Advertisement

ಬಿಹಾರ ಮಾದರಿಯಲ್ಲಿ ಜನತಾ ಪರಿವಾರ ಒಗ್ಗೂಡಿಸುತ್ತೇವೆ: ಬಸವರಾಜ ಹೊರಟ್ಟಿ

12:36 PM Jan 20, 2021 | Team Udayavani |

ಬೆಂಗಳೂರು: ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿ ಜನತಾ ಪರಿವಾರ ಒಗ್ಗೂಡಿತ್ತೇವೆ. ಮಧು ಬಂಗಾರಪ್ಪ ಮನವೊಲಿಕೆ ಮಾಡುತ್ತೇವೆ. ಜಿ.ಟಿ ದೇವೇಗೌಡರನ್ನೂ ಭೇಟಿ ಮಾಡುತ್ತೇವೆ. ಗುಬ್ಬಿ ಶ್ರೀನಿವಾಸ್ ಸೇರಿದಂತೆ ಅಸಮಾಧಾನಿತರ ಮನವೊಲಿಕೆ ಮಾಡುತ್ತೇವೆ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಸಂವಹನದ ಸಮಸ್ಯೆಯಾಗಿದೆ. ಯಾರು ಏನೇ ಹೇಳಿದರೂ ಅದನ್ನು ನಂಬಿ ಬಿಡುತ್ತಾರೆ ಎಂದರು.

ಜನತಾ ಪರಿವಾರದಿಂದ ಬೇರೆ ಪಕ್ಷಗಳಿಗೆ ಹೋದವರು ಸೋಲು ಕಂಡಿದ್ದಾರೆ. ಜನತಾ ಪರಿವಾರ ಒಗ್ಗೂಡಿಸಲು ಮುಂದಾಗಿದ್ದೇವೆ ಎಂದ ಅವರು, ಸಿ.ಎಂ. ಇಬ್ರಾಹಿಂರನ್ನು ರಾಜ್ಯಾಧ್ಯಕ್ಷ ಮಾಡುವ ತೀರ್ಮಾನ ದೇವೇಗೌಡರು ತಗೆದುಕೊಳ್ಳುತ್ತಾರೆ. ಇಬ್ರಾಹಿಂ ಜೊತೆಗೂಡಿ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

ಇದನ್ನೂ ಓದಿ:ರಾಜಭವನ ಚಲೋ ನಾಟಕ ಮಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಕಾಂಗ್ರೆಸ್ ಗೆ ಬಿಜೆಪಿ ಪ್ರಶ್ನೆ

ವಿಧಾನ ಪರಿಷತ್ ನಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಪರಿಷತ್ ಸಭಾಪತಿ ಸ್ಥಾನ ಜೆಡಿಎಸ್ ಗೆ ಸಿಗಲಿದೆ. ಈಗಾಗಲೇ ಹೆಚ್. ಡಿ ದೇವೇಗೌಡರು ನನ್ನನ್ನು ಸಭಾಪತಿಯನ್ನಾಗಿ ಮಾಡುವ ತೀರ್ಮಾನ ಮಾಡಿದ್ದಾರೆ ಎಂದರು.

Advertisement

ಬಿಜೆಪಿಯಲ್ಲೂ ಸಭಾಪತಿ ಸ್ಥಾನಕ್ಕೆ ಆಕಾಂಕ್ಷಿಗಳಿರಬಹುದು, ಅವರು 31 ಮಂದಿ ಇದ್ದೇವೆ ನಮಗೆ ಸಭಾಪತಿ ಸ್ಥಾನ ಕೊಡಿ ಅಂದರೆ ನಾವೂ ಹದಿನಾಲ್ಕು ಸದಸ್ಯರು ಇದ್ದೇವಲ್ಲ, ಏನೇ ಮಾಡಬೇಕಿದ್ದರೂ ನಮ್ಮ ಬೆಂಬಲ ಬೇಕಲ್ವಾ  ಎಂದು ಬಿಜೆಪಿಗೆ ಪರೋಕ್ಷ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಸಚಿವ ಬಿ.ಸಿ. ಪಾಟೀಲ್‌ ರೈತರ ಕ್ಷಮೆ ಕೇಳಬೇಕು: ಶಾಸಕ ಪುಟ್ಟರಾಜು ಆಗ್ರಹ

ನಾನು ಅವರು ಸಭಾಪತಿ ಆಗಬೇಕೆಂದು ದೇವೇಗೌಡರು, ಕುಮಾರಸ್ವಾಮಿಗೆ ಸ್ಪಷ್ಟತೆ ಇದೆ. ನಮಗೇ ಸಭಾಪತಿ ಸ್ಥಾನ ಕೊಡಬೇಕು, ನಾವೇನೂ‌ ಸನ್ಯಾಸಿಗಳಲ್ಲ ಎಂದರು.

ವಿಧಾನಪರಿಷತ್ ನಲ್ಲಿ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ವಿಚಾರದಲ್ಲಿ ಮಾತನಾಡಿದ ಅವರು, ಬಿಜೆಪಿಯ ಅವಿಶ್ವಾಸ ನಿರ್ಣಯ ಮಂಡನೆಗೆ ನಮ್ಮ ಬೆಂಬಲವೂ ಇದೆ. ನಾವು ಸಹಿ ಹಾಕಿ ಇಟ್ಟುಕೊಂಡಿದ್ದೇವೆ. ವರಿಷ್ಠರು ಹೇಳಿದ ತಕ್ಷಣ ವಿಧಾನಪರಿಷತ್ ಕಾರ್ಯದರ್ಶಿಗೆ ಕೊಡುತ್ತೇವೆ ಎಂದು ಹೊರಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next