ಪಶ್ಚಿಮ ಬಂಗಾಳ: ಕಚ್ಚಾ ಬಾಂಬ್ ತಯಾರಿಸುವ ವೇಳೆ ಸ್ಫೋಟಗೊಂಡು ಕನಿಷ್ಠ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಮನೆಯೊಂದರಲ್ಲಿ ಸಂಭವಿಸಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಾನುವಾರ ರಾತ್ರಿ ಖಯರ್ತಲಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಮಾಮುನ್ ಮೊಲ್ಲಾ ಎಂಬಾತನ ಮನೆಯಲ್ಲಿ ಅಕ್ರಮವಾಗಿ ಕಚ್ಚಾ ಬಾಂಬ್ ತಯಾರಿಸುವ ವೇಳೆ ಸ್ಫೋಟ ಸಂಭವಿಸಿದೆ.
ಮೃತರಲ್ಲಿ ಮನೆ ಮಾಲೀಕ ಮಾಮೂನ್ ಮೊಲ್ಲಾ, ಸಕಿರುಲ್ ಸರ್ಕಾರ್ ಮತ್ತು ಸಾಗರಪಾರದ ಮಹಾರಬ್ ಕಾಲೋನಿ ನಿವಾಸಿಗಳಾದ ಮುಸ್ತಾಕಿಮ್ ಎಸ್‌ಕೆ ಎಂದು ಗುರುತಿಸಲಾಗಿದೆ.ಸ್ಫೋಟದ ಸದ್ದು ಎಷ್ಟು ಜೋರಾಗಿದೆ ಎಂದರೆ ಮನೆಯ ಮೇಲ್ಛಾವಣಿ ಕೂಡ ಕುಸಿದು ಬಿದ್ದಿದೆ.
ನವೆಂಬರ್ ಅಂತ್ಯದಲ್ಲಿ ಮಧ್ಯಪ್ರದೇಶದ ಮೊರೆನಾದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ಪರಿಣಾಮ ಮೂರು ಮನೆಗಳು ಕುಸಿದು ಬಿದ್ದಿದೆ ಅಲ್ಲದೆ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು ಐದು ಮಂದಿ ಗಾಯಗೊಂಡಿದ್ದರು.
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.