Advertisement

ಅಂಚೆ ಗ್ರಾಹಕರಿಗೆ “ಇ-ಪಾಸ್‌ಬುಕ್‌’ಸೌಲಭ್ಯ: ಕುಳಿತಲ್ಲೇ ಖಾತೆ ಮಾಹಿತಿ ಲಭ್ಯ

08:16 PM Oct 13, 2022 | Team Udayavani |

ನವದೆಹಲಿ: ನೀವು ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳ ಗ್ರಾಹಕರೇ? ಹಾಗಿದ್ದರೆ, ಇನ್ನು ಮುಂದೆ ನೀವು ಎಲ್ಲಿಂದ ಬೇಕಿದ್ದರೂ, ಯಾವಾಗ ಬೇಕಿದ್ದರೂ, ನೆಟ್‌ ಬ್ಯಾಂಕಿಂಗ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಇಲ್ಲದೆಯೇ, ನಿಮ್ಮ ಖಾತೆಯ ಮಾಹಿತಿಯನ್ನು ಪಡೆಯಬಹುದು!

Advertisement

ಅದಕ್ಕೆಂದೇ ಸರ್ಕಾರವು “ಇ-ಪಾಸ್‌ಬುಕ್‌’ ಸೌಲಭ್ಯವನ್ನು ಒದಗಿಸಿದೆ. ಅ.12ರಿಂದಲೇ ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ಇ-ಪಾಸ್‌ಬುಕ್‌ ಸೇವೆಯನ್ನು ಪರಿಚಯಿಸಲಾಗಿದೆ. ಈ ಮೂಲಕ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯ ಮೂಲಕ ಇ-ಪಾಸ್‌ಬುಕ್‌ ಫೀಚರ್‌ ಅನ್ನು ಉಚಿತವಾಗಿ ಬಳಸಿಕೊಳ್ಳಬಹುದು.

ತಮ್ಮ ರಾಷ್ಟ್ರೀಯ ಉಳಿತಾಯ ಯೋಜನೆಗಳ ಬ್ಯಾಲೆನ್ಸ್‌ ಎಷ್ಟಿದೆ ಎಂದು ನೋಡುವುದು, ಸುಕನ್ಯ ಸಮೃದ್ಧಿ, ಪಿಪಿಎಫ್ ಮುಂತಾದ ಯೋಜನೆಗಳ ಮಿನಿ ಸ್ಟೇಟ್‌ಮೆಂಟ್‌ ಪಡೆಯುವುದು ಸೇರಿದಂತೆ ಅನೇಕ ಸೇವೆಗಳನ್ನು ಇ-ಪಾಸ್‌ಬುಕ್‌ ಫೀಚರ್‌ ಮೂಲಕ ಪಡೆಯಬಹುದು.

ಪ್ರಕ್ರಿಯೆ ಹೇಗೆ? :

  1. www.indiapost.gov.in ಅಥವಾ www.ippbonline.com ನಲ್ಲಿ ನೀಡಲಾದ “ಇ-ಪಾಸ್‌ಬುಕ್‌’ ಲಿಂಕ್‌ ಅನ್ನು ಒತ್ತಿ. ಮೊಬೈಲ್‌ ಸಂಖ್ಯೆ ನಮೂದಿಸಿ. ಲಾಗಿನ್‌ ಆಗಿ, ಒಟಿಪಿ ನಮೂದಿಸಿ, ಸಬ್‌ಮಿಟ್‌ ಎಂಬ ಆಯ್ಕೆ ಒತ್ತಿ.
  2. ನಂತರ “ಇ-ಪಾಸ್‌ಬುಕ್‌’ ಎಂಬುದನ್ನು ಕ್ಲಿಕ್‌ ಮಾಡಿ. ನಿಮ್ಮ ಯೋಜನೆಯ ಹೆಸರನ್ನು ಆಯ್ಕೆ ಮಾಡಿ, ಅಲ್ಲಿ ಖಾತೆ ಸಂಖ್ಯೆ, ನೋಂದಾಯಿತ ಮೊಬೈಲ್‌ ಸಂಖ್ಯೆ ಹಾಕಿ. ಬಳಿಕ ಒಟಿಪಿ ನಮೂದಿಸಿ, ದೃಢೀಕರಿಸಿ.
  3. ಈಗ ನಿಮ್ಮ ಮುಂದೆ “ಬ್ಯಾಲೆನ್ಸ್‌ ಎಂಕ್ವೈರಿ’, “ಮಿನಿ ಸ್ಟೇಟ್‌ಮೆಂಟ್‌’, “ಫ‌ುಲ್‌ ಸ್ಟೇಟ್‌ಮೆಂಟ್‌’ ಎಂಬ ಆಯ್ಕೆಗಳು ಬರುತ್ತವೆ. ನಿಮಗೆ ಯಾವ ಸೇವೆ ಬೇಕೋ, ಆ ಆಯ್ಕೆಯನ್ನು ಆಯ್ದುಕೊಳ್ಳಿ.
Advertisement

Udayavani is now on Telegram. Click here to join our channel and stay updated with the latest news.

Next