ನವದೆಹಲಿ: ದೇಶಾದ್ಯಂತ ನಡೆದಿದ್ದ 543 ಕ್ಷೇತ್ರಗಳ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸ್ಪರ್ಧಾ ಕಣದಲ್ಲಿದ್ದು, ಸದ್ಯದ ಫಲಿತಾಂಶದ ಪ್ರಕಾರ 42 ಲೋಕಸಭಾ ಕ್ಷೇತ್ರಗಳಲ್ಲಿ ಟಿಎಂಸಿ 32 ಸ್ಥಾನಗಳಲ್ಲಿ, ಬಿಜೆಪಿ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ:Result; ಪ್ರಜ್ವಲ್ ರೇವಣ್ಣಗೆ ಸೋಲು ;ಶೆಟ್ಟರ್, ಎಚ್ ಡಿಕೆ, ಕಾಗೇರಿ , ಮಲ್ಲೇಶ್ ಬಾಬು ಜಯ
ಪಶ್ಚಿಮಬಂಗಾಳದಲ್ಲಿ ಬಿಷ್ಣುಪುರ್, ಡಾರ್ಜಿಲಿಂಗ್, ಜಲ್ಪೈಗುರಿ ಕ್ಷೇತ್ರದಲ್ಲಿ ಟಿಎಂಸಿ ಮುನ್ನಡೆ ಸಾಧಿಸಿದೆ. ಬಿಷ್ಣುಪುರ್ ನಲ್ಲಿ ಖಾನ್ ಸೌಮಿತ್ರಾ, ಡಾರ್ಜಿಲಿಂಗ್ ನಲ್ಲಿ ರಾಜು ಬಿಸ್ಟಾ ಹಾಗೂ ಜಲ್ಪೈಗುರಿಯಲ್ಲಿ ಜಯಂತ ಕುಮಾರ್ ರಾಯ್ ಸ್ಪರ್ಧಿಸಿದ್ದಾರೆ.
ಪಶ್ಚಿಮಬಂಗಾಳದ ಅಸಾನ್ ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಟಿಎಸಿಯ ಶತ್ರುಘ್ನ ಸಿನ್ಹಾ ಸ್ಪರ್ಧಿಸಿದ್ದು, ಇವರು 26,545 ಮತಗಳ ಮುನ್ನಡೆ ಸಾಧಿಸಿದ್ದಾರೆ. ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ಮುನ್ನಡೆ ಕಂಡಿದ್ದಾರೆ.
ಸುಳ್ಳಾದ ಚುನಾವಣೋತ್ತರ ಸಮೀಕ್ಷೆ:
ರಿಪಬ್ಲಿಕ್ ಭಾರತ್ matrize ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಪಶ್ಚಿಮಬಂಗಾಳದಲ್ಲಿ 21ರಿಂದ 25 ಸ್ಥಾನಗಳು ಗೆಲ್ಲುವ ಸಾಧ್ಯತೆ ಇದ್ದು, ತೃಣಮೂಲ ಕಾಂಗ್ರೆಸ್ 16ರಿಂದ 20 ಸ್ಥಾನಗಳಲ್ಲಿ, ಇಂಡಿಯಾ ಮೈತ್ರಿಕೂಟ 1 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿತ್ತು.