Advertisement

ಅಣೆಕಟ್ಟೆಗಳಿದ್ದರೂ ನೀರಿನ ಸಮಸ್ಯೆಗೆ ಸಿಗದ ಮುಕ್ತಿ

05:03 PM Apr 13, 2021 | Team Udayavani |

ಹೊಳೆನರಸೀಪುರ: ಹೊಳೆನರಸೀಪುರ ತಾಲೂಕು ಮೂರು ಹೋಬಳಿಗಳನ್ನು ಹೊಂದಿದ್ದು ಹಳೇಕೋಟೆಮತ್ತು ಕಸಬಾ ಹೋಬಳಿ 14 ಗ್ರಾಪಂ ಹಾಗೂ 12ಗ್ರಾಪಂಗಳನ್ನು ಹೊಂದಿರುವ ಹಳ್ಳಿಮೈಸೂರು ಹೋಬಳಿಯಾಗಿದೆ. ಜತೆಗೆ ಸುಮಾರು 35 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಕುಡಿಯುವ ನೀರಿನ ಸಮಸ್ಯೆಯಿಂದ ಹೊರತಾಗಿಲ್ಲ.

Advertisement

ಕಳೆದ ಹತ್ತಾರು ವರ್ಷಗಳಿಂದ ಹೇಮಾವತಿ ಅಣೆಕಟ್ಟೆ ಬಲಮೇಲ್ದಂಡೆ ಕಾಲುವೆ ವರ್ಷದ 3-4 ತಿಂಗಳಲ್ಲಿ ಮಾತ್ರ ನೀರು ಹರಿಸಲು ಸಾಧ್ಯವಾಗಿರುವುದರಿಂದಸಾಕಷ್ಟು ಕೆರೆಗಳು ತುಂಬಿಸಿದರೆ ಈ ಭಾಗದಲ್ಲಿ ಬರುವ ಬೋರ್‌ವೆಲ್‌ಗ‌ಳಲ್ಲಿ ಅಂತರ್ಜಲ ವೃದ್ಧಿಯಾಗಿ ಅಲ್ಪಸ್ವಲ್ಪ ನೀರಿನ ಬವಣೆ ಕಡಿಮೆ ಆಗಲಿದೆ.

ಕಾರ್ಯರೂಪಕ್ಕೆ: ಪಟ್ಟಣದ ವ್ಯಾಪ್ತಿಯಲ್ಲಿ 35 ಸಾವಿರ ಜನ ಸಂಖ್ಯೆಯುಳ್ಳ 23 ವಾರ್ಡುಗಳು ಇದ್ದು ಈ ವಾರ್ಡುಗಳಲ್ಲಿ ಬರುವ ಪ್ರತಿ ಮನೆಗೂ ಪೈಪ್‌ಗಳ ಮೂಲಕ ನೀರು ಹರಿಸುವಲ್ಲಿ ಪುರಸಭೆ ಯಶಸ್ವಿ ಯಾಗಿದೆ. ದಿನ ಕಳೆದಂತೆ ಪಟ್ಟಣದಲ್ಲಿ ವಾಸಿಸುವವರ ಜನ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಶಾಸಕ ಎಚ್‌. ಡಿ.ರೇವಣ್ಣ ಅವರು ಮುಂದಿನ 50 ವರ್ಷಗಳಲ್ಲಿ ಪಟ್ಟಣದ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ 65 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಎಲ್ಲಾ ವಾರ್ಡುಗಳಿಗೆ ಶಾಶ್ವತ ನೀರು ಕೊಡುವ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿದ್ದು ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಶಾಶ್ವತ ಯೋಜನೆ ಪೂರ್ಣವಾಗಿ ಅನುಷ್ಟಾನಕ್ಕೆ ಬಂದಿದ್ದೇ ಆದಲ್ಲಿ ದಿನದ 24 ಗಂಟೆಯೂ ಪ್ರತಿ ಮನೆ ಮನೆಯಲ್ಲಿಯೂ ನೀರು ದೊರಕುವ ಯೋಜನೆ ಸಾಕಾರಗೊಳ್ಳಲಿದೆ.

