Advertisement

ಲೂಟಿ ಮಾಡಿ ಹಣ ಕಳುಹಿಸಲು ನನಗೆ ಹೈಕಮಾಂಡ್‌ ಇಲ್ಲ

07:10 AM May 05, 2018 | Team Udayavani |

ರಾಯಚೂರು: ಕಾಂಗ್ರೆಸ್‌ ಮತ್ತು ಬಿಜೆಪಿಯವರು ಪರಸ್ಪರ ಲೂಟಿಕೋರರು ಎಂದು ಜರಿದುಕೊಳ್ಳುತ್ತಾರೆ. ಅವರಂತೆ ಜನರ ಹಣ ಲೂಟಿ ಮಾಡಿ ದೆಹಲಿಗೆ ಕಳುಹಿಸಲು ಜೆಡಿಎಸ್‌ಗೆ ಯಾವ ಹೈಕಮಾಂಡ್‌ ಇಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.  ಕುಮಾರಸ್ವಾಮಿ ಟಾಂಗ್‌ ನೀಡಿದರು.

Advertisement

ತಾಲೂಕಿನ ಗಿಲ್ಲೆಸೂಗೂರು ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್‌ ವಿಕಾಸಪರ್ವ ಸಮಾವೇಶದಲ್ಲಿ ಮಾತನಾಡಿ, ರಾಹುಲ್‌ ಗಾಂಧಿ ನಮ್ಮ ತಂದೆಯವರನ್ನು ನೀವು ಯಾರ ಪರ ಸ್ಪಷ್ಟಪಡಿಸಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನಮ್ಮ ತಂದೆಯವರ ಬದಲು ನಾನು ಉತ್ತರಿಸುತ್ತೇನೆ. ನಾವು ಕಾಂಗ್ರೆಸ್‌ ಪರವೂ ಅಲ್ಲ, ಬಿಜೆಪಿ ಪರವೂ ಅಲ್ಲ. ಜನರ ಪರ. ನಮಗೆ ಜನರೇ ಹೈಕಮಾಂಡ್‌. ನಿಮ್ಮ ಹಣವನ್ನು ನಿಮಗೇ ಖರ್ಚು ಮಾಡುತ್ತೇವೆ. ಕಾಂಗ್ರೆಸ್‌, ಬಿಜೆಪಿಯಂತೆ ಅಧಿಕಾರ ಅನುಭವಿಸಿ ಜನರ ಹಣ ಲೂಟಿ ಮಾಡುವುದಿಲ್ಲ.ಜೆಡಿಎಸ್‌ನಲ್ಲಿ ನಾನು ಏಕಾಂಗಿ. ನನ್ನ ಪರ ಪ್ರಚಾರ ಮಾಡಲು ಉತ್ತರ ಪ್ರದೇಶ, ಮಧ್ಯಪ್ರದೇಶದಿಂದ ಯಾವ ನಾಯಕರೂ ಬರುವುದಿಲ್ಲ. ಬಂದರೆ ಬಿಎಸ್‌ಪಿ ನಾಯಕಿ ಮಾಯಾವತಿ ಮಾತ್ರ ಬರಬೇಕು ಅಷ್ಟೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next