Advertisement

West Indies vs India: ಟೀಮ್‌ ಇಂಡಿಯಾದ ಆಲ್‌ರೌಂಡ್‌ ಗೇಮ್ ಗೆ ಮಂಕಾದ ವಿಂಡೀಸ್‌; ಸರಣಿ ವಶ

08:49 AM Aug 02, 2023 | Team Udayavani |

ಟ್ರಿನಿಡಾಡ್: ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಮ್‌ ಇಂಡಿಯಾ ಗೆಲುವಿನ ನಗೆ ಬೀರಿ, ಸರಣಿ ತನ್ನದಾಗಿಸಿಕೊಂಡಿದೆ.

Advertisement

ಟಾಸ್‌ ಗೆದ್ದು ವೆಸ್ಟ್‌ ಇಂಡೀಸ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ಆರಂಭಿಕರಾಗಿ ಕ್ರಿಸ್ ಗಿಳಿದ ಟೀಮ್‌ ಇಂಡಿಯಾದ ಆರಂಭಿಕರಾದ ಶುಭಮನ್‌ ಹಾಗೂ ಇಶಾನ್‌ ಕಿಶನ್‌ ಜೊತೆಯಾಟದ ಮೂಲಕ ತಂಡಕ್ಕೆ ಉತ್ತಮ ತಳಪಾಯ ಹಾಕಿಕೊಟ್ಟರು.

ಇಶಾನ್‌ ಕಿಶನ್‌ ಎಂದಿನಂತೆ ತಮ್ಮ ಬಿರುಸಿನ ಬ್ಯಾಟಿಂಗ್‌ ನಿಂದ 8 ಬೌಂಡರಿ, 3 ಸಿಕ್ಸರ್‌ ಗಳೊಂದಿಗೆ  64 ಎಸೆತಗಳಲ್ಲಿ 77 ರನ್ ಗಳಿಸಿ ಮುನ್ನುಗಿ ಬಾರಿಸುವ ಯತ್ನದಲ್ಲಿ ಯಾನಿಕ್ ಕ್ಯಾರಿಯಾ ಎಸೆತದಲ್ಲಿ ಸ್ಟಂಪ್‌ ಔಟ್‌ ಆದರು. ತಂಡದಲ್ಲಿ ಸ್ಥಾನ ಪಡೆದುಕೊಂಡು ರುತ್‌ ರಾಜ್ ಗಾಯಕ್ವಾಡ್‌ ಕೇವಲ 8 ಗಳಿಸಿ ಔಟಾದರು. ಆ ಮೂಲಕ ಕೊಟ್ಟ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲರಾದರು.

ಇನ್ನು ಮೂರನೇ ವಿಕೆಟ್‌ ಗೆ ಜೊತೆಗೂಡಿದ ಸಂಜು ಸ್ಯಾಮ್ಸನ್‌ ಹಾಗೂ ಶುಭಮನ್‌ ಗಿಲ್‌ ಬೌಂಡರಿ – ಸಿಕ್ಸರ್‌ ಗಳಿಂದ ವಿಂಡೀಸ್‌ ಬೌಲರ್‌ ಗಳನ್ನು ಸುಸ್ತಾಗಿಸಿದರು. ಸಂಜು 41 ಎಸೆತಗಳಲ್ಲಿ 2 ಬೌಂಡರಿ,4 ಸಿಕ್ಸರ್‌ ಗಳೊಂದಿಗೆ ಭರ್ಜರಿ 51 ರನ್‌ ಗಳಿಸಿದರು. ಇದು ಸಂಜು ಬಾರಿಸಿದ ಮೊದಲ ಏಕದಿನ ಅರ್ಧ ಶತಕವಾಗಿದೆ. ಶುಭಮನ್‌ ಗಿಲ್‌ 11 ಬೌಂಡರಿಯೊಂದಿಗೆ 85 ರನ್‌ ಗಳಿಸಿ ಗುಡಕೇಶ್ ಮೋಟಿ ಅವರಿಗೆ ವಿಕೆಟ್‌ ಒಪ್ಪಿಸಿದರು. ಇನ್ನು ಕಪ್ತಾನ ಹಾರ್ದಿಕ್‌ ಪಾಂಡ್ಯ 4 ಬೌಂಡರಿ, 5 ಸಿಕ್ಸರ್‌ ಗಳೊಂದಿಗೆ ಔಟಾಗದೆ 70 ಗಳಿಸಿದರು.