ಚೆಕ್‌ ಡ್ಯಾಂ ನಿರ್ಮಾಣ: ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರೇವಣ್ಣ ಅವರು ಮುಂದಾಲೋಚನ  ಯಂತೆ ಶಾಶ್ವತವಾಗಿ ನೀರಿನ ಸಮಸ್ಯೆ ಬಾರದಂತೆ ಮಾಡುವ ಸಲುವಾಗಿ ಕಳೆದ ಐದಾರು ವರ್ಷಗಳ ಹಿಂದೆಯೇ ಹೇಮಾವತಿ ನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ಅನ್ನು ನದಿಗೆ ಆಳವಡಿಸಿ ಕಾರ್ಯರೂಪಕ್ಕೆ ತಂದಿದ್ದಾರೆ. ಹೇಮಾವತಿ ನದಿ ಪಟ್ಟಣದ ಸಮೀಪದಲ್ಲೇ ಹಾದು ಹೋಗಿದ್ದು ಜನತೆಗೆ ನೀರಿನ ಬಿಸಿ ಇನ್ನೂ ತಟ್ಟಿಲ್ಲ, ಜತೆಗೆ ಇಲ್ಲಿನ ಪುರಸಭೆ ತನ್ನ ಸರಹದ್ದಿನಲ್ಲಿ ಬರುವ ಮನೆಗಳಿಗೆ ಯಥೇಚ್ಚವಾಗಿ ನೀರು ನೀಡುತ್ತಿರುವುದರಿಂದ ನೀರಿನ ಬವಣೆ ಬಿಸಿ ಅಷ್ಟಾಗಿ ತಟ್ಟಿಲ್ಲ.

ರಂಗೇನಹಳ್ಳಿ ಏತ ನೀರಾವರಿ: ಹಳೇಕೋಟೆ ಮತ್ತು ಕಸಬಾ ಹೋಬಳಿಗಳಲ್ಲಿನ ಕೆರೆ ಕಟ್ಟೆಗಳು ತುಂಬಲು ಮಳೆಯಾಶ್ರಿತದಿಂದ ಆಗಬೇಕಿದೆ. ಆದರೆ ಹಳ್ಳಿ ಮೈಸೂರು ಭಾಗದ ಕೆರೆಕಟ್ಟೆಗಳಿಗೆ ಹೇಮಾವತಿ ಅಣೆಕಟ್ಟೆ ಮೂಲಕ ನೀರು ತುಂಬಿಸ ಬಹುದಾಗಿದೆ ಎಂಬುದು ಮಾತ್ರ ನೆಮ್ಮದಿಗೆ ಸ್ವಲ್ಪ ಹತ್ತಿರವಾಗಿದೆ. ಜತೆಗೆ ಹಳ್ಳಿಮೈಸೂರು ಹೋಬಳಿ ಯಲ್ಲಿನ ರಂಗೇ ನಹಳ್ಳಿ ಏತ ನೀರಾವರಿ ಕಾಮಗಾರಿ ತ್ವರಿತಗತಿಯಿಂದ ಸಾಗುತ್ತಿದ್ದು, ರಂಗೇನಹಳ್ಳಿ ಸಮೀ ಪದಲ್ಲಿ ನಿರ್ಮಿಸುತ್ತಿ ರುವ ತೊಟ್ಟಿ ಕಾಮಗಾರಿ ಪೂರ್ಣಗೊಂಡರೆ ಹಳ್ಳಿಮೈಸೂರು ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ಮತ್ತು ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಇರಲಾರದು. ಇದಕ್ಕಾಗಿ ಅರಕಲಗೂಡು ಶಾಸಕರಾಗಿದ್ದ ಎ.ಮಂಜು, ಮತ್ತು ಎ.ಟಿ.ರಾಮಸ್ವಾಮಿ ಅವರ ಪ್ರಯತ್ನ ಸಫಲತೆಯತ್ತ ಸಾಗಿರುವುದು ಉತ್ತಮ ಉದಾಹರಣೆ.

Advertisement

ಭರದಿಂದ ಸಾಗಿದ ಪೈಪ್‌ಲೈನ್‌ ಕಾಮಗಾರಿ :

ಪಟ್ಟಣದಲ್ಲಿ 65 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ಅನುಷ್ಠಾನ ಆಗುತ್ತಿರುವ ಕುಡಿಯುವ ನೀರಿನ ಪೈಪ್‌ಗ್ಳ ಅಳವಡಿಕೆ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಕಾಮಗಾರಿ ಅನುಷ್ಠಾನಗೊಂಡಿದ್ದೇ ಆದಲ್ಲಿ ಪಟ್ಟಣದಲ್ಲಿ ನೀರಿಗೆ ಬರ ಎಂಬುದೇ ಇರಲ್ಲ ಎಂಬುದು ತಾಂತ್ರಿಕ ತಜ್ಞರ ಅನಿಸಿಕೆ. ಇದಕ್ಕಾಗಿ ಪಟ್ಟಣದ ಹೊರವಲಯ ಚಿಟ್ಟನಹಳ್ಳಿ ಹೌಸಿಂಗ್‌ ಬೋರ್ಡ್‌ನ ಎತ್ತರ ಪ್ರದೇಶದ ಒಂದಡೆ ನೀರು ಸಂಗ್ರಹಣೆ ಮಾಡಿ ಅಲ್ಲಿಂದಲೇ ಪಟ್ಟಣದ ವಾರ್ಡುಗಳಿಗೆ ನೀರು ಹರಿಸುವ ಬೃಹತ್‌ ಯೋಜನೆಇದಾಗಿದ್ದು ಇಲ್ಲಿಂದ ನೀರು ಹರಿಸಲು ಯಾವೊಂದು ವಾಟರ್‌ ಟ್ಯಾಂಕು ಅವಶ್ಯಕತೆಇಲ್ಲದೆ ಸರಾಗವಾಗಿ ಮನೆ ಮನೆಗಳಿಗೆ ತಲುಪಲಿದೆ. ಪ್ರತಿ ಮನೆ ಮನೆಗೂಮೀಟರ್‌ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಇದರ ಸದುಪಯೋಗಕ್ಕೆ ಇಂತಿಷ್ಟು ಹಣವನ್ನೂ ನಿವಾಸಿಗಳು ತೆತ್ತಬೇಕಾಗಿದೆ.

