Advertisement

Wayanad;ಮೃತರ ಭಾಗ ಒಂದೊಂದೆಡೆ ಅಂತ್ಯಕ್ರಿಯೆ: 73 ದೇಹಗಳಿಗೆ ಹೊಂದಾಣಿಕೆಯಾದ ಡಿಎನ್‌ಎ

02:00 AM Aug 31, 2024 | Team Udayavani |

ವಯನಾಡ್‌: ಭೂಕುಸಿತದ ಭೀಕರ ದುರಂತಕ್ಕೆ ವಯನಾಡ್‌ ಸಾಕ್ಷಿಯಾಗಿ ತಿಂಗಳು ಕಳೆದಿದೆ. ದುರಂತದಲ್ಲಿ ಮಡಿ ದವರ ದೇಹಗಳನ್ನು ಅವಶೇಷದಡಿ ಯಿಂದ ಹುಡುಕಿ ಹಲವು ಶ್ಮಶಾನಗಳಲ್ಲಿ ಹೂಳಲಾಗಿದೆ. ಆದರೆ ಪ್ರವಾಹದ ಭೀಕರತೆಗೆ ಮೃತದೇಹಗಳ ಭಾಗಗಳು ಪ್ರತ್ಯೇಕವಾಗಿ ದೊರೆತಿದ್ದು, ಒಂದೊಂದು ಭಾಗ ಒಂದೊಂದು ಕಡೆ ಹೂಳಲಾಗಿದೆ.

Advertisement

ಮೃತಪಟ್ಟವರ ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲಾಗಿದ್ದು, ಅದರ ಫ‌ಲಿತಾಂಶ ಬಂದಿದೆ. ಬುಧವಾರ 36 ಜನರ ಡಿಎನ್‌ಎ ಫ‌ಲಿತಾಂಶ ಪ್ರಕಟವಾಗಿದ್ದು, ಪೂತ್ತುಮಲದ ಶ್ಮಶಾನದಲ್ಲಿ 56 ದೇಹದ ಭಾಗಗಳನ್ನೂ ಸೇರಿ 73 ಮೃತದೇಹಗಳೊಂದಿಗೆ ಈ ಡಿಎನ್‌ಎ ಹೊಂದಾಣಿಕೆಯಾಗಿದೆ.

ಇದಾದ ಬಳಿಕ ಹಲವಾರು ಮಂದಿ ತಮ್ಮವರ ದೇಹದ ಒಂದೊಂದು ಭಾಗ ಒಂದೊಂದು ಕಡೆ ಹೂಳಲಾಗಿದೆ ಎಂದು ಹೇಳುತ್ತಿದ್ದಾರೆ. ಅವರ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕಾರಣಕ್ಕೆ ಅಲ್ಲಿನ ಜನರು ತಮ್ಮ ಕುಟುಂಬ ಸದಸ್ಯರ ಶವಗಳನ್ನು ಒಂದೇ ಕಡೆ ಸಮಾಧಿ ಮಾಡಲು ಈಗ ಹೂತಿರುವ ಜಾಗದಿಂದ ದೇಹದ ಭಾಗಗಳನ್ನು ಹೊರತೆಗೆಯಲು ಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next