Advertisement

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

02:36 PM Dec 20, 2024 | Team Udayavani |

ಬೆಳಗಾವಿ: ನನ್ನನ್ನು ರಾತ್ರಿಯಡಿ ಅಕ್ರಮವಾಗಿ ಬಂಧನದಲ್ಲಿ ಇಟ್ಟಿದ್ದಾರೆ. ಯಾವುದೇ ನೋಟೀಸ್ ನೀಡಿಲ್ಲ ಎಂದು ಬೆಳಗಾವಿಯಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ (C.T.Ravi) ಹೇಳಿದರು.

Advertisement

ಶುಕ್ರವಾರ (ಡಿ.20) ಬೆಳಗಾವಿ ಐದನೇ ಜೆಎಂಎಫ್ ಸಿ ನ್ಯಾಯಾಲಯದ ಹೊರಗಡೆ ಬರುವ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಅಕ್ರಮವಾಗಿ ಬಂಧನ ಮಾಡಿ ರಾತ್ರಿಯಿಡೀ ಮೂರು ಜಿಲ್ಲೆಗಳಲ್ಲಿ ಸುತ್ತಾಡಿಸಿ ಸರ್ವಾಧಿಕಾರಿ ಧೋರಣೆ ಮೆರೆದಿದ್ದಾರೆ. ಹಲ್ಲೆ ಮಾಡಿದ್ದಾರೆ. ಎಲ್ಲದಕ್ಕೂ ಒಂದು ಪೂರ್ಣ ವಿರಾಮ ಇರುತ್ತದೆ. ಇದರಲ್ಲೂ ಪೂರ್ಣ ವಿರಾಮ ಬೀಳುತ್ತದೆ ಎಂದು ಕಿಡಿಕಾರಿದರು.

ಸರ್ವಾಧಿಕಾರ ಬಹಳ ದಿನ ನಡೆಯುವುದಿಲ್ಲ. ಪೊಲೀಸ್ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ. ನಮಗೂ ಒಂದು ಕಾಲ ಬರುತ್ತದೆ ಎಂದು ಸಿ.ಟಿ.ರವಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.