ಮೊದಲ ದಿನ 500 ಕಳಸದಷ್ಟು ಮಜ್ಜನವಾಗುತ್ತದೆ. ನಂತರ ಇದರಲ್ಲಿ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಇದರಲ್ಲಿ 300ಲೀ. ಹಾಲು, 300ಲೀ. ಕಬ್ಬಿನಹಾಲು, 20ಕೆ.ಜಿ ಚಂದನದ ಪುಡಿ, ಅಷ್ಟೇ ಪ್ರಮಾಣದಲ್ಲಿ ಶ್ರೀಗಂಧದ ಪುಡಿ, ಸರಿಸುಮಾರು 1ಕೆಜಿಯಷ್ಟು ಕೇಸರಿ, 50ಕೆ.ಜಿಯಷ್ಟು ಅರಿಶಿಷಣ ಪುಡಿ, ಒಂದು ಟನ್ ನಷ್ಟು ಕಲ್ಕ ಚೂರ್ಣವನ್ನು ಬಳಸುತ್ತಾರೆ.
Advertisement
ಸುರಳಿಗಳೇ ಕೇಶಗಳು..ಬಾಹುಬಲಿಯಲ್ಲಿ 64 ಕೇಶ ಸುರಳಿಗಳ ಕೇಶವಿನ್ಯಾಸದಿಂದ ಕೂಡಿದೆ. ಬಾಹುಬಲಿಯನ್ನು ಕೆತ್ತಿಸಿದ ಚಾಮುಂಡರಾಯ ಅಪ್ಪಟ ಕನ್ನಡಪ್ರೇಮಿ. ಆತ ಚಾವುಂಡರಾಯ ಪುರಾಣ ಅನ್ನೋ ಕಾವ್ಯವನ್ನೇ ಬರೆದಿದ್ದಾನೆ. ಗೊಮ್ಮಟನ ಪಾದದ ಬಳಿ ಕನ್ನಡದ ಕೆತ್ತನೆಯೂ ಇದೆ. ಗುರು ನೇಮಿಚಂದ್ರ ರಚಿಸಿದ ಗೊಮ್ಮಟಸಾರ ಕೃತಿಗೆ ಪ್ರಾಕೃತ ಭಾಷೆಯಲ್ಲಿ ಚಾಮುಂಡರಾಯ ರಚಿಸಿದ ವ್ಯಾಖ್ಯಾನಗ್ರಂಥ ವೀರಮತ್ತಂಡಿ ಅಂತ. ಹೀಗೆ ಚಾಮುಂಡರಾಯನ ಮಾತೃಭಾಷೆ ಕನ್ನಡವೇ ಆಗಿತ್ತು.
ಒಡೆಯರ ಕಾಲದಲ್ಲಿ ಗೋಮ್ಮಟೇಶ್ವರಿಗೆ ಸೇರಿದ ಭೂಮಿಯನ್ನು ಕೆಲವುರ ಸಾಲಕ್ಕಾಗಿ ಅಡವಿಟ್ಟಿದ್ದರಂತೆ. ವಿಷಯ ತಿಳಿದ ಚಾಮರಾಜ ಒಡೆಯರು ಅಡವಿಟ್ಟುಕೊಂಡಿದ್ದವರನ್ನು ಕರೆಸಿ ಅಡವಿಟ್ಟ ಸಾಲವನ್ನು ತೀರಿಸುತ್ತೇವೆ ಎಂದಾಗ ಅವರು ಭೂಮಿಯನ್ನು ಬಿಟ್ಟಕೊಟ್ಟರಂತೆ.
Related Articles
Advertisement
ಅಮೆರಿಕದಲ್ಲಿ ಅತ್ಯಂತ ಹಳೆಯ ಬಾಹುಬಲಿ
ಅಮೆರಿಕದ ನ್ಯೂಯಾರ್ಕ್ ಮೆಟ್ರೋಪಾಲಿಟಿನ್ ವಸ್ತು ಸಂಗ್ರಾಹಾಲಯದಲ್ಲಿ ಸುವರ್ಣ ಲೇಪಿತ ಪಂಚಲೋಹದ ಬಾಹುಬಲಿಯ ಮೂರ್ತಿಯೊಂದಿದೆ. 11.1 ಸೆಂ.ಮೀ ಇರುವ ಈ ಮೂರ್ತಿಯನ್ನು ಸ್ಯಾಮ್ಯೂಯಲ್ ಎಲಿನ್‌ಬರ್ಗ್ ಎಂಬುವವರು 1987ರಲ್ಲಿ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಸ್ತು ಸಂಗ್ರಹಾಲಯದ ದಾಖಲೆಗಳ ಪ್ರಕಾರ, ಈ ಮೂರ್ತಿಯು ಕರ್ನಾಟಕದಿಂದ ಬಂದಿದ್ದು, ಬಾದಾಮಿ ಚಾಲುಕ್ಯರ ಕಾಲಕ್ಕೆ ಸಂಬಂಧಿಸಿದ್ದು ಎಂದಿದೆ. 6-7ನೆಯ ಶತಮಾನದ್ದೆಂದು ಹೇಳಲಾಗಿದೆ.
ಒಡೆಯರ ಕಾಲದಲ್ಲಿ ಗೊಮ್ಮಟೇಶ್ವರಿಗೆ ಸೇರಿದ ಭೂಮಿಯನ್ನು ಕೆಲವರು ಸಾಲಕ್ಕಾಗಿ ಅಡವಿಟ್ಟಿದ್ದರಂತೆ. ವಿಷಯ ತಿಳಿದ ಚಾಮರಾಜ ಒಡೆಯರು ಅಡವಿಟ್ಟುಕೊಂಡಿದ್ದವರನ್ನು ಕರೆಸಿ ಅಡವಿಟ್ಟ ಸಾಲವನ್ನು ತೀರಿಸುತ್ತೇವೆ ಎಂದಾಗ ಅವರು ಭೂಮಿಯನ್ನು ಬಿಟ್ಟುಕೊಟ್ಟರಂತೆ. ಚಿತ್ರಗಳು: ಆಸ್ಟ್ರೋಮೋಹನ್, ಯಜ್ಞ