ಮಣಿಪಾಲ: ಮಾಹೆ ವಿ.ವಿ. ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಮಣಿಪಾಲ ಮ್ಯಾರಥಾನ್‌ನ 7ನೇ ಆವೃತ್ತಿಯ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಮಣಿಪಾಲ ಮ್ಯಾರಥಾನ್ 2025ರ ಫೆ.9ರಂದು ನಡೆಯಲಿದೆ. ಮ್ಯಾರಥಾನ್ ಫೆ.9ರ ಬೆಳಗ್ಗೆ 5 ಗಂಟೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಿಂದ ಆರಂಭವಾಗಲಿದೆ.
“ಇನ್ನೊವೇಶನ್ ಇನ್ ಮೋಶನ್
“ಟೆಕ್ನಾಲಜಿ ಫಾರ್ ಹೆಲ್ತ್ ಆ್ಯಂಡ್ ಫಿಟ್‌ನೆಸ್’ ಎಂಬ ಧ್ಯೇಯದೊಂದಿಗೆ ಮಣಿಪಾಲ್ ಮ್ಯಾರಥಾನ್ 2025 ನಡೆಯಲಿದೆ. ಇದು ಭಾರತದ ಅತಿದೊಡ್ಡ ವಿದ್ಯಾರ್ಥಿ-ಸಂಘಟಿತ ಮ್ಯಾರಥಾನ್‌ಗಳಲ್ಲಿ ಒಂದಾಗಿದೆ. ವಿಜೇತರಿಗೆ ವಿಶೇಷ ಬಹುಮಾನಗಳು ಇರಲಿವೆ. 2024ರಲ್ಲಿ 15,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಬಾರಿ ಸಂಘಟಕರು ವಿವಿಧ ಭಾಗದ 20,000ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದಾರೆ.
ಮಣಿಪಾಲ ಮತ್ತು ಉಡುಪಿ ಕರಾವಳಿಯಲ್ಲಿ ಮ್ಯಾರಥಾನ್ ಓಟದ ಮಾರ್ಗ ನಿಗದಿ ಮಾಡಲಾಗುವುದು. ಅಂತಾರಾಷ್ಟ್ರೀಯ ಪ್ರಮಾಣೀಕರಣ, ವಿಶ್ವ ದರ್ಜೆಯ ಓಟದ ಅನುಭವ ಸಿಗಲಿದೆ. ಓಟದ ಬಳಿಕ ವಿವಿಧ ಕಾರ್ಯಕ್ರಮಗಳೂ ಇರಲಿವೆ. https://manipalmarathon.in/ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.