Advertisement
ತಾಲೂಕಿನ ಕೊಯಿರಾ ಗ್ರಾಮದಲ್ಲಿ ಸಾರ್ವಜನಿಕರ ಸಹಕಾರದಿಂದ 19.05 ಎಕರೆ ಪ್ರದೇಶದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಮಾತನಾಡಿ, ಕೆರೆಯ ನೀರು ಮತ್ತು ಕುಡಿಯುವ ನೀರಿಗಾಗಿ ಮಾತ್ರ ಬಳಸಲಾಗುತ್ತಿತ್ತು, ಆದರೆ ಈಗ ಜಿಲ್ಲೆಯಲ್ಲಿ ಸ್ಥಾಪನೆ ಆಗಿರುವ ಕಂಪನಿಗಳು, ಕೈಗಾರಿಗಳಿಗೂ ಸಹ ಎಲ್ಲಾ ರೀತಿಯ ಬಳಕೆಗೆ ಅಂರ್ತ ಜಲ ನೀರನ್ನೇ ಅವಲಂಭಿಸಿದೆ ಎಂದರು.
Related Articles
Advertisement
ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರೇ ಮುಂದೆ ಬಂದಿದ್ದರಿಂದ ಸಾರ್ವಜನಿಕರ ಸಹಕಾರ ಪಡೆದು ಹೂಳೆತ್ತುವ ಕಾರ್ಯವನ್ನು ಮಾಡುತ್ತಿದ್ದೇವೆ. ಸಾರ್ವಜನಿಕ ಸಹಕಾರ ಇರುವುದರಿಂದ ಹಲವಾರು ವರ್ಷಗಳಿಂದ ಹೂಳೆತ್ತದೇ ಇರುವ ಕೆರೆಗಳನ್ನು ಹೂಳೆತ್ತುವಂತೆ ಆಗಿದೆ.
ಸಹಕಾರಕ್ಕೆ ಶ್ಲಾಘನೀಯ: ಪ್ರತಿ ದಿನ ಜೆಸಿಬಿ, ಲಾರಿ, ಹಿಟಾಚಿ, ಟ್ರ್ಯಾಕ್ಟರ್ ನಿರ್ವಹಿಸಿದೆ ಹಾಗೂ ದಾನಿಗಳು ಎಷ್ಟು ಹಣ ನೀಡಿದ್ದಾರೆ ಮತ್ತು ಎಷ್ಟು ಖರ್ಚಾಗಿದೆ ಎಂಬ ಲೆಕ್ಕ ಪುಸ್ತಕವನ್ನು ಇಟ್ಟು ಅದರ ನಿರ್ವಹಣೆ ಮಾಡುತ್ತಿದ್ದೇವೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಿದ್ದಾರೆ. ಜನಪ್ರತಿನಿಧಿಗಳ ಸಹಕಾರದಿಂದ ಲಾರಿ, ಜೆಸಿಬಿ ತರಿಸಿ ಸರ್ಕಾರದ ಒಂದು ರೂ ಹಣವಿಲ್ಲದೆ. ಜನರೇ ಸ್ವಂತ ಖರ್ಚಿನಲ್ಲಿ ಕೆರೆ ಹೂಳೆತ್ತುವ ಕಾರ್ಯ ಮಾಡುವ ಸಹಕಾರ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹೊಳೆತ್ತುವ ಕೆಲಸ ಅಷ್ಟು ಸುಲಭದಲ್ಲ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಫೇಟ್ ಮಾತನಾಡಿ, ಗ್ರಾಮಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಕೆರೆ ಹೂಳೆತ್ತುವ ಕಾರ್ಯ ಮಾಡುತ್ತಿರುವುದು ಪುಣ್ಯದ ಕೆಲಸವಾಗಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಮಳೆಯಿಲ್ಲದೆ ಬರಗಾಲದ ಸ್ಥಿತಿಯಲ್ಲಿ ನೀರಿಗೆ ಪರದಾಡುವ ಸ್ಥಿತಿ ಇದೆ.
ಸರ್ಕಾರದಿಂದ ಬಿಡಿಗಾಸು ನಿರೀಕ್ಷೆ ಮಾಡದೆ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಎತ್ತಿಸುವುದು ಅಷ್ಟು ಸುಲಭವಲ್ಲ. ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಸ್ಥಳೀಯರ ಸಹಕಾರದೊಂದಿಗೆ ನೆರವು ಅತಿ ಮುಖ್ಯ ವಾಗಿದೆ ಜಿಲ್ಲಾಧಿಕಾರಿಗಳು ಕೆರೆ ಹೂಳೆತ್ತುವ ಕಾರ್ಯ ಮಾಡಿ ಸಾರ್ವಜನಿಕರ ಅನುಲಕೂಲ ವಾಗುವಂತೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗೆ ಮನವಿ: ಗ್ರಾಮದ ಮುಖಂಡ ಚಿಕ್ಕೇಗೌಡ ಮಾತನಾಡಿ, ಸರ್ವೇ ನಂ 67/ಪಿ 3 ನಲ್ಲಿ 4.33 ಗುಂಟೆ ಸ್ಮಶಾನ ಜಾಗವಿದ್ದು ಆ ಜಾಗ ಒತ್ತುವರಿ ಯಾಗಿದೆ. ಸರ್ಕಾರ ಈ ಕೂಡಲೇ ಸರ್ವೇ ಕಾರ್ಯ ಮಾಡಿ ಒತ್ತುವರಿ ಯಾಗಿರುವ ಸ್ಮಶಾನ ಜಾಗವನ್ನು ತೆರವು ಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಡಿವೈಎಸ್‌ಪಿ ಮೋಹನ್ ಕುಮಾರ್, ವೃತ್ತ ನಿರೀಕ್ಷಕ ಪ್ರಕಾಶ್, ವಿಶ್ವನಾಥ ಪುರ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್, ಕಾರ್ಮಿಕ ಇಲಾಖೆ ನಿರೀಕ್ಷಕ ರವಿಕುಮಾರ್, ಹಾಗೂ ಗ್ರಾಮಸ್ಥರು ಇದ್ದರು.