Advertisement
ಮೇಷ: ನಿಗದಿತ ಕಾರ್ಯ ಮುಗಿದ ಸಮಾಧಾನ. ಉದ್ಯಮಗಳ ಉತ್ಪನ್ನಗಳ ಪ್ರಚಾರದಲ್ಲಿ ಮೇಲಾಟ. ಮೆಕ್ಯಾನಿಕಲ್ ವೃತ್ತಿಯವರಿಗೆ ಒಳ್ಳೆಯ ಆದಾಯ. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ. ವಿವಾಹ ಮಾತುಕತೆಗಾಗಿ ದೂರ ಪ್ರಯಾಣ.
Related Articles
Advertisement
ಸಿಂಹ: ವ್ಯವಹಾರಸ್ಥರಿಗೆ ಮತ್ತು ಉದ್ಯೋಗಸ್ಥರಿಗೆ ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರದಿಂದ ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರ್ರಿಗೆ ಕಾರ್ಮಿಕರ ಸಮಸ್ಯೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ಕನ್ಯಾ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮನಾರ್ಹ ಪ್ರಗತಿ. ಉದ್ಯೋಗಾಸಕ್ತರಿಗೆ ಅಯಾಚಿತ ಅವಕಾಶಗಳು ಲಭ್ಯ. ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಪತ್ನಿಯ ಕಡೆಯಲ್ಲಿ ವಿವಾಹ ಮಾತುಕತೆ.
ತುಲಾ: ಸಕಾಲದಲ್ಲಿ ಪರಿಹಾರಗೊಂಡ ಸಮಸ್ಯೆಗಳು. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕುಲದೇವರ ದೇವಾಲಯಕ್ಕೆ ಭೇಟಿ.
ವೃಶ್ಚಿಕ: ಸಾಂಸಾರಿಕ ತಾಪತ್ರಯಗಳ ಉಪಶಮನ. ಉದ್ಯೋಗ ಸ್ಥಾನದಲ್ಲಿ ವರಿಷ್ಠರಿಗೆ ಹರ್ಷ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.
ಧನು: ಉದ್ಯೋಗ ಸ್ಥಾನದಲ್ಲಿ ಪ್ರಶಂಸೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿ ಅಭಿವೃದ್ಧಿಗೆ ಪ್ರಯತ್ನ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಪ್ರಗತಿ. ದಂಪತಿಗಳ ನಡುವೆ ಅನುರಾಗ ವೃದ್ಧಿ.
ಮಕರ: ಉದ್ಯೋಗ ಸ್ಥಾನಕ್ಕೆ ಹೊಸರೂಪ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೇಟರಿಂಗ್, ಶಾಮಿಯಾನಾ ವ್ಯವಹಾರದಲ್ಲಿ ಲಾಭ. ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವರ್ಧನೆ.
ಕುಂಭ: ಹೊಸ ಆದಾಯ ಮೂಲಗಳ ಅನ್ವೇಷಣೆ. ಸರಕಾರಿ ನೌಕರರಿಗೆ ಅನುಕೂಲ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶ ಗೋಚರ. ಮಕ್ಕಳಿಂದ ಸಂತಸ.
ಮೀನ: ಧರ್ಮ ಮಾರ್ಗದಲ್ಲಿ ನಡೆಯಲು ಸ್ಥಿರಬುದ್ಧಿ. ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಹೊಸ ಪಾಲುದಾರಿಕೆ ವ್ಯವಹಾರ ಮುನ್ನಡೆ. ಹಿರಿಯ ಬಂಧುವಿಗೆ ಆಪತ್ಕಾಲದಲ್ಲಿ ಸಹಾಯ. ಮಿತ್ರರ ಭೇಟಿಯಿಂದ ಸಂತಸ.
ಜಯತೀರ್ಥ ಆಚಾರ್ಯ