ಅಂತಿಮವಾಗಿ ಭಾರತ 50 ಓವರ್‌ ಗಳಲ್ಲಿ 5 ವಿಕೆಟ್‌ ಕಳೆದುಕೊಂಡು, 351 ರ ಬೃಹತ್‌ ರನ್‌ ಪೇರಿಸಿತು.

Advertisement

ಬೃಹತ್‌ ಮೊತ್ತ ಕಲೆಹಾಕಲು ಬ್ಯಾಟಿಂಗ್‌ ಗಿಳಿದ ವೆಸ್ಟ್‌ ಇಂಡೀಸ್‌ ಆರಂಭದಲ್ಲೇ ಮುಕೇಶ್‌ ಕುಮಾರ್‌ ಅವರ ಬೌಲಿಂಗ್‌ ದಾಳಿಗೆ 3 ಪ್ರಮುಖ ವಿಕೆಟ್‌ ಗಳನ್ನು ಕಳೆದುಕೊಂಡಿತು.

ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ಹಾಗೂ ಶಾಯ್ ಹೋಪ್ ಅವರ ವಿಕೆಟ್‌ ಗಳನ್ನು ಮುಕೇಶ್‌ ಕುಮಾರ್‌ ಕಬಳಿಸಿದರು.  ವಿಂಡೀಸ್‌ ಭರವಸೆ ಬ್ಯಾಟರ್‌ ಗಳನ್ನು ಬಹುಬೇಗನೇ ಪೆವಿಲಿಯನ್‌ ಸೇರಿಕೊಂಡು ತಂಡ ಒತ್ತಡದಲ್ಲಿ ಸಿಲುಕಿತು.

ಅಲಿಕ್ ಅಥಾನಾಜೆ 32 ರನ್‌ ಗಳಿಸಿ ಸ್ವಲ್ಪ ಹೊತ್ತು ಕ್ರಿಸ್‌ ನಲ್ಲಿ ನಿಂತಿದ್ದರೂ ಕುಲದೀಪ್‌ ಅವರ ಎಸೆತೆಕ್ಕೆ ಔಟಾದರು. ಇನ್ನು ತಂಡದಲ್ಲಿ ಸ್ಥಾನ ಪಡೆದುಕೊಂಡ ಸ್ಪೋಟಕ ಆಟಗಾರ ಶಿಮ್ರಾನ್ ಹೆಟ್ಮೆಯರ್ 4 ರನ್‌ ಗಳಿಸಿ  ಔಟಾದರು.

ಅಂತಿಮವಾಗಿ ವಿಂಡೀಸ್‌ 35.3 ಓವರ್‌ ಗಳಲ್ಲಿ ಸರ್ವಪತನವಾಯಿತು. 2-1 ಅಂತರದಲ್ಲಿ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಶಾರ್ದೂಲ್ ಠಾಕೂರ್ ವಿಂಡೀಸ್‌ ನ ಮಿಡಲ್‌ ಆರ್ಡರ್‌ ಬ್ಯಾಟರ್ ಗಳಿಗೆ ಕಂಟಕವಾದರು. ಶಾರ್ದೂಲ್‌ ಪ್ರಮುಖ 4 ವಿಕೆಟ್‌ ಗಳನ್ನು ಪಡೆದರೆ, ಮುಕೇಶ್‌ 3 ವಿಕೆಟ್‌ ಗಳನ್ನು ಪಡೆದರು. ಜಯದೇವ್ ಉನದ್ಕತ್ 1 ವಿಕೆಟ್‌, ಕುಲದೀಪ್ ಯಾದವ್ 2 ವಿಕೆಟ್‌ ಗಳನ್ನು ಪಡೆದರು.

ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಶುಭಮನ್‌ ಗಿಲ್‌ ಪಡೆದುಕೊಂಡರು, ಸರಣಿ ಶ್ರೇಷ್ಠ ಇಶಾನ್‌ ಕಿಶನ್‌ ಅವರ ಪಾಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next