Advertisement
ಎರಡು ದಿನಕ್ಕೊಮ್ಮೆ ನೀರು ಪೂರೈಕೆಎಲ್ಲೂರು ಗ್ರಾಮ ಪಂಚಾಯತ್ ವತಿಯಿಂದ ಸುಮಾರು 475 ಮನೆಗಳಿಗೆ ನಳ್ಳಿ ನೀರು ಪೂರೈಕೆಯಾಗುತ್ತಿದ್ದು, ಇದರಲ್ಲಿ ಎಲ್ಲೂರು, ಕುಂಜೂರು, ಕುಕ್ಕಿಕಟ್ಟೆಯ 300ಕ್ಕೂ ಅಧಿಕ ಮನೆಗಳಿಗೆ ಎರಡು ದಿನಕ್ಕೊಮ್ಮೆ ನೀರು ಬರುತ್ತಿದೆ.
ಎಲ್ಲೆಲ್ಲಿ ನೀರಿನ ಸಮಸ್ಯೆ
ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಗ್ರಾ.ಪಂ. ಕಛೇರಿ ಬಳಿಯ ಆಶ್ರಯ ಕಾಲನಿ, ಎಲ್ಲೂರು ಪೆಜತ್ತಕಟ್ಟೆ, ಕಂಚುಗರ ಕೇರಿ, ಅದಮಾರು ಪರಿಶಿಷ್ಟ ಜಾತಿ ಕಾಲನಿ, ಅದಮಾರು ಭಂಡಸಾಲೆ, ಮಡಿವಾಳ ತೋಟ, ಕುಂಜೂರು ದುರ್ಗಾ ನಗರ, ಮಾಣಿಯೂರು ಮತ್ತು ಕುಕ್ಕಿಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಕಳೆದ ವರ್ಷ 13 ಲಕ್ಷ ರೂ. ವ್ಯಯಿಸಲಾಗಿದೆ. ಈ ವರ್ಷ 14 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ನೀರಿನ ಶುಲ್ಕ ರೂಪದಲ್ಲಿ ಗ್ರಾಮಸ್ಥರಿಂದ 5.05 ಲಕ್ಷ ರೂ. ಸಂಗ್ರಹವಾಗುತ್ತಿದೆ. ಆದರೂ ಕೆಲವು ಪ್ರದೇಶಗಳಿಗೆ ನೀರು ಪೂರೈಕೆಯಾಗದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಣಿಯೂರು, ಕುಕ್ಕಿಕಟ್ಟೆ ಮತ್ತು ಇರಂದಾಡಿಯಲ್ಲಿ ಖಾಸಗಿ ಮತ್ತು ಪಂಚಾಯತ್ ಅನುದಾನ ಬಳಸಿಕೊಂಡು 3 ಹೊಸ ಬೋರ್‌ವೆಲ್‌ಗಳನ್ನು ತೋಡಲಾಗಿದೆ. ಅದಮಾರು, ಎಲ್ಲೂರು ಮತ್ತು ಕುಂಜೂರಿನಲ್ಲಿ ಖಾಸಗಿ ಸಹಭಾಗಿತÌದೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದ್ದು, ಆ ಭಾಗದ ಗ್ರಾಮಸ್ಥರು ಕಾರ್ಡ್ ಮತ್ತು ಕಾಯಿನ್ ಮೂಲಕ ತಮಗೆ ಅಗತ್ಯವಿರುವಷ್ಟು ಕುಡಿಯುವ ನೀರನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಕಾರಣವೇನು ?
ಅಂತರ್ಜಲ ಕುಸಿತವಾಗಿರುವುದು, ಬೋರ್‌ವೆಲ್‌ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದು, ನೀರಿನ ಲಭ್ಯತೆ ಕಡಿಮೆಯಾಗಿರುವುದು, ಲೋ ವೋಲ್ಟೆàಜ್ ಸಮಸ್ಯೆಯಿಂದಾಗಿ ನೀರಿನ ಸಮಸ್ಯೆ ಬಿಗಡಾಯಿಸಿದೆ.
Related Articles
ಮೂರು ವಾರ್ಡ್‌ಗಳಲ್ಲಿ ನೀರಿನ ತತ್ವಾರ ಎದುರಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲಿನ ಸಮಸ್ಯೆ ಪರಿಹಾರಕ್ಕೆ ತುರ್ತಾಗಿ ಸ್ಪಂದಿಸಲು ಪ್ರಯತ್ನಿಸಲಾಗುತ್ತಿದೆ. ಅದಮಾರು ಮಡಿವಾಳ ತೋಟದ ನೀರಿನ ಸಮಸ್ಯೆ ನಿವಾರಣೆಗೆ ಟಾಸ್ಕ್ಪೋರ್ಸ್‌ನಡಿ ಅನುದಾನ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ.
ಮಮತಾ ಶೆಟ್ಟಿ, ಪಿ.ಡಿ.ಒ. ಎಲ್ಲೂರು ಗ್ರಾಮ ಪಂಚಾಯತ್
Advertisement