ಹಳ್ಳಿ ಮೈಸೂರು ಭಾಗದಲ್ಲಿ ನೀರು ಸಿಗೋದು ಕಷ್ಟ :

ತಾಲೂಕಿನ ಹಳೇಕೋಟೆ ಮತ್ತು ಕಸಬಾ ಹೋಬಳಿಗಳಲ್ಲಿ ಶ್ರೀರಾಮದೇವರ ಅಣೆಕಟ್ಟು,ಹೇಮಾವತಿ ಅಣೆಕಟ್ಟೆ ನಾಲೆಗಳು ಹಾದು ಹೋಗಿರುವುದರಿಂದ ರೈತರ ಭೂಮಿಗೆ ಮತ್ತುಕುಡಿಯಲು ಅಲ್ಪ ಸ್ವಲ್ಪ ನೀರಿನ ಬವಣೆ ಇದೆ.ಆದರೆ, ಹಳ್ಳಿ ಮೈಸೂರು ಹೋಬಳಿಗೆ ಸೇರಿದಬಹುತೇಕ ಗ್ರಾಮಗಳು ಬಹಳ ವರ್ಷಗಳಿಂದಬೇಸಿಗೆ ಕಾಲ ಬಂತೆಂದರೆ ಜನ,ಜಾನುವಾರುಗಳಿಗೆ ನೀರು ದೊರಕುವುದುಕಷ್ಟವಾಗುತ್ತಿದೆ. ಹೇಮಾವತಿ ಅಣೆಕಟ್ಟೆ ಬಲದಂಡೆ ಮೇಲ್ಗಾಲುವೆಯಿಂದ ಅಣೆಕಟ್ಟೆ ತುಂಬಿಹರಿಯುವ ವೇಳೆ ಈ ಮೇಲ್ಗಾಲುವೆಯಿಂದ ಹಳ್ಳಿಮೈಸೂರು ಹೋಬಳಿಯಲ್ಲಿ ಬರುವಬಹುತೇಕ ಕೆರೆ, ಸಣ್ಣ ಪುಟ್ಟ ಕಟ್ಟೆಗಳಲ್ಲಿ ನೀರುತುಂಬುವುದರಿಂದ ಈ ಭಾಗದ ರೈತರು ಕೃಷಿ ಚಟುವಟಿಕೆ ಮುಂದುವರಿಸಲಿದ್ದಾರೆ.

ಪಟ್ಟಣದಲ್ಲಿ ಶಾಶ್ವತ ನೀರು ಪೂರೈಕೆ ಪೈಪ್‌ ಅಳವಡಿಕೆ ಭರದಿಂದ ಸಾಗಿದೆ. ಇನ್ನು 3-4 ತಿಂಗಳಲ್ಲಿ ಪೂರ್ಣಗೊಂಡು ಶಾಶ್ವತ ದಿನದ 24 ಗಂಟೆಯೂ ನೀರು ಸರಬರಾಜು ಆಗಲಿದೆ. ಕಳೆದೆಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ಬಿಸಿ ಹೆಚ್ಚಾಗಿದೆ. ಮುಂಗಾರುತಡವಾದಲ್ಲಿ ತಾಲೂಕಿನ ಹಳ್ಳಿಮೈಸೂರು ಹೋಬಳಿಯಲ್ಲಿ ಬರುವಕೆರೆ ಕಟ್ಟೆಗಳಿಂದ ದೂರವಿರುವ ಗ್ರಾಮಗಳಲ್ಲಿ ಕುಡಿವ ಮತ್ತು ಜನ ಜಾನುವಾರು ನೀರಿನ ಸಂಕಷ್ಟ ಅನುಭವಿಸಬೇಕಾಗಬಹುದು. -ಶಾಂತಲಾ, ಪುರಸಭೆ ಮುಖ್ಯಾಧಿಕಾರಿ

 

– ಎನ್‌.ಎಸ್‌.ರಾಧಾಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next