Advertisement
ರಾಜ್ಯಸಭೆಯಲ್ಲಿ ದಿನನಿತ್ಯದ ತಪಾಸಣೆ ವೇಳೆ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ಆಸನದಲ್ಲಿ ನೋಟಿನ ಕಂತೆಗಳು ಪತ್ತೆಯಾಗಿವೆ. ಈ ವಿಚಾರವನ್ನು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಗಮನಕ್ಕೆ ತರಲಾಗಿದ್ದು ಈ ವಿಚಾರವಾಗಿ ಮಾತನಾಡಿದ ಅವರು ಇದೊಂದು ಗಂಭೀರ ವಿಷಯ ಎಂದು ತನಿಖೆಗೆ ಆದೇಶಿಸಿದ್ದಾರೆ.
ರಾಜ್ಯಸಭೆಯಲ್ಲಿ ಪತ್ತೆಯಾದ ನೋಟಿನ ಕಂತೆಗಳು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ಆಸನದಲ್ಲಿ ಪತ್ತೆಯಾಗಿದ್ದು ಇದು ಗಂಭೀರ ವಿಚಾರ ಅಲ್ಲದೆ ಇದರ ಬಗ್ಗೆ ತನಿಖೆ ನಡೆಸಬೇಕಾಗಿದೆ ಎಂದು ರಾಜ್ಯಾಧ್ಯಕ್ಷರು ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಅಲ್ಲದೆ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಸಂಸದರ ಹೆಸರನ್ನು ಸಭಾಧ್ಯಕ್ಷರು ಹೆಸರಿಸುವುದು ಸರಿಯಲ್ಲ ಎಂದಿದ್ದಾರೆ.
Related Articles
Advertisement
ಅಭಿಷೇಕ್ ಮನು ಸಿಂಘ್ವಿ ಹೇಳಿದ್ದೇನು? ನೋಟಿನ ಕಂತೆ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅಭಿಷೇಕ್ ಮನು ಸಿಂಘ್ವಿ ಆರೋಪವನ್ನು ತಳ್ಳಿಹಾಕಿದ್ದಾರೆ. “ನಾನು ರಾಜ್ಯಸಭೆಗೆ ಹೋಗುವಾಗ ಕೇವಲ 500 ರೂ. ನೋಟು ಮಾತ್ರ ತೆಗೆದುಕೊಂಡು ಹೋಗುತ್ತೇನೆ. ಆದರೆ ನನ್ನ ಆಸನದಲ್ಲಿ ಇಷ್ಟು ದೊಡ್ಡ ಮೊತ್ತದ ಕಂತೆ ಹೇಗೆ ಬಂತೆಂಬುದು ನನಗೆ ಗೊತ್ತಿಲ್ಲ, ಅಲ್ಲದೆ ಗುರುವಾರ ನಾನು 12.57 ಕ್ಕೆ ಸದನಕ್ಕೆ ಬಂದಿದ್ದು 1 ಗಂಟೆಗೆ ಸದನ ಆರಂಭವಾಗಿತ್ತು ಈ ವೇಳೆ ನಾನು ಮತ್ತು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕ್ಯಾಂಟೀನ್ ಗೆ ತೆರಳಿ ಊಟ ಮಾಡಿದೆ ಇದಾದ ಬಳಿಕ ನಾನು ಸಂಸತ್ ನಿಂದ ಹೊರ ನಡೆದೆ, ಹೀಗಿರುವಾಗ ನಾನು ಅಷ್ಟು ದೊಡ್ಡ ಮೊತ್ತವನ್ನು ಅಲ್ಲಿ ಬಿಡಲು ಹೇಗೆ ಸಾಧ್ಯ ಎಂದು ಹೇಳಿದ್ದಾರೆ.