನುವ ಹೇಳಿಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದ್ದು ಅವರ ಸಂಸ್ಕೃತಿ, ಪ್ರಬುದ್ಧತೆ ತೋರಿಸುತ್ತದೆ.

ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆಗಳು ಕೂಡ ಹೀಗೆಯೇ ಇರುತ್ತವೆ. 30 ವರ್ಷದಿಂದ ಭವಿಷ್ಯ ಹೇಳುತ್ತಿದ್ದಾರೆ. ಇನ್ನೂವರೆಗೆ ಯಾವುದೂ ನಿಜವಾಗಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡದಿರುವುದೇ ಒಳ್ಳೆಯದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next