Advertisement

ಪಿಎಂ ಮೋದಿ, ಭಾರತದೊಂದಿಗಿನ ನಮ್ಮ ಸಂಬಂಧ ಅದ್ಭುತ: ಅಮೆರಿಕ

11:34 AM Nov 30, 2017 | udayavani editorial |

ವಾಷಿಂಗ್ಟನ್‌ : ‘ಪ್ರಧಾನಿ ಮೋದಿ ಮತ್ತು ಭಾರತದೊಂದಿಗೆ ಅಮೆರಿಕ ಸಂಬಂಧಗಳು ಮಜಬೂತ್‌ ಆಗಿವೆ ಮಾತ್ರವಲ್ಲ ಅದ್ಭುತವೂ ಆಗಿವೆ. ನಮ್ಮೊಳಗಿನ ದೈನಂದಿನ ಸಂಭಾಷಣೆಯು ಉತ್ತರ ಕೊರಿಯ ಸಮಸ್ಯೆಯನ್ನು ನಿಭಾಯಿಸುವುದಕ್ಕೆ ನೆರವಾಗುತ್ತಿವೆ. ಉತ್ತರ ಕೊರಿಯ ಸಮಸ್ಯೆ ಜಾಗತಿಕವಾಗಿದ್ದು ಇಡಿಯ ವಿಶ್ವಕ್ಕೇ ಅದು ಬೆದರಿಕೆಯಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಭಾರತ ಇನ್ನಷ್ಟು ಹೆಚ್ಚನ್ನು ಮಾಡಬೇಕಿದೆ ಮತ್ತು ಈ ಕುರಿತಾಗಿ ನಮ್ಮೊಳಗಿನ ಸಂವಾದ ಇದೇ ರೀತಿ ಮುಂದುವರಿಯಬೇಕಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದೆ.

Advertisement

ಭಾರತದ ಹೈದರಾಬಾದಿನಲ್ಲಿ ನಡೆಯುತ್ತಿರುವ 3 ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗ (ಜಿಇಎಸ್‌) ಅದ್ಭುತ ಯಶಸ್ಸನ್ನು ಕಂಡಿದ್ದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧ್ಯವವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅಮೆರಿಕದ ವಿದೇಶಾಂಗ ವಕ್ತಾರ ಹೀದರ್‌ ನ್ಯೂವರ್ಟ್‌ ಹೇಳಿದ್ದಾರೆ. 

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಅವರ ಭಾರತದಲ್ಲಿನ ಜಿಇಎಸ್‌ ಶೃಂಗಕ್ಕೆ ಅಮೆರಿಕದ ನಿಯೋಗವನ್ನು ಒಯ್ದಿರುವುದು ಮತ್ತು ಅದ್ಭುತ ಯಶಸ್ಸನ್ನು ಸಾಧಿಸಿರುವ ಬಗ್ಗೆ ನಮಗೆ ಹೆಮ್ಮೆ ಇದೆ. ಇವಾಂಕಾ ಶ್ವೇತಭವನದ ಸಲಹೆಗಾರ್ತಿಯಾಗಿಯೂ ಮಿಂಚುತ್ತಿದ್ದಾರೆ’ ಎಂದು ನ್ಯೂವರ್ಟ್‌ ಹೇಳಿದರು. 

ಹೈದರಾಬಾದಿನ ಜಿಇಎಸ್‌ ಶೃಂಗದಲ್ಲಿ ವಿಶ್ವಾದ್ಯಂತದ ಸುಮಾರು 1,500 ಯುವ ಉದ್ಯಮಶೀಲರು ಪಾಲ್ಗೊಳ್ಳುತ್ತಿದ್ದು ಈ ದಿಶೆಯಲ್ಲಿ ನಾವು ಮಾಡಿದ್ದ ನಾಮಕರಣ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ನ್ಯೂವರ್ಟ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next