Advertisement
ಮೆಸ್ಕಾಂ ಮಂಗಳೂರು ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನ ಲೋಡ್ ಸಮಸ್ಯೆಗೆ ಎಲ್ಲ ಉಪ ವಿಭಾಗದಲ್ಲಿ ಹೆಚ್ಚುವರಿ ವಿದ್ಯುತ್ ಒದಗಿಸಿ ಅಪ್ ಗ್ರೇಡ್ ಮಾಡಲಾಗಿದೆ. ನಿನ್ನಿಕಲ್‌ನಲ್ಲಿ ಸಬ್‌ಸ್ಟೇಷನ್ ಕಾಮಗಾರಿ ಶೀಘ್ರ ಪ್ರಾರಂಭ ಆಗಲಿದೆ. ಬೆಳಾಲಿನಲ್ಲಿ ಸಬ್‌ಸ್ಟೇಷನ್ ಆರಂಭಕ್ಕೆ ನಿಗದಿ ಪಡಿಸಿದ ಜಾಗದಲ್ಲಿ ಅರಣ್ಯ ಇಲಾಖೆಯ ಜಾಗ ಎಂಬ ಆಕ್ಷೇಪ ಇದ್ದು ಬೇರೆ ಜಾಗ ಇದ್ದಲ್ಲಿ ತಹಶೀಲ್ದಾರ್‌ರನ್ನು ಸಂಪರ್ಕ ಮಾಡಿ ಜಾಗ ಮಂಜೂರಾದರೆ ಅಲ್ಲಿ 110 ಕೆವಿ ಸಬ್ ಸ್ಟೇಷನ್ ಪ್ರಾರಂಭ ಮಾಡಲಾಗುವುದು ಎಂದರು.
Related Articles
ಸರಕಾರದ ಯೋಜನೆಯಂತೆ ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿ ಸೌರ ಶಕ್ತಿಯಿಂದ ವಿದ್ಯುತ್ ಉಪಯೋಗ ಮಾಡಿದರೆ ಸರಕಾರದಿಂದ 78 ಸಾವಿರ ಸಬ್ಸಿಡಿ ಪಡೆಯ ಬಹುದು. ಇದರಿಂದ ಹೆಚ್ಚುವರಿ ವಿದ್ಯುತ್ ಮೆಸ್ಕಾಂ ಖರೀದಿ ಮಾಡುತ್ತದೆ ಎಂದು ಮೆಸ್ಕಾಂ ಮಂಗಳೂರು ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ ಹೇಳಿದರು.
Advertisement
ಬಾಲ ಸುಬ್ರಹ್ಮಣ್ಯ ಭಟ್ ಮಾತನಾಡಿ, ವಿದ್ಯುತ್ ನಿಲುಗಡೆ ಇದ್ದ ದಿನ ಸಂಜೆ 5.30 ರ ಒಳಗೆ ಎಂದು ಪ್ರಕಟನೆಯಲ್ಲಿ ಸೂಚನೆ ನೀಡಿ ರಾತ್ರಿ ವರೆಗೂ ಕೊಡುವುದಿಲ್ಲ, ಯಾಕೆ ಎಂದು ಪ್ರಶ್ನಿಸಿದರು.ಮುಂದಕ್ಕೆ ಸರಿ ಮಾಡುವ ಎಂದು ಅಧಿಕಾರಿಗಳು ಹೇಳಿದರು. ಕೆಲವು ಖಾಸಗಿ ಕಟ್ಟಡದವರು ರಸ್ತೆ ಬದಿಯ ಸರಕಾರಿ ಜಾಗದಲ್ಲಿ ವಿದ್ಯುತ್ ಕಂಬ ಹಾಕಿದ್ದಾರೆ. ಅದನ್ನು ಅವರ ಜಾಗದಲ್ಲಿಯೇ ಹಾಕಲು ಕ್ರಮ ಕೈಗೊಳ್ಳಬೇಕು, ಸರಕಾರಿ ಜಾಗದಲ್ಲಿ ಇರುವ ಖಾಸಗಿ ಪಂಪು ಸೆಟ್ ತೆಗೆಯಬೇಕು, ಹಳೆ ತಂತಿ ಬದಲಾಯಿಸಿ, ಜನ ಸಂಪರ್ಕ ಸಭೆ ನಡೆಯುವ ದಿನಾಂಕ, ಸಮಯ ಗ್ರಾಹಕರಿಗೆ ಮೊದಲೇ ತಿಳಿಸಬೇಕು ಇತ್ಯಾದಿ ಬೇಡಿಕೆಗಳು ಸಭೆಯಲ್ಲಿ ವ್ಯಕ್ತವಾದವು.