Advertisement

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

04:05 PM Nov 18, 2024 | Team Udayavani |

ಬೆಳಗಾವಿ: ಆರಂಭದಲ್ಲಿ ಬಿಜೆಪಿಯಿಂದ ನನಗೆ ಪಕ್ಷ ಸೇರುವಂತೆ ಆಫರ್ ಬಂದಿತ್ತು. ಈಗ ಹಣದ ಆಫರ್ ಬಂದಿಲ್ಲ. ಒಂದು ವರ್ಷದ ಹಿಂದೆ ಆಫರ್ ಬಂದಿತ್ತು. ಇದನ್ನು ಮುಖಂಡರ ಗಮನಕ್ಕೆ ತಂದಿದ್ದೇನೆ. ಒಂದು ವರ್ಷದ ಹಿಂದೆ ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ಮಾಡಿದ್ದರು. ಈಗ ಹಣದ ಡಿಮ್ಯಾಂಡ್ ಯಾರೂ ಮಾಡಿರಲಿಲ್ಲ. ಸ್ನೇಹ, ವಿಶ್ವಾಸದ ಮೇಲೆ ಬಿಜೆಪಿಯಲ್ಲಿರುವ ಸ್ನೇಹತರು ಆಹ್ವಾನ ಮಾಡಿದ್ದರು. ಆಗ ನಿಮ್ಮ ಪಕ್ಷದಲ್ಲಿ ನೀವು ಇರಿ, ನಮ್ಮ ಪಕ್ಷದಲ್ಲಿ ನಾವು ಇರುತ್ತೇನೆಂದು ಹೇಳಿದ್ದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್ ಹೇಳಿದರು.

Advertisement

ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅವರಿಗೆ ಬಿಜೆಪಿಯಿಂದ ನೂರು ಕೋಟಿ ಆಫರ್ ಬಗ್ಗೆ ಮಂಡ್ಯ ಶಾಸಕ ರವಿ ಗಣಿಗ ಆರೋಪ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಗಣಿಗ ಹೇಳಿರುವುದು ಸುಳ್ಳು. ನನಗೆ ದುಡ್ಡಿನ ಯಾವುದೇ ಆಫರ್ ಬಂದಿಲ್ಲ. ರವಿ ಗಣಿಗ ಅವರು ಯಾಕೆ ಹೇಳಿದ್ದಾರೆಂದು ಅವರನ್ನೇ ಕೇಳಿ. ಅವರ ಬಳಿ ಆಡಿಯೋ ವಿಡಿಯೋ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದರು.

ನೂರಲ್ಲ ಇನ್ನೂರು ಕೋಟಿ ಕೊಟ್ಟರೂ ನಾನು ಹೋಗಲ್ಲ. ಪ್ರಸಂಗ ಬಂದಾಗ ಯಾರು ಕರೆದಿದ್ದಾರೆಂದು ಹೇಳುತ್ತೀನೆ. ದುಡ್ಡಿಗೆ ಮಾರಿಕೊಳ್ಳುವವನು ನಾನಲ್ಲ, ಎಲ್ಲೂ ಹೋಗಲ್ಲ. ಈ ವಿಚಾರವನ್ನು ವರ್ಷದ ಹಿಂದೆ ನಮ್ಮ ನಾಯಕರ ಗಮನಕ್ಕೆ ತಂದಿದ್ದೇನೆ. ಈಗ ಮತ್ತೆ ಯಾರೂ ನನಗೆ ಆಫರ್ ಕೊಟ್ಟಿಲ್ಲ. ಬೇರೆ ಶಾಸಕರಿಗೆ ಆಫರ್ ಮಾಡುತ್ತಿರಬಹುದು. ಬಿಜೆಪಿಯವರು ನಿರಂತರವಾಗಿ ಈ ರೀತಿ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಬೇರೆ ಬೇರೆ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಐದು ವರ್ಷ ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ. ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಇರುತ್ತೇವೆ. ನಮ್ಮನ್ನು ಕರೆಯಬೇಡಿ ಎಂದೂ ಆಗಲೇ ಹೇಳಿದ್ದೇನೆ ಎಂದು ಬಾಬಾಸಾಹೇಬ ಪಾಟೀಲ್ ಹೇಳಿದರು.

ಬೆರಳೆಣಿಕೆಯಷ್ಟು ಶಾಸಕರು ಬಿಜೆಪಿಗೆ ಹೋಗಬಹುದು. ಇದರಿಂದ ಸರ್ಕಾರ ಏನೂ ಬೀಳುವುದಿಲ್ಲ ಎಂದ ಶಾಸಕ ಬಾಬಾಸಾಹೇಬ್ ಪಾಟೀಲ್, ಇದರಲ್ಲಿ ಬಿಜೆಪಿಯವರು ಯಶಸ್ವಿಯಾಗುವುದಿಲ್ಲ. ನಾಲ್ಕೈದು ಶಾಸಕರು ಹೋದರೂ ಹೋಗಬಹುದು ಸರ್ಕಾರಕ್ಕೆ ಏನೂ ಆಗದು. ಬನ್ನಿ ಸರ್ಕಾರ ಮಾಡೋಣ ಎಂದು ಹೇಳಿದ್ದರು. ಆಡಿಯೋ ವಿಡಿಯೋ ಇದ್ದರೆ ಹೊರ ಹಾಕಲಿ ಬಿಜೆಪಿಯವರು ಸರ್ಕಾರ ಅಸ್ತಿರಗೊಳಿಸುವುದು ನಿರಂತರವಾಗಿ ನಡೆದಿದೆ. ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next