Advertisement

ಪಾಲಿಕೆ ಆಡಳಿತ ವೈಫಲ್ಯದಿಂದ ನೀರಿನ ಸಮಸ್ಯೆ ಉಲ್ಬಣ: ನಾಗರಾಜ್‌

09:08 AM Jun 24, 2020 | Suhan S |

ದಾವಣಗೆರೆ: ಮಹಾನಗರ ಪಾಲಿಕೆಯ ವೈಫಲ್ಯದ ಪರಿಣಾಮ ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಗರಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ದೂರಿದ್ದಾರೆ.

Advertisement

ರಾಜನಹಳ್ಳಿ, ಬಾತಿ, ಕುಂದುವಾಡ ಪಂಪ್‌ಹೌಸ್‌ಗಳಲ್ಲಿನ ಮೋಟಾರ್‌ಗಳನ್ನು ದುರಸ್ತಿ ಮಾಡಿಸಿಲ್ಲ. ನಿಜಲಿಂಗಪ್ಪ ಬಡಾವಣೆಯಲ್ಲೇ 15 ದಿನಗಳಿಂದ ನೀರು ಬಿಟ್ಟಿಲ್ಲ. ಆಡಳಿತ ವರ್ಗದ ಸಂಪೂರ್ಣ ವೈಫಲ್ಯವೇ ನೀರಿನ ಸಮಸ್ಯೆಗೆ ಮೂಲ ಕಾರಣ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿದರು. ಜಿಲ್ಲಾಧಿಕಾರಿಗಳ ಅಧಿಕಾರವಧಿಯಲ್ಲಿ ಫೆ. 7 ರಂದು ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ಕೋವಿಡ್ , ಲಾಕ್‌ ಡೌನ್‌ನಿಂದ ಜನರು ಆರ್ಥಿಕ ತೊಂದರೆಯಲ್ಲಿರುವಾಗ ತೆರಿಗೆ ಕಟ್ಟುವುದು ಬಹಳ ಕಷ್ಟ. ಹಾಗಾಗಿ ಈಗ ತೆರಿಗೆ ಪರಿಷ್ಕರಣೆಯೇ ಬೇಡ. ಒಂದೊಮ್ಮೆ ಮಾಡುವುದಾದರೆ ಮನೆ, ವಾಣಿಜ್ಯಕ್ಕೆ ಕಡಿಮೆ ಪರಿಷ್ಕರಣೆ ಮಾಡಬೇಕು. ಸಾಮಾನ್ಯ ಸಭೆಯಲ್ಲಿ ಈ ವಿಷಯವಾಗಿ ಚರ್ಚೆ ಮಾಡಿ ನಮ್ಮ ವಿರೋಧ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದರು.

ಕೋವಿಡ್ ದಂತಹ ಸಂಕಷ್ಟ ಸಮಯದಲ್ಲಿ ಪೊಲೀಸರು ಹೆಲ್ಮೆಟ್‌ ಹಾಕದವರಿಂದ ದಂಡ ವಸೂಲಿ ಮಾಡುವುದನ್ನೇ ದಂಧೆಯಂತೆ ಮಾಡುತ್ತಿದ್ದಾರೆ. ಮಾಸ್ಕ್ ಕಡ್ಡಾಯ ಮಾಡಲಿ, ಆದರೆ 2-3 ತಿಂಗಳು ಹೆಲ್ಮೆಟ್‌ಗೆ ವಿನಾಯತಿ ನೀಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next