Advertisement

ರಾಜಕಾರಣಕ್ಕೆ ಹೊಸ ತಿರುವು ನೀಡುತ್ತೇವೆ

06:15 AM Oct 23, 2018 | |

ಶಿವಮೊಗ್ಗ: ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ರಾಜಕಾರಣಕ್ಕೆ ಹೊಸ ತಿರುವು ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡೂ ಪಕ್ಷಗಳು ಒಂದಾಗಿ ಹೋಗಲು ತೀರ್ಮಾನಿಸಲಾಗಿದೆ ಎಂದರು.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಿಂದ ಗೊಂದಲವಾಗಿದೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಎರಡೂ ಪಕ್ಷದವರು ಒಂದಾಗಿ ಈ ಉಪಚುನಾವಣೆ ಎದುರಿಸಲಾಗುತ್ತಿದೆ. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡಿಲ್ಲ. ಬೆಂಗಳೂರಿನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಸಹ ಮೈತ್ರಿ ಮೂಲಕವೇ ಎದುರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಶೀಘ್ರ ಬಗೆಹರಿಸುತ್ತೇವೆ: ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ರಮೇಶ್‌ ಜಾರಕಿಹೊಳಿ ಮಧ್ಯೆ ಕೆಲ ಗೊಂದಲಗಳಿವೆ. ಇದನ್ನು ಶೀಘ್ರವೇ ಬಗೆಹರಿಸಿ ಎಲ್ಲ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್‌ ದೊಡ್ಡ ಪಕ್ಷ. ಆದರೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣ ಇಲ್ಲ. ಕೆಲವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ರಮೇಶ್‌ ಜಾರಕಿಹೊಳಿ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ಕೆಲ ಗೊಂದಲಗಳಿವೆ. ಈ ಬಗ್ಗೆ ಎಲ್ಲರೂ ಕೂತು ಚರ್ಚಿಸಿ ಸರಿಪಡಿಸುತ್ತೇವೆ. ಜಾರಕಿಹೊಳಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದರು.

Advertisement

ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪ ರಾಜಕೀಯ ಪ್ರೇರಿತ. ಎಷ್ಟೊ ವರ್ಷಗಳ ಹಿಂದೆ ಅತ್ಯಾಚಾರ ನಡೆದಿದೆ ಎಂದು ಈಗ ದೂರು ದಾಖಲಾಗಿದೆ. ರಾಜಕೀಯ ಪ್ರೇರಿತರಾಗಿ ಈ ದೂರು ದಾಖಲಿಸಲಾಗಿದೆ ಎಂದರು.

ಮೋದಿ ಸಾಧನೆ ಶೂನ್ಯ: ಪ್ರಧಾನಿ ನರೇಂದ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಗುಂಡೂರಾವ್‌, ದೇಶಕ್ಕೆ ಅಚ್ಛೇ ದಿನ ಬಂದಿಲ್ಲ, ಕೇಂದ್ರ ಸರ್ಕಾರ ಕೊಟ್ಟಿರುವ ಮಾತುಗಳನ್ನು ಉಳಿಸಿಕೊಳ್ಳಲು ಆಗಿಲ್ಲ. ಪ್ರತಿದಿನ ಗಡಿಯಲ್ಲಿ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿವೆ. ಮೋದಿ ಪ್ರಧಾನಿಯಾದ ನಂತರ ಭಯೋತ್ಪಾದನೆ ಹೆಚ್ಚಾಗಿದೆ. ಇದನ್ನು ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಮಾತಿನ ಸರದಾರ. ಕೆಲಸದಲ್ಲಿ ಅವರ ಸಾಧನೆ ಶೂನ್ಯ ಎಂದು ಆರೋಪಿಸಿದರು.

ಮನಸು ಬಂದಾಗಲೆಲ್ಲ ಚುನಾವಣೆ
ಮನಸು ಬಂದಾಗಲೆಲ್ಲ ಅಪ್ಪ ಮಗ ಉಪಚುನಾವಣೆ ಮಾಡುತ್ತಾರೆ. ಎಷ್ಟು ಸಾರಿ ಉಪಚುನಾವಣೆ ಆಗಿದೆ ಎಂಬುದನ್ನು ಗಮನಿಸಬೇಕು. ಅ ಧಿಕಾರ ಹಿಡಿಯುವುದೇ ಅವರ ಮುಖ್ಯ ಉದ್ದೇಶವಾಗಿದೆ. ಅಪ್ಪ-ಮಗನೆ ಎಂಪಿ, ಎಂಎಲ್‌ಎ ಆಗಬೇಕು. ರಾಷ್ಟ್ರೀಯ ಅಧ್ಯಕ್ಷರು ಘೋಷಣೆ ಮಾಡುವ ಮುನ್ನವೇ ಅಭ್ಯರ್ಥಿಯಾಗಿ ಮಗನ ಹೆಸರನ್ನು ಘೋಷಿಸುತ್ತಾರೆ. ಬಿಜೆಪಿಯಲ್ಲಿ ಹೇಳುವವರು ಕೇಳುವವರೇ ಇಲ್ಲದಂತಾಗಿದೆ. ನಾನು ಹೇಳಿದಂತೆ ನಡೆಯಬೇಕು. ಬೇರೆ ಯಾರು ಬೆಳೆಯಬಾರದು ಎಂಬ ಅಪ್ಪ ಮಕ್ಕಳ ಧೋರಣೆ ಸರಿಯಲ್ಲ ಎಂದು ಯಡಿಯೂರಪ್ಪ ವಿರುದ್ಧ ದಿನೇಶ್‌ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next