Advertisement

ಸಹಕಾರಿ ಬ್ಯಾಂಕ್‌ ಆಡಳಿತ ಮಂಡಳಿಗೆ ವಾರದ ಪೆನಲ್‌ ಪುನರಾಯ್ಕೆ

03:31 PM Aug 27, 2018 | |

ಸಿಂದಗಿ: ಪ್ರತಿಷ್ಠಿತ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್‌ ಆಡಳಿತ ಮಂಡಳಿಯ ಸಾಮಾನ್ಯ ವರ್ಗದ ಒಂಬತ್ತು, ಹಿಂದುಳಿದ ವರ್ಗದ ಎರಡು ಸ್ಥಾನಗಳ ಸದಸ್ಯರ ಆಯ್ಕೆಗೆ ರವಿವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಶರಣಪ್ಪ ವಾರದ ಅವರ ಪೆನಲ್‌ನ ಎಲ್ಲ ಸದಸ್ಯರು ಪುನರಾಯ್ಕೆಯಾಗಿದ್ದಾರೆ. ಮಹಿಳಾ ಮೀಸಲಾತಿಯ ಎರಡು, ಪರಿಶಿಷ್ಟ ಜಾತಿ ಮೀಸಲಾತಿಯ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಎಂ.ಎಸ್‌. ರಾಠೊಡ ಅವರು ಚುನಾವಣೆ
ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

Advertisement

470 ಸದಸ್ಯರಲ್ಲಿ 444 ಸದಸ್ಯರು ಮತ ಚಲಾಯಿಸಿದ್ದು ಶೇ. 94.47 ಮತದಾನವಾಗಿದೆ. 444 ಮತಗಳಲ್ಲಿ ಸಾಮಾನ್ಯ ವರ್ಗದ 9 ಸ್ಥಾನಗಳಿಗೆ ಚಲಾಯಿಸಿದ ಮತಗಳಲ್ಲಿ 11 ಮತಗಳು, ಹಿಂದುಳಿದ ವರ್ಗದ ಎರಡು ಸ್ಥಾನಗಳಿಗೆ ಚಲಾಯಿಸಿದ ಮತಗಳಲ್ಲಿ 15 ಮತಗಳು ತಿರಸ್ಕೃತಗೊಂಡಿವೆ. 

ಸಾಮಾನ್ಯ ವರ್ಗದ ಒಂಬತ್ತು ಸ್ಥಾನಗಳಿಗೆ ಸ್ಪರ್ಧಿಸಿ ನಿಹಾಲಚಂದ ಪೋರವಾಲ (379), ಷಣ್ಮುಖಪ್ಪ ಸಂಗಮ (379), ಸುರೇಶಬಾಬು ಜೋಗೂರ (376), ಸಿದ್ದಲಿಂಗಪ್ಪ ವಡೋxಡಗಿ (360), ರವಿ ನಾಗೂರ (356), ಡಾ| ವಿಜಯಕುಮಾರ ವಾರದ (345), ಶರಣಪ್ಪ ವಾರದ (338), ಪ್ರಕಾಶ ಕೋರಿ (330), ಬಸವರಾಜ ಶಹಾಪುರ (330) ಮತ್ತು ದುಂಡಪ್ಪ ಸೊನ್ನದ (171) ಮತ ಪಡೆದಿದ್ದಾರೆ. ಈ 10 ಅಭ್ಯರ್ಥಿಗಳಲ್ಲಿ ಹೆಚ್ಚು ಮತ ಪಡೆದ 9 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗದ ಎರಡು ಸ್ಥಾನಗಳಿಗೆ ಸ್ಪರ್ಧಿಸಿದ್ದ ಮಹಾದೇವಪ್ಪ ಸಿಂದಗಿ (359), ನೀಲಕಂಠ ಗುಣಾರಿ (351) ಮತ್ತು ಜುಲೀಕರ್‌ ಅಂಗಡಿ (88) ಮತ ಪಡೆದಿದ್ದಾರೆ. ಈ ಮೂವರು ಅಭ್ಯರ್ಥಿಗಳಲ್ಲಿ ಹೆಚ್ಚು ಮತಗಳನ್ನು ಪಡೆದ ಇಬ್ಬರು
ಆಯ್ಕೆಯಾಗಿದ್ದಾರೆ.

ಮಹಿಳಾ ಮೀಸಲಾತಿಯ ಎರಡು ಸ್ಥಾನಗಳಿಗೆ ಮಹಾದೇವಿ ಗುರುಬಸಪ್ಪ ಬಮ್ಮಣ್ಣಿ, ಮಹಾದೇವಿ ಚನ್ನಬಸಪ್ಪ ಪಟ್ಟಣಶೆಟ್ಟಿ ಮತ್ತು ಪರಿಶಿಷ್ಟ ಜಾತಿ ಮೀಸಲಾತಿಯ ಒಂದು ಸ್ಥಾನಕ್ಕೆ ಲಕ್ಷ್ಮಣ ದೊಡಮನಿ ಅವಿರೋಧ ಆಯ್ಕೆಯಾಗಿದ್ದಾರೆ.

Advertisement

ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಅವರು ಎಲ್ಲ ಸದಸ್ಯರಿಗೆ ಸನ್ಮಾನಿಸಿದರು. ನಂತರ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಬ್ಯಾಂಕ್‌ ಆವರಣದಲ್ಲಿ ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು. ಅಧ್ಯಕ್ಷ ಶರಣಪ್ಪ ವಾರದ ಮಾತನಾಡಿ, 54 ವರ್ಷ ಇತಿಹಾಸದ ಬ್ಯಾಂಕಿಗೆ ಪುನಃ ನಮ್ಮ ಪೆನಲ್‌ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ಬ್ಯಾಂಕಿನ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದರು.

ಆಡಳಿತ ಮಂಡಳಿಯ ಸದಸ್ಯ ಡಾ| ವಿಜಯಕುಮಾರ ವಾರದ ಮಾತನಾಡಿ, ಸದಸ್ಯರು ನಮ್ಮ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುತ್ತೇವೆ. ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ಬ್ಯಾಂಕಿನ ಗ್ರಾಹಕರ ಮತ್ತು ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

ನವೀನ ಶಹಾಪುರ, ಡಾ| ಸೋಮೇಶ ಶಹಾಪುರ, ಸಂತೋಷ ಬಮ್ಮಣ್ಣಿ, ಸಂಜೀವ ವಡ್ಡೋಡಗಿ, ಪ್ರಕಾಶ ಕೋರಿ, ಕಿರಣ ಕೋರಿ, ರಾಜೇಂದ್ರ ಕಿಣಗಿ, ರಾಜು ಕಮತಗಿ, ಶರಣು ಶ್ರೀಗಿರಿ, ಸಿದ್ದು ಪಟ್ಟಣಶೆಟ್ಟಿ, ಬೋಜಪ್ಪ ಸಂಗಮ, ಕುಮಾರ ಸಂಗಮ, ಪ್ರಶಾಂತ ಪಟ್ಟಣಶೆಟ್ಟಿ, ಸೈಫನ್‌ ಯಂಕಂಚಿ, ಕಾಳಪ್ಪ ಶಹಾಪುರ, ಸೈಫನ್‌ ಖೇಡ, ಮುಗಲಿ ಬುಡ್ಡಾ, ಮಂದೇವಾಲಿ ಸೇರಿದಂತೆ ನೂರಾರು ಜನರು ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next