Advertisement

ವಾಟೆಹೊಳೆ ನದಿ ಇದ್ರೂ ನೀರಿಗೆ ಹಾಹಾಕಾರ

03:25 PM Apr 16, 2021 | Team Udayavani |

ಆಲೂರು: ಆಲೂರು ತಾಲೂಕು ಅರೇ ಮಲೆನಾಡುಪ್ರದೇಶದಿಂದ ಕೂಡಿದ್ದು ತಾಲೂಕಿನ ನಾಲ್ಕು ಹೋಬಳಿತಾಲೂಕಿನಲ್ಲಿ 15 ಗ್ರಾಪಂ ಹಾಗೂ ಒಂದು ಪಟ್ಟಣಪಂಚಾಯಿತಿಗಳನ್ನು ಹೊಂದಿದೆ.ಕುಂದೂರು ಹಾಗೂ ಕೆ.ಹೊಸಕೋಟೆ, ಹೋಬಳಿಗಳು ಮಲೆನಾಡು ಭಾಗಗಳಲ್ಲಿ ಸೇರಿಕೊಂಡಿದ್ದು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಕೆಲವು ಕಡೆಗಳಲ್ಲಿಅಂತರ್ಜಲಮಟ್ಟ ತಳದಲ್ಲಿ ಇರುವುದರಿಂದ ರೈತರುತಮ್ಮ ತಮ್ಮ ಗದ್ದೆ, ತೋಟಗಳಲ್ಲಿ ಜರಿಯಾ ನೀರನ್ನೇಆಶ್ರಯಿಸಬೇಕಾದ ಅನಿವಾರ್ಯ ಉಂಟಾಗಿದೆ.

Advertisement

ಈಭಾಗಗಳಲ್ಲಿ ನಿತ್ಯ ಕಾಡಾನೆಗಳ ಉಪಟಳ ಹೆಚ್ಚಿರುವುದರಿಂದ ಮನೆಯಿಂದ ಹೊರ ಹೋಗಿ ನೀರುತರುವೇದೆ ದೊಡ್ಡ ಸಮಸ್ಯೆಯಾಗಿ ಕುಡಿವ ನೀರಿಗೆಹಾಹಾಕಾರ ಉಂಟಾಗಿದೆ.ನದಿ ಇದ್ದರೂ ತಾಲೂಕಿಗಿಲ್ಲ ನೀರು: ಆಲೂರಿನಜೀವನದಿ ವಾಟೆಹೊಳೆ ನದಿ, ಪಾಳ್ಯ ಹಾಗೂ ಆಲೂರುಕಸಬಾ ಹೋಬಳಿಯ ಕೆಲವು ಗ್ರಾಮಗಳಲ್ಲಿ ಹಾದುಹೋಗಿದ್ದರೂ ಸಹ ನದಿ ಪಾತ್ರದಲ್ಲಿರುವ ಗ್ರಾಮಹಾಗೂ ದನ-ಕರುಗಳಿಗೆ ಕುಡಿಯುವ ನೀರು ಹಾಗೂ ಸಣ್ಣಪುಟ್ಟ ಬೆಳೆ ಬೆಳೆಯುವುದು ಹೊರತುಪಡಿಸಿ ತಾಲೂಕಿಗೆ ಪೂರ್ಣ ಪ್ರಮಾಣದಲ್ಲಿ ಕುಡಿಯುವನೀರು ಒದಗಿಸಲು ಇದುವರೆಗೂ ಸಾಧ್ಯವಾಗಿಲ್ಲದಿರುವುದು ದುರದೃಷ್ಟಕರ.

ಇನ್ನೂ ಯಗಚಿ ನದಿ ಆಲೂರು ತಾಲೂಕಿನಹುಣಸವಳ್ಳಿ ಗ್ರಾಮದಲ್ಲಿ ಹಾದು ಹೋಗಿರುವುದರಿಂದಪಟ್ಟಣ ಪಂಚಾಯಿತಿಯಿಂದ ನದಿಗೆ ಅಡ್ಡಲಾಗಿ ಒಡ್ಡನ್ನುನಿರ್ಮಿಸಿ ಅದೇ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಮಾತ್ರಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತಿದೆ.

