Advertisement

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

10:30 AM Nov 23, 2024 | Team Udayavani |

ಕೆಲವು ಸಿನಿಮಾದಲ್ಲಿ ಕಥೆ ಸರಳವಾಗಿರುತ್ತದೆ. ಆದರೆ, ಅಂತಹ ಕಥೆಗಳು ನೋಡ ನೋಡುತ್ತಲೇ ನಮ್ಮ ಮನಮುಟ್ಟುತ್ತವೆ. ಅನೀಶ್‌ ನಟನೆಯ “ಆರಾಮ್‌ ಅರವಿಂದ ಸ್ವಾಮಿ’ ಚಿತ್ರ ಕೂಡಾ ಇದೇ ಕೆಟಗರಿಗೆ ಸೇರುವ ಸಿನಿಮಾ.

Advertisement

ಇಲ್ಲೊಂದು ಸರಳ ಕಥೆ ಇದೆ, ಯಾರೋ ನಮ್ಮ ಪಕ್ಕದ ಮನೆ ಹುಡುಗನೇನೋ ಎಂಬ ಭಾವ ಬರುವಂತೆ ಆ ಕಥೆ ಸಾಗುತ್ತದೆ. ಇದೇ ಈ ಸಿನಿಮಾದ ಶಕ್ತಿ ಕೂಡಾ. ಇಲ್ಲಿ ಪ್ರೀತಿ, ನೋವು, ಸಂತೋಷ, ಸಂಕಟ.. ಎಲ್ಲವೂ ಇದೆ. ಅದೇ ಈ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುತ್ತದೆ.

ಇಷ್ಟು ದಿನ ಆ್ಯಕ್ಷನ್‌ ಸಿನಿಮಾಗಳಲ್ಲಿ ಮಿಂಚಿದ್ದ ಅನೀಶ್‌ ಕೆರಿಯರ್‌ನಲ್ಲಿ ಇದೊಂದು ಹೊಸ ಬಗೆಯ ಜರ್ನಿ. ಇಲ್ಲಿ ಭರಪೂರ ನಗುವಿದೆ. ನಗಿಸುತ್ತಲೇ ಸಿನಿಮಾ ಪ್ರೇಕ್ಷಕರನ್ನು ಗಾಢವಾಗಿ ಅಪ್ಪಿಕೊಳ್ಳುತ್ತದೆ. ತನಗೆ ತಾನೇ ಬಿಲ್ಡಪ್‌ ಕೊಟ್ಟುಕೊಂಡು ತಿರುಗುವ ಹುಡುಗ, ಆತನ ಪ್ರೀತಿ, ಕಷ್ಟಕ್ಕೆ ಮನಮಿಡಿಯುವ ಗುಣ, ಹೆಣ್ಣುಮಗಳೊಬ್ಬಳ ಅಸಹಾಯಕತೆ, ತಂದೆಯ ಮನದ ವೇದನೆ… ಹೀಗೆ ಸಾಗುವ ಕಥೆ ಚಿತ್ರವನ್ನು ಆಪ್ತವಾಗಿಸಿದೆ.

ನಿರ್ದೇಶಕ ಅಭಿಷೇಕ್‌ ಶೆಟ್ಟಿ ಸರಳ ಕಥೆಯನ್ನು ಸುಂದರವಾಗಿ ನಿರೂಪಿಸಿದ್ದಾರೆ. ಅನೀಶ್‌ಗೆ ಒಂದು ಹೊಸ ಇಮೇಜ್‌ ಕೊಡಲು ಅವರು ಮಾಡಿರುವ ಪ್ರಯತ್ನ ಎದ್ದು ಕಾಣುತ್ತದೆ. ಪಕ್ಕಾ ಫ್ಯಾಮಿಲಿ ಆಡಿಯನ್ಸ್‌ಗೆ ಏನು ಬೇಕೋ ಆ ಎಲ್ಲಾ ಅಂಶಗಳನ್ನು ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನಾಯಕ ಅನೀಶ್‌ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುವ ಮೂಲಕ ಮತ್ತೂಮ್ಮೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಉಳಿದಂತೆ ಮಿಲನಾ, ಅಚ್ಯುತ್‌ಕುಮಾರ್‌, ಗೌರವ್‌ ಶೆಟ್ಟಿ ಸೇರಿದಂತೆ ಇತರರು ನಟಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next