Advertisement
ರಾಷ್ಟ್ರೀಯ ಕ್ಯಾಂಪ್‌ಗಳಲ್ಲಿ ತರಬೇತಿ ಪಡೆಯುತ್ತಿರುವ ಮಹಿಳಾ ಕುಸ್ತಿ ಪಟುಗಳಿಗೆ ಒಕ್ಕೂಟದ ಅಧ್ಯಕ್ಷ ಹಾಗೂ ಬಿಜೆಪಿ ಸಂಸದರೂ ಆಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಕೆಲವು ತರಬೇತುದಾರಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಇದರಲ್ಲಿ ರಾಷ್ಟ್ರೀಯ ಅಧ್ಯಕ್ಷರೂ ಭಾಗಿಯಾಗಿದ್ದಾರೆ ಎಂದು ವಿನೇಶ್ ಪೋಗಟ್ ಅವರು ಆರೋಪಿಸಿದ್ದಾರೆ.
Related Articles
Advertisement
ನಾನು ಈ ವಿಷಯವನ್ನು ಇಂದು ಹೇಳಿದ್ದೇನೆ. ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಿಗೂ ವಿವರಿಸಲಾಗುವುದು ಎಂದು ಹೇಳಿರುವ ಅವರು, ಭಾರತ ಕುಸ್ತಿ ಒಕ್ಕೂಟ ಅತ್ಯಂತ ಪ್ರಬಲವಾಗಿದ್ದು, ನಾಳೆ ನಾನು ಜೀವಂತವಾಗಿ ಇರುತ್ತೀನೋ ಅಥವಾ ಇಲ್ಲವೋ ಎಂಬುದು ಗೊತ್ತಿಲ್ಲ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಟಗಳ ಬಹಿಷ್ಕಾರಕುಸ್ತಿ ಒಕ್ಕೂಟದ ವಿರುದ್ಧ ಬಹುತೇಕ ಎಲ್ಲ ಕುಸ್ತಿ ಪಟುಗಳು ತಿರುಗಿಬಿದ್ದಿದ್ದು, ಈ ವಿಷಯ ಬಗೆಹರಿಯುವವರೆಗೆ ನಾವು ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಒಕ್ಕೂಟದಲ್ಲಿ ಏಕಪಕ್ಷೀಯವಾಗಿ ನಿರ್ಧಾರಗಳಾಗುತ್ತಿವೆ. ನಮ್ಮ ಧ್ವನಿಗೆ ಯಾವುದೇ ಬೆಲೆ ಇಲ್ಲ. ಹಲವು ದಿನಗಳಿಂದ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಇನ್ನು ಮುಂದೆ ಹೀಗೆ ಆಗದು ಎಂದು ಭಜರಂಗ್ ಹೇಳಿದ್ದಾರೆ. ನಾವು ದೇಶಕ್ಕಾಗಿ ಪದಕ ಗೆದ್ದಾಗ ಎಲ್ಲರೂ ಸಂಭ್ರಮಿಸುತ್ತಾರೆ. ಆದರೆ, ನಾವೀಗ ನೋವಿನಲ್ಲಿದ್ದೇವೆ. ಯಾರೂ ನಮ್ಮ ಬಗ್ಗೆ ಯೋಚಿಸುತ್ತಿಲ್ಲ ಎಂದೂ ವಿಷಾದ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಮತ್ತು ಗೃಹ ಸಚಿವಾಲಯ ಗಮನಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ. ಆರೋಪ ಸುಳ್ಳು
ಕುಸ್ತಿ ಪಟುಗಳ ಆರೋಪ ಸಂಬಂಧ ಪ್ರತಿಕ್ರಿಯೆ ನೀಡಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್, ಕೇವಲ ವಿನೇಶ್ ಪೋಗಟ್ ಮಾತ್ರ ಈ ಆರೋಪ ಮಾಡಿದ್ದಾರೆ. ಬೇರೆ ಬೇರೆ ಯಾರೂ ಮಾಡಿಲ್ಲ. ಬೇರೊಬ್ಬ ಕುಸ್ತಿ ಪಟು ಇಂಥ ಆರೋಪ ಮಾಡಲಿ. ನಾನು ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆರೋಪಕ್ಕೆ ಉತ್ತರಿಸಲು ಪ್ರಾಧಿಕಾರಕ್ಕೆ 72 ಗಂಟೆ ಗಡುವು
ಹೊಸದಿಲ್ಲಿ: ಪ್ರಮುಖ ಕುಸ್ತಿ ಪಟುಗಳು ಮಾಡಿರುವ ಆರೋಪಕ್ಕೆ 72 ಗಂಟೆಯೊಳಗೆ ಉತ್ತರಿಸುವಂತೆ ಕ್ರೀಡಾ ಸಚಿವಾಲಯ ಭಾರತೀಯ ಕುಸ್ತಿ ಪ್ರಾಧಿಕಾರಕ್ಕೆ (ಡಬ್ಲ್ಯುಎಫ್ಐ) ಸೂಚಿಸಿದೆ. ಒಂದುವೇಳೆ ಪ್ರತಿಕ್ರಿಯಿಸದಿದ್ದರೆ ಸಚಿವಾಲಯವು ಪ್ರಾಧಿಕಾರದ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಲಿದೆ ಎಂದು ಸ್ಪಷ್ಟಪಡಿಸಿದೆ.