Advertisement

Rey Mysterio Sr: ಖ್ಯಾತ ರೆಸ್ಲರ್‌ ರೇ ಮಿಸ್ಟೀರಿಯೊ ಸೀನಿಯರ್‌ ಇನ್ನಿಲ್ಲ

12:22 PM Dec 21, 2024 | Team Udayavani |

ಮೆಕ್ಸಿಕೊ: ಖ್ಯಾತ ಮೆಕ್ಸಿಕನ್ ಕುಸ್ತಿಪಟು, ಡಬ್ಲ್ಯೂ ಡಬ್ಲ್ಯೂಇ ಸೂಪರ್‌ಸ್ಟಾರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ರೇ ಮಿಸ್ಟೀರಿಯೊ ಸೀನಿಯರ್ ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು 66 ನೇ ವಯಸ್ಸಿನಲ್ಲಿ ನಿಧನರಾದರು.

Advertisement

ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದರು, ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್ (WWE) ​​​​ಮತ್ತು ಲುಚಾ ಲಿಬ್ರೆ ಎಎಎ ವರ್ಲ್ಡ್‌ ವೈಡ್‌ ನಂತಹ ( Lucha Libre AAA World Wide) ಪ್ರಮುಖ ಸಂಸ್ಥೆಗಳೊಂದಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಇದನ್ನು ಸಾಮಾನ್ಯವಾಗಿ ಮೆಕ್ಸಿಕೋದ ಡಬ್ಲ್ಯೂ ಡಬ್ಲ್ಯೂಇ ಸಮಾನವೆಂದು ಪರಿಗಣಿಸಲಾಗುತ್ತದೆ.

ಅವರು 1990 ರಲ್ಲಿ ವಿಶ್ವ ಚಾಂಪಿಯನ್‌ ಶಿಪ್ ವ್ರೆಸ್ಲಿಂಗ್‌ ನ ಸ್ಟಾರ್‌ ಕೇಡ್‌ನಂತಹ ಈವೆಂಟ್‌ಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಹಾರುವ ಶೈಲಿಯಿಂದ ಹೆಸರುವಾಸಿಯಾಗಿದ್ದಾರೆ.

ಮಿಸ್ಟೀರಿಯೊ ಅವರ ನಿಜವಾದ ಹೆಸರು ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್. ಅವರ ಮರಣದ ವಿಚಾರವನ್ನು ಲುಚಾ ಲಿಬ್ರೆ ತನ್ನ ಎಕ್ಸ್‌ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ. ಮಿಸ್ಟೀರಿಯೋ ಸೀನಿಯರ್‌ ಅವರ ಸೋದರ ಸಂಬಂಧಿ ರೇ ಮಿಸ್ಟೀರಿಯೋ ಅವರು ಡಬ್ಲ್ಯೂಡಬ್ಲ್ಯೂಇ ಕೂಟದಲ್ಲಿ ಪ್ರಸಿದ್ದರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next