ವಿದ್ಯುತ್‌ ಕಣ್ಣು ಮುಚ್ಚಾಲೆ: ತಾಲೂಕಿನ ಮಗ್ಗೆ ಗ್ರಾಮಹೊರತುಪಡಿಸಿ ಬೇರೆಲ್ಲೂ ವಿದ್ಯುತ್‌ ವಿತರಣಾಕೇಂದ್ರಗಳು ಇಲ್ಲದಿರುವುದರಿಂದ ವೋಲ್ಟೆàಜ್‌ವ್ಯತ್ಯಾಸದಿಂದ ವಿದ್ಯುತ್‌ ಪರಿವರ್ತಕಗಳು ಆಗಿಂದಾಗ್ಗೆಸುಟ್ಟು ಹೋಗುವುದರಿಂದ ವಿದ್ಯುತ್‌ ಅಭಾವ ಹೆಚ್ಚುತ್ತಿದ್ದು ಕುಡಿವ ನೀರಿಗೆ ಅಭಾವ ಸೃಷ್ಟಿಯಾಗಿದೆ. ತಾಲೂಕಿನಲ್ಲಿ ಈ ಹಿಂದೆ 150 ರಿಂದ 200 ಅಡಿಕೊಳವೆ ಬಾವಿ ಕೊರೆಸಿದರೇ ಸಾಕಷ್ಟು ನೀರುಬರುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ 800ರಿಂದ 900 ಅಡಿ ಕೊರೆದರೂ ಕೊಳವೆ ಬಾವಿಯಲ್ಲಿನೀರು ಬರುತ್ತಿಲ್ಲ ಎತ್ತಿನಹೊಳೆ ಕಾಮಗಾರಿ ಮುಗಿದನಂತರ ಇದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಜನಸಾಮಾನ್ಯರು.

ನೀರಿನ ಸಮಸ್ಯೆ ಇರುವ ತಾಲೂಕಿನ ಗ್ರಾಮಗಳು: ತಾಲೂಕಿನ ಬೈರಾಪುರ ಗ್ರಾಪಂನಕೆಂಚನಹಳ್ಳಿ, ಬಿಜ್ಜನಹಳ್ಳಿ, ಹೊತ್ನಹಳ್ಳಿಪುರ,ಹಾಂಜಿಹಳ್ಳಿ, ಪಾಳ್ಯ ಗ್ರಾಪಂನ ಹೊನ್ನವಳ್ಳಿ, ಎಂ.ಎಚ್‌.ಪುರ. ಮಡಬಲು ಗ್ರಾಪಂನ ಲಕ್ಷ್ಮೀಪುರ,ಮಡಬಲು, ತಿಪ್ಲಾಪುರ, ಕದಾಳು ಗ್ರಾಪಂನಹಂಪನಕುಪ್ಪೆ ದೊಡ್ಡ ಕಣಗಾಲ್‌ ಗ್ರಾಪಂನ ಮುದಿಗೆರೆ, ಹುಣಸವಳ್ಳಿ ಗ್ರಾಪಂನ ಹೊಳೆ ಬೆಳ್ಳೂರು,ಮಲ್ಲಾಪುರ ಗ್ರಾಪಂನ ಕಾಡೂÉರು, ಕಿತ್ತಗಳಲೆ,ಕುಂದೂರು ಗ್ರಾಪಂನ ಸಾಣೆನಹಳ್ಳಿ, ಹಂಚೂರುಗ್ರಾಪಂನ ಕಟ್ಟೆಗದ್ದೆ, ಕಗ್ಗರವಳ್ಳಿ, ಮೂಡ್ನಹಳ್ಳಿ, ಮಗ್ಗೆಗ್ರಾಪಂನ ಬಸವನಪುರ ಕೊಪ್ಪಲು, ಗಂಜಿಗೆರೆಗ್ರಾಪಂ ಕ್ಯಾತನಹಳ್ಳಿ, ಕಾರಗೋಡು ಗ್ರಾಪಂನಪುರಬೈರವನಹಳ್ಳಿ, ಮಗ್ಗೆ ಗ್ರಾಪಂನ ಬಸವನಪುರಕೊಪ್ಪಲು, ಕಣತೂರು ಗ್ರಾಪಂ ವಿರುಪಾಪುರ,ಸಿದ್ದಾಪುರ ಮರಸು ಕೊಪ್ಪಲು ಬಾವಿ ಕೊಪ್ಪಲುಕೊಡಗಿಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನಸಮಸ್ಯೆ ಎದುರಾಗಿದೆ.

Advertisement

ಟಿ.ಕೆ.ಕುಮಾರಸ್ವಾಮಿ ಆಲೂರು

Advertisement

Udayavani is now on Telegram. Click here to join our channel and stay updated with the latest news.